• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಅಸ್ಸಾಂನಲ್ಲಿ ಬಾಂಗ್ಲಾ ಮೂಲದ ಉಗ್ರ ಜಾಲ ಭೇದಿಸಿದ ಪೊಲೀಸರು

|
Google Oneindia Kannada News

ಗುವಾಹಟಿ, ಜುಲೈ 28: ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ಟೀಮ್ (ಎಬಿಟಿ) ಜತೆ ನಂಟು ಹೊಂದಿರುವ 10 ಮಂದಿಯನ್ನು ಬಂಧಿಸುವ ಮೂಲಕ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿರುವುದಾಗಿ ಅಸ್ಸಾಂ ಪೊಲೀಸರು ಗುರುವಾರ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಬಾರ್‌ಪೇಟಾ ಜಿಲ್ಲೆಯಲ್ಲಿ ಘಟಕವನ್ನು ಭೇದಿಸಲಾಗಿದೆ. ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಹಲವರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ (ವಿಶೇಷ ಶಾಖೆ) ಹಿರೇನ್ ನಾಥ್ ಎಎನ್‌ಐಗೆ ತಿಳಿಸಿದ್ದಾರೆ.

ಬಾರ್ಪೇಟಾ ಜಿಲ್ಲೆಯಿಂದ ಏಳು ಮಂದಿ, ಮೊರಿಗಾಂವ್ ಜಿಲ್ಲೆಯ ಮೊಯಿರಾಬರಿ ಪ್ರದೇಶದಿಂದ ಹಾಗೂ ಗುವಾಹಟಿ ಮತ್ತು ಬೊಂಗೈಗಾಂವ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಿದ್ದೇವೆ. ಇನ್ನೂ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಡಿಜಿಪಿ (ವಿಶೇಷ ಶಾಖೆ) ಹಿರೇನ್ ನಾಥ್‌ ಹೇಳಿದರು.

ಬಂಧನದ ವೇಳೆ ಪೊಲೀಸರು ಕೆಲವು ದೋಷಾರೋಪಣೆಯ ಸಾಹಿತ್ಯ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಯಿರಾಬರಿ ಪ್ರದೇಶದಿಂದ ಬಂಧಿತ ವ್ಯಕ್ತಿಯೂ ಮದರಸಾ ನಡೆಸುತ್ತಿದ್ದ ಎಂದು ಅಸ್ಸಾಂನ ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಹಿರೇನ್ ನಾಥ್ ಹೇಳಿದ್ದಾರೆ.

ಇದೇ ಜುಲೈ 14ರಂದು ಬಿಹಾರದ ಪಾಟ್ನಾದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಪೊಲೀಸರ ಪ್ರಕಾರ ಉಗ್ರರಿಗೆ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ತರಬೇತಿ ನೀಡಲಾಗುತ್ತಿತ್ತು ಎಂದು ವರದಿಗಳು ಪ್ರಕಟವಾಗಿದ್ದವು.

ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಬಿಹಾರ ಭೇಟಿಯ ಸಂದರ್ಭದಲ್ಲಿ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಸಂಚು ಕೂಡ ರೂಪಿಸಲಾಗಿತ್ತು. ಬಂಧಿತ ಜೋಡಿಯನ್ನು ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಎಂದು ಗುರುತಿಸಲಾಗಿತ್ತು.

English summary
Assam Police on Thursday said it has busted a major terror cell by arresting 10 people with links to Bangladesh-based militant outfit Ansarullah Bangla Team (ABT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X