• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಪತಿ ಚುನಾವಣೆ: 16 ಮಂದಿ ಕಾಂಗ್ರೆಸ್‌ ಶಾಸಕರಿಂದ ಅಡ್ಡ ಮತದಾನ

|
Google Oneindia Kannada News

ಗುವಾಹಟಿ,ಜುಲೈ.22: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ರಾಜ್ಯದಲ್ಲಿ ವಿರೋಧ ಪಕ್ಷಗಳಿಂದ 22 ಮತಗಳು ಬಂದಿದ್ದು, ಅದರಲ್ಲಿ 15-16 ಮಂದಿ ಕಾಂಗ್ರೆಸ್‌ನವರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಹೇಳಿದ್ದಾರೆ.

ಜುಲೈ 18 ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 126 ವಿಧಾನಸಭೆಯ ಸದಸ್ಯರಲ್ಲಿ 124 ಶಾಸಕರು ತಮ್ಮ ಮತ ಚಲಾಯಿಸಿದ್ದರು. ಉಳಿದಂತೆ ಎಐಯುಡಿಎಫ್‌ನ ಇಬ್ಬರು ಶಾಸಕರು ದೇಶದಿಂದ ಹೊರಗಿದ್ದರು. ಅಸ್ಸಾಂನಲ್ಲಿ ಎನ್‌ಡಿಎಯ 79 ಸಂಖ್ಯಾಬಲಕ್ಕೆ ಹೋಲಿಸಿದರೆ, ಮುರ್ಮು 104 ಮತಗಳನ್ನು ಗಳಿಸಿದರೆ, ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ 20 ಪಡೆದರು.

ಅಸ್ಸಾಂ ರಾಜ್ಯ ವಿಧಾನಸಭೆಯಲ್ಲಿ 44 ವಿರೋಧ ಪಕ್ಷದ ಶಾಸಕರಿದ್ದಾರೆ. ಎನ್‌ಡಿಎ ಅಭ್ಯರ್ಥಿ ಪಡೆದ 22 ಹೆಚ್ಚುವರಿ ಮತಗಳಲ್ಲಿ, 15 ರಿಂದ 16 ಕಾಂಗ್ರೆಸ್‌ನಿಂದ ಮತ್ತು ಉಳಿದವು ಎಐಯುಡಿಎಫ್ ಅಥವಾ ಸ್ವತಂತ್ರ ಪಕ್ಷದಿಂದ ಇರಬಹುದು ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಅಸ್ಸಾಂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದೆ ಎಂದು ಒಪ್ಪಿಕೊಂಡರು. ಆದರೆ, ಸಿಎಂ ಹಿಮಂತ್ ಬಿಸ್ವಾ ಆರೋಪಿಸಿದಂತೆ 16 ಮಂದಿ ಅಡ್ಡ ಮತದಾನ ಮಾಡಿಲ್ಲ. ಕೇವಲ ಆರು ಶಾಸಕರು ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

"ಅಧ್ಯಕ್ಷೀಯ ಚುನಾವಣೆಯಲ್ಲಿ, ಶಾಸಕರು ಮತ್ತು ಸಂಸದರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆ ಮತ್ತು ಅವರ ಪಕ್ಷಗಳ ಸದಸ್ಯತ್ವಕ್ಕೆ ಅನುಗುಣವಾಗಿ ಅಲ್ಲ. ನಾನು ಹೆಚ್ಚು ಹೇಳಲು ಅಥವಾ ಮತದಾನದ ಮಾದರಿಯಲ್ಲಿ ಯಾವುದೇ ರಾಜಕೀಯ ವಿವಾದವನ್ನು ಸೃಷ್ಟಿಸಲು ಬಯಸುವುದಿಲ್ಲ. ಈ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ವಿಭಜನೆ ಇರುತ್ತದೆ ಎಂದು ನಾನು ನಂಬುವುದಿಲ್ಲ," ಎಂದಿರುವ ಅಸ್ಸಾಂ ಜನತೆಗೆ ಸಿಎಂ ಹಿಮಂತ ಬಿಸ್ವಾ, ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿಯ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

"ಯಶವಂತ ಸಿನ್ಹಾ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ ಸಭೆಯಲ್ಲಿ, ಒಟ್ಟಾರೆಯಾಗಿ 24 ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಸಿಪಿಐ(ಎಂ) ಶಾಸಕ ಮತ್ತು ಒಬ್ಬ ಪಕ್ಷೇತರ ಶಾಸಕರು ತಮ್ಮ ಬೆಂಬಲ ನೀಡಿದ್ದರು. ಅವರಲ್ಲಿ ಕೆಲವರು ಆಡಳಿತ ಪಕ್ಷದೊಂದಿಗೆ ಸಂಪರ್ಕವನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ. ಪಕ್ಷವು ಅವರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ," ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ತಿಳಿಸಿದರು.

 ಎಐಯುಡಿಎಫ್ ಶಾಸಕರಿಂದಲೂ ಮುರ್ಮುಗೆ ಮತ

ಎಐಯುಡಿಎಫ್ ಶಾಸಕರಿಂದಲೂ ಮುರ್ಮುಗೆ ಮತ

ವಿರೋಧ ಪಕ್ಷದ ಶಾಸಕರು ಮುರ್ಮು ಅವರಿಗೆ ಮತ ಹಾಕಿದ್ದಾರೆಯೇ ಎಂಬ ಪ್ರಶ್ನೆಗೆ, ಬೋರಾ ಅವರು, ಇತರ ಪಕ್ಷಗಳು ಏನು ಮಾಡಿದವು ಎಂಬುದನ್ನು ಪರಿಶೀಲಿಸುವ ಮೊದಲು, ವಿರೋಧ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದ ನಮ್ಮ ಶಾಸಕರೊಂದಿಗೆ ನಾವು ಮಾತನಾಡಬೇಕಿದೆ ಎಂದು ಹೇಳಿದರು.

 20 ಕಾಂಗ್ರೆಸ್ ಸದಸ್ಯರಿಂದ ಮತ

20 ಕಾಂಗ್ರೆಸ್ ಸದಸ್ಯರಿಂದ ಮತ

ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ತಮ್ಮ ಪಕ್ಷವು ಮುರ್ಮು ಅವರನ್ನು ಬೆಂಬಲಿಸುತ್ತದೆ ಎಂದು ಮೊದಲೇ ಘೋಷಿಸಿದ್ದರು. ಆದರೆ ಅಧ್ಯಕ್ಷೀಯ ಚುನಾವಣೆಗೆ ಒಂದು ದಿನ ಮೊದಲು ವಿರೋಧ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದ್ದರು. ಚುನಾವಣೆಯ ದಿನದಂದು, ಎಐಯುಡಿಎಫ್ ಶಾಸಕ ಕರಿಮುದ್ದೀನ್ ಬರ್ಭುಯಾ ಅವರು 20 ಕಾಂಗ್ರೆಸ್ ಸದಸ್ಯರು ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಸಾಕ್ಷ್ಯವಿದೆ ಎಂದು ಹೇಳಿದ್ದರು.

 ಎನ್‌ಡಿಎಯಿಂದ 79 ಶಾಸಕರ ಮತ

ಎನ್‌ಡಿಎಯಿಂದ 79 ಶಾಸಕರ ಮತ

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ರಾಜ್ಯ ವಿಧಾನಸಭೆಯಲ್ಲಿ 15 ಶಾಸಕರನ್ನು ಹೊಂದಿದೆ. ಆದರೆ ಅವರಲ್ಲಿ ಇಬ್ಬರು ದೇಶದಲ್ಲಿ ಇಲ್ಲದ ಕಾರಣ ಚುನಾವಣೆಯಲ್ಲಿ ಮತ ಚಲಾಯಿಸಲಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ 79 ಶಾಸಕರನ್ನು ಹೊಂದಿದ್ದು, ಸದನದಲ್ಲಿ ಮೈತ್ರಿಯನ್ನು ಬೆಂಬಲಿಸುವ ಮೂವರು ಬಿಪಿಎಫ್ ಸದಸ್ಯರು ಸಹ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ.

 ಯಶವಂತ್‌ ಸಿನ್ಹಾಗೆ ಸಿಪಿಎಂ ಬೆಂಬಲ

ಯಶವಂತ್‌ ಸಿನ್ಹಾಗೆ ಸಿಪಿಎಂ ಬೆಂಬಲ

ಕಾಂಗ್ರೆಸ್ 27 ಶಾಸಕರನ್ನು ಹೊಂದಿದೆ. ಆದರೆ ಅವರಲ್ಲಿ ಮೂವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಂದ ಅಮಾನತುಗೊಳಿಸಲಾಗಿದೆ ಮತ್ತು ಅವರು ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನೂ ಸಿಪಿಐ(ಎಂ) ಶಾಸಕ ಮತ್ತು ಸ್ವತಂತ್ರ ಸದಸ್ಯರು ಯಶವಂತ್‌ ಸಿನ್ಹಾ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದರು. ಚುನಾವಣೆಯಲ್ಲಿ ಮುರ್ಮು ಅಗಾಧ ಅಂತರದಿಂದ ಗೆದ್ದು, ರಾಮ್ ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯಾಗಿ ದೇಶದ 15 ನೇ ರಾಷ್ಟ್ರಪತಿಯಾಗಲು, ಚುನಾವಣಾ ಕಾಲೇಜನ್ನು ಒಳಗೊಂಡಿರುವ ಸಂಸದರು ಮತ್ತು ಶಾಸಕರು ಚಲಾಯಿಸಿದ ಶೇಕಡಾ 64 ಕ್ಕಿಂತ ಹೆಚ್ಚು ಮಾನ್ಯ ಮತಗಳನ್ನು ಪಡೆದರು.

English summary
Assam Chief Minister Himanta Biswa Sharma on Friday said that 15-16 of the 22 opposition MLAs in the state who voted for NDA candidate Draupadi Murmu defied their party line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X