ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಪ್ರವಾಹ ಎದುರಿಸಲು ಶಾಶ್ವತ ಪರಿಹಾರ: ಸಿಎಂ ಶರ್ಮಾ

|
Google Oneindia Kannada News

ಗುವಾಹಟಿ,ಜು.13: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚಿರಾಂಗ್‌ ಜಿಲ್ಲೆಗೆ ಭೇಟಿ ನೀಡಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ನಿಜ್ಲಾ ನದಿಯಿಂದ ಉಂಟಾದ ಪ್ರವಾಹದ ನಂತರದ ನದಿಯಿಂದ ಉಂಟಾದ ಪ್ರವಾಹ ಮರುಕಳಿಸದಂತೆ ರಾಜ್ಯ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಒಟ್ಟು ಸಾವಿನ ಸಂಖ್ಯೆ ಈಗ 190ಕ್ಕೆ ಏರಿದೆ. ಗುರುವಾರದಿಂದ ಪೀಡಿತ ಜಿಲ್ಲೆಗಳ ಸಂಖ್ಯೆ ಎರಡರಷ್ಟು ಹೆಚ್ಚಾಗಿದೆ. ಭೂತಾನ್‌ನಿಂದ ಹರಿಯುವ ಮಳೆಯಾಶ್ರಿತ ನಿಜ್ಲಾ ನದಿಯಿಂದ ದೊಡ್ಡ ಪ್ರಮಾಣದ ಹಾನಿ ಉಂಟಾದ ಪರಿಣಾಮ ಚಿರಾಂಗ್‌ ಜಿಲ್ಲೆಯ ಪ್ರವಾಹ ಪೀಡಿತ ಲಾಖ್ರಿಗುರಿ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ಜಲಸಂಪನ್ಮೂಲ ಇಲಾಖೆಯು ನಿಜ್ಲಾ ನದಿಯಿಂದ ಉಂಟಾದ ಪ್ರವಾಹ ಮತ್ತು ಸವೆತಕ್ಕೆ ಶಾಶ್ವತ ಪರಿಹಾರ ಸಂಬಂಧ ಒಂದು ಯೋಜನೆಯನ್ನು ಕೈಗೊಳ್ಳಲಿದೆ. ಇಲಾಖೆಯಿಂದ ಯೋಜನೆ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ ಶಾಶ್ವತವಾಗಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 190ಕ್ಕೆ ಏರಿಕೆ- ಹೊಸ ಪ್ರದೇಶಗಳು ಜಲಾವೃತಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 190ಕ್ಕೆ ಏರಿಕೆ- ಹೊಸ ಪ್ರದೇಶಗಳು ಜಲಾವೃತ

ಸಿಎಂ ಶರ್ಮಾ ಅವರು ಚಿರಾಂಗ್‌ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಅಲ್ಲದೆ, ಪ್ರವಾಹದ ನಂತರದ ಹಾನಿಯ ಅವಲೋಕನ ನಡೆಸಿದ ಅವರು, ಜಿಲ್ಲೆಯ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನದ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಎಂಜಿಎನ್‌ಆರ್‌ಇಜಿಎ, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಯೋಜನೆಗಳ ಪರಿಸ್ಥಿತಿಯನ್ನು ಅವಲೋಕಿಸಿದರು.

 ಚಿರಾಂಗ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ

ಚಿರಾಂಗ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ

ಇದಲ್ಲದೆ, ಕೌಶಲ್ಯ ಉನ್ನತೀಕರಣಕ್ಕಾಗಿ, ಅವರು ಆದಿವಾಸಿಗಳ ಗ್ರಾಮಗಳ ಸಮಗ್ರ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಿದ್ಧಪಡಿಸುವಂತೆ ಚಿರಾಂಗ್ ಜಿಲ್ಲಾಧಿಕಾರಿ ನರೇಂದ್ರ ಕುಮಾರ್ ಶಾ ಅವರಿಗೆ ತಿಳಿಸಿ, ಪ್ರತಿ ಗ್ರಾಮದಿಂದ ಐದು ಆದಿವಾಸಿ ಯುವಕರನ್ನು ಗುರುತಿಸಿ ಕೌಶಲ್ಯ ವೃದ್ಧಿಗೆ ತರಬೇತಿ ನೀಡುವಂತೆ ತಿಳಿಸಿದರು. ಚಿರಾಂಗ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆಗಳಿಗೆ ತುತ್ತಾಗುವ ಗ್ರಾಮಗಳ ಮೇಲೆ ನಿರಂತರ ನಿಗಾ ವಹಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

ಅಸ್ಸಾಂನಲ್ಲಿ ನಿಲ್ಲದ ಪ್ರವಾಹ: ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಹಿಮಂತ್ ಶರ್ಮಾ ಭೇಟಿಅಸ್ಸಾಂನಲ್ಲಿ ನಿಲ್ಲದ ಪ್ರವಾಹ: ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಹಿಮಂತ್ ಶರ್ಮಾ ಭೇಟಿ

 ಓದುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು

ಓದುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು

ಮುಖ್ಯಮಂತ್ರಿ ಶರ್ಮಾ ತಮ್ಮ ಭೇಟಿಯ ಭಾಗವಾಗಿ ಲೌಖ್ರಿಗುರಿ ಎಲ್‌ಪಿ ಶಾಲೆಯಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಕ್ಕೂ ತೆರಳಿದರು. ಅಲ್ಲಿ ಸುಮಾರು 50 ಕುಟುಂಬಗಳು ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾಗಿದ್ದವು. ಈ ವೇಳೆ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದ ಅವರು, ಅವರ ಪುನರ್ವಸತಿಗಾಗಿ ಸರ್ಕಾರವು ಅವರಿಗೆ ಮತ್ತು ಅವರ ಓದುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದರು.

 ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನೆ

ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನೆ

ಪ್ರವಾಹ ಪೀಡಿತ ಚಿರಾಂಗ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೋಡೋಲ್ಯಾಂಡ್ ಇಲಾಖೆಯ ಕಲ್ಯಾಣ ಸಚಿವ ಯುಜಿ ಬ್ರಹ್ಮಾ, ಸಂಸದ ರುಂಗ್ವ್ರಾ ನರ್ಜಾರಿ, ಶಾಸಕರಾದ ಜಯಂತ ಬಸುಮತರಿ, ಅಜಯ್ ಕುಮಾರ್ ರಾಯ್ ಸಹ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಶರ್ಮಾ ಬೊಂಗೈಗಾಂವ್ ಜಿಲ್ಲೆಯ ಸೃಜನ್‌ಗ್ರಾಮ್ ಕಂದಾಯ ವೃತ್ತದ ಅಡಿಯಲ್ಲಿ ಟಿಂಕೋನಿಯಾ ಭಾಗ-1 (ಗೋಬಿಂದಾಪುರ) ಗೆ ಭೇಟಿ ನೀಡಿದರು ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು ಮತ್ತು ಸಂತ್ರಸ್ತ ಕುಟುಂಬಗಳೊಂದಿಗೆ ಸಂವಾದ ನಡೆಸಿದರು.

 ರಾಜ್ಯ ಸರ್ಕಾರದಿಂದ ಯೋಜನೆ

ರಾಜ್ಯ ಸರ್ಕಾರದಿಂದ ಯೋಜನೆ

ಮಾಲೆಗಾರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಭೆಯಲ್ಲಿ ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ಜನರಿಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಟಿಂಕೋನಿಯಾ ಭಾಗ-1 (ಗೋಬಿಂದಾಪುರ) ನಲ್ಲಿ ಪ್ರವಾಹ ರಕ್ಷಣೆಗಾಗಿ ರಾಜ್ಯ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಮಾಣಿಕ್‌ಪುರ, ಸೃಜನ್‌ಗ್ರಾಮ್ ಇತ್ಯಾದಿಗಳ ಸವೆತ ಪೀಡಿತ ಪ್ರದೇಶಗಳಿಗೆ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬೊಂಗೈಗಾಂವ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ರಂಜೀತ್ ಕುಮಾರ್ ದಾಸ್, ಡಿಸಿ ನಬದೀಪ್ ಪಾಠಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Recommended Video

ಏಕದಿನ‌ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಗೆ ಮಣ್ಣು ಮುಕ್ಕಿಸಿ ಇತಿಹಾಸ ಬರೆದ ಟೀಂ‌ ಇಂಡಿಯಾ | *Cricket | OneIndia

English summary
Assam Chief Minister Himanta Biswa Sharma visited Chirang district and said that the state government will take up a plan to prevent recurrence of river flooding in the district especially after the floods caused by river Nijla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X