ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಟು ಟೀಕಾಕಾರರಾಗಿದ್ದ ಹಾರ್ದಿಕ್‌ ಈಗ ಅದೇ ಮಡಿಲಿಗೆ

|
Google Oneindia Kannada News

ಗುಜರಾತ್‌, ಜೂ. 2: ತನ್ನ ತಾಯಿ ನೆಲ ಗುಜರಾತ್‌ನಲ್ಲಿ ದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ನಡುಗಿಸಿದ್ದ ಪ್ರಬಲ ಸಮುದಾಯದ ಒಬ್ಬ ಸಾಮಾನ್ಯ ಹುಡುಗ ಇಂದು ಅದೇ ಪಕ್ಷಕ್ಕೆ ಸೇರುತ್ತಿದ್ದಾರೆ. ತಾನು ಕಾಂಗ್ರೆಸ್‌ನಲ್ಲಿಅಷ್ಟಾಗಿ ನೆಲೆ ಕಂಡುಕೊಳ್ಳಲಾಗಲಿಲ್ಲ ಎಂದು ಭಾವಿಸಿದ ಇದೇ ಹಾರ್ದಿಕ್‌ ಪಟೇಲ್‌ ಈಗ ಬಿಜೆಪಿ ಸೇರಲು ಅಣಿಯಾಗಿದ್ದಾರೆ.

ಅಧಿಕಾರದ ವ್ಯಾಮೋಹ ಹಾಗೂ ರಾಜಕೀಯ ಲಾಭಗಳು ಎಂತವರನ್ನು ಎಂತಹದೇ ಸಿದ್ಧಾಂತ ಆಗಿದ್ದರೂ ಅದು ಪರಿಗಣನೆಗೆ ಬರುವುದಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗುತ್ತಿದೆ. ಫೈರ್‌ ಬ್ರಾಂಡ್‌ ಎಂದು ರಾಜಕೀಯ ವಲಯದಲ್ಲಿ ಬಣ್ಣಿಸಲಾಗಿದ್ದ ಹುಡುಗ ಹಾರ್ದಿಕ್‌ ಪಟೇಲ್‌ ಅವರು ಗುರುವಾರ ತಾವೇ ಕೆಡವಲು ನಿರ್ಧರಿಸಿದ್ದ ಪಕ್ಷ ಬಿಜೆಪಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

ಆಧಾರ್‌ನಿಂದ ಸರಕಾರಕ್ಕೆ 2 ಲಕ್ಷಕೋಟಿ ಉಳಿತಾಯ: ನೀತಿ ಆಯೋಗಆಧಾರ್‌ನಿಂದ ಸರಕಾರಕ್ಕೆ 2 ಲಕ್ಷಕೋಟಿ ಉಳಿತಾಯ: ನೀತಿ ಆಯೋಗ

ಭಾರತದ ಗೃಹ ಸಚಿವರಾದ ಅಮಿತ್‌ ಶಾ ಬಗ್ಗೆ 1200 ಕೋಟಿ ಅಕ್ರಮದ ಆರೋಪ ಹೊರಿಸಿದ್ದ ಹಾರ್ದಿಕ್‌ ಪಟೇಲ್‌ ಅವರು ಅವಾಗವಾಗ ಅವರನ್ನು ಜನರಲ್‌ ಡಯರ್‌ ಎಂದು ಕರೆಯುತ್ತಿದ್ದರು. ಅಲ್ಲದೆ ಬಹುಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಇದೀಗ ದಾರಿಯ ಹಿಂದೆ ತಿರುಗಿರುವ ಅವರು 370 ನೇ ವಿಧಿಯನ್ನು ಕಾಶ್ಮೀರದಲ್ಲಿ ಹಿಂತೆಗೆದುಕೊಂಡ ವಿಚಾರ ಸೇರಿದಂತೆ ಬಿಜೆಪಿ ಸರಕಾರವನ್ನು ಹೊಗಳಿದ್ದಾರೆ. ಅದೇ ಸಮಯದಲ್ಲಿ ತಮ್ಮ ಮಾತೃ ಪಕ್ಷ ಕಾಂಗ್ರೆಸ್‌ ಅನ್ನು ಹಿಂದೂ ವಿರೋಧಿ, ಗುಜರಾತ್‌ ವಿರೋಧಿ ಎಂದೆಲ್ಲಾ ಟೀಕೆ ಮಾಡುತ್ತಿದ್ದಾರೆ.

 ಗುಜರಾತ್‌ನ ಜಿಗ್ನೇಶ್ ಮೇವಾನಿಯ ಉದಯ

ಗುಜರಾತ್‌ನ ಜಿಗ್ನೇಶ್ ಮೇವಾನಿಯ ಉದಯ

ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ಜುಲೈ 2015 ರಲ್ಲಿ ಪ್ರಾರಂಭವಾದ ಹಾರ್ದಿಕ್ ಪಟೇಲ್ ಅವರ ಪ್ರಬಲ ಆಂದೋಲನವು ಸ್ವತಃ ಪಾಟಿದಾರ್ ಆಗಿದ್ದ ಗುಜರಾತ್‌ನ ಮೊದಲ ಮಹಿಳಾ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಮೇಲೆ ಅಪಾರ ಪರಿಣಾಮ ಬೀರಿತು. ಜುಲೈ 2016 ರಲ್ಲಿ ಉನಾ ಪಟ್ಟಣದಲ್ಲಿ ದಲಿತರ ವಿರುದ್ಧದ ಆಘಾತಕಾರಿ ದೌರ್ಜನ್ಯವು ಈ ಆಂದೋಲನದ ಪ್ರಕ್ರಿಯೆಯನ್ನು ತ್ವರಿತಗೊಳಿಸಿತು. ಇದೇ ಗುಜರಾತ್‌ನ ಜಿಗ್ನೇಶ್ ಮೇವಾನಿಯ ಉದಯವು ಈ ಸಂದರ್ಭದಲ್ಲಿ ಆಯಿತು. ಈ ಇದೇ ಹಿನ್ನೆಲೆಯಲ್ಲಿ ಅಲ್ಪೇಶ್ ಠಾಕೋರ್ ಹೊರಹೊಮ್ಮಿದರು. ಪಾಟಿದಾರರು, ಒಬಿಸಿಗಳು ಮತ್ತು ದಲಿತರನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಲು ಕಾಂಗ್ರೆಸ್‌ಗೆ ಇದು ಒಂದು ಅನನ್ಯ ಅವಕಾಶವನ್ನು ಒದಗಿಸಿತು. ಇದು ಗುಜರಾತ್‌ನ ರಾಜಕೀಯ ಇತಿಹಾಸದಲ್ಲೇ ಅಭೂತಪೂರ್ವವಾದ ಸಂದರ್ಭವಾಗಿ ಗೋಚರವಾಯಿತು.

ಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿ

 ಬಿಜೆಪಿ ಪಕ್ಷದ ನಾಗಲೋಟವನ್ನು ತಡೆಯಲಾಗುತ್ತಿಲ್ಲ

ಬಿಜೆಪಿ ಪಕ್ಷದ ನಾಗಲೋಟವನ್ನು ತಡೆಯಲಾಗುತ್ತಿಲ್ಲ

2017ರ ಚುನಾವಣೆಯಲ್ಲಿ ಯಾರ ಬೆಂಬಲದಿಂದ ಜಿಗ್ನೇಶ್ ಗೆದ್ದಿದ್ದರೋ ಈಗ ಅವರು ಕಾಂಗ್ರೆಸ್ ತೆಕ್ಕೆಗೆ ಬಂದಿದ್ದಾರೆ. ಗುಜರಾತ್‌ನಲ್ಲಿ ಕೇವಲ 7% ದಲಿತ ಮತದಾರರನ್ನು ಹೊಂದಿರುವ ಜಿಗ್ನೇಶ್ ಬಿಜೆಪಿಗೆ ಕೇವಲ ದೊಡ್ಡ ಕಟಂಕವಾಗಿದ್ದಾರೆ. ಆದರೆ ಗುಜರಾತ್ ವಿಧಾನಸಭೆಯ 182 ಸ್ಥಾನಗಳಲ್ಲಿ 149 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನ 1985 ರ ದಾಖಲೆಯನ್ನು ಮುರಿಯಲು ಹಾತೊರೆಯುವ ಬಿಜೆಪಿ ಪಕ್ಷದ ನಾಗಲೋಟವನ್ನು ತಡೆಯಲಾಗುತ್ತಿಲ್ಲ. 2017ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ 13 ಸ್ಥಾನಗಳಲ್ಲಿ 7ರಲ್ಲಿ ಬಿಜೆಪಿ ಗೆದ್ದಿದೆ. ಈಗಾಗಲೇ ವಡ್ಗಾಮ್‌ನಿಂದ 2012ರ ಕಾಂಗ್ರೆಸ್ ವಿಜೇತ ಮಣಿಭಾಯ್ ವಘೇಲಾ ಅವರು ಜಿಗ್ನೇಶ್‌ ಮೇವಾನಿ ಸ್ವತಂತ್ರವಾಗಿ ಸ್ಪರ್ಧಿಸಲು ತಮ್ಮ ಸ್ಥಾನವನ್ನು ಖಾಲಿ ಮಾಡಬೇಕಾಗಿತ್ತು.

 ಕಾಂಗ್ರೆಸ್ ಚುನಾವಣೆಯಲ್ಲಿ ಶೂನ್ಯ ಸಾಧನೆ

ಕಾಂಗ್ರೆಸ್ ಚುನಾವಣೆಯಲ್ಲಿ ಶೂನ್ಯ ಸಾಧನೆ

ಫೆಬ್ರವರಿ 2021ರಲ್ಲಿ ತನ್ನ ಬೆಂಬಲಿಗರಿಗೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಟಿಕೆಟ್‌ಗಳನ್ನು ಸಹ ಪಡೆಯಲು ಸಾಧ್ಯವಾಗದಿದ್ದಾಗ ಹಾರ್ದಿಕ್ ಪಟೇಲ್ ಪಾಟಿದಾರ್ ಆಂದೋಲನದ ಸಮಯದಲ್ಲಿ ಅವರು ಗಳಿಸಿದ್ದ ಉನ್ನತ ಸ್ಥಾನದಿಂದ ಈಗಾಗಲೇ ಕುಸಿಯ ತೊಡಗಿದ್ದಾರೆ. ಇದರ ಪರಿಣಾಮವಾಗಿ ಅವರದೇ ಆದ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (PAAS) ನಾಯಕರು ಕೆರಳಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ 24 ಪಟೇಲ್ ಅಭ್ಯರ್ಥಿಗಳು ಮತ್ತು OBCಯ ಮೂವರು ಚುನಾವಣೆಯಲ್ಲಿ 27 ಸ್ಥಾನಗಳನ್ನು ವಶಪಡಿಸಿಕೊಂಡರು. ಕಾಂಗ್ರೆಸ್ ಈ ವೇಳೆ ಶೂನ್ಯ ಸಾಧನೆ ಮಾಡಿತು.

 2019ರಲ್ಲಿ ಕಾಂಗ್ರೆಸ್ ತೊರೆಯುವ ನಿರ್ಧಾರ

2019ರಲ್ಲಿ ಕಾಂಗ್ರೆಸ್ ತೊರೆಯುವ ನಿರ್ಧಾರ

2017ರಲ್ಲಿ ಮೇವಾನಿ ಸೇರಿದಂತೆ 78 ಸ್ಥಾನಗಳಲ್ಲಿ ಕಾಂಗ್ರೆಸ್‌ನ ಅತ್ಯುತ್ತಮ ಸಾಧನೆಗೆ ಕಾರಣಕರ್ತರಾಗಿದ್ದಾಗ ಹಾರ್ದಿಕ್ ಸುಮಾರು ಒಂದು ವರ್ಷದವರೆಗೆ ಕಾಂಗ್ರೆಸ್ ಅನ್ನು ಉತ್ತುಂಗ ಸ್ಥಾನದಲ್ಲಿ ಇರಿಸಿದರು. ಬಳಿಕ ತನಗೆ ಅರ್ಹತೆ ನೀಡಲಾಗಿಲ್ಲ ಎಂದು ನಿರಂತರವಾಗಿ ಕೆಣಕಿದರು. ಕುತೂಹಲಕಾರಿವೆಂಬಂತೆ 2019ರಲ್ಲಿ ಕಾಂಗ್ರೆಸ್ ತೊರೆಯುವ ಅವರ ನಿರ್ಧಾರದ ಮೊದಲು ಅವರ ಎಲ್ಲಾ ದೂರುಗಳು ಮತ್ತು ಅವುಗಳನ್ನು ತಿಳಿಸಲು ಅವರು ಬಳಸಿದ ಮಾತುಗಳು ಅಲ್ಪೇಶ್ ಠಾಕೋರ್ ಅವರೊಂದಿಗೆ ಗಮನಾರ್ಹ ಹೋಲಿಕೆ ಕಂಡುಬಂದವು.

ಪಾಟಿದಾರ್ ಮತದಾರರು ಆಡಳಿತ ಪಕ್ಷದಲ್ಲಿ

ಕಾಂಗ್ರೆಸ್ ಪಕ್ಷದ ವ್ಯವಸ್ಥಿತ ಸಮಸ್ಯೆ ಮತ್ತು ನಿರ್ದೇಶನದ ಕೊರತೆಯಿಂದ ಬಳಲುತ್ತಿದ್ದರೂ, ಹಾರ್ದಿಕ್ ಪಟೇಲ್ ಅವರು ಗುಜರಾತ್ ಕಾಂಗ್ರೆಸ್‌ನ ಅತ್ಯಂತ ಕಿರಿಯ ಕಾರ್ಯಾಧ್ಯಕ್ಷ ಮತ್ತು ನಿಜವಾದ ಪೋಸ್ಟರ್ ಬಾಯ್ ಎಂಬ ಕಾರಣದಿಂದ ಕಾಂಗ್ರೆಸ್‌ ಅನ್ನು ತೆಗಳಲು ಸ್ವಲ್ಪ ಸಮರ್ಥನೆಯನ್ನು ಹೊಂದಿದ್ದರು. ಮತ್ತೊಂದೆಡೆ ಬಿಜೆಪಿಗೆ ಹಾರ್ದಿಕ್ ಬದಲಿಗೆ ಪಟೇಲ್ ಮುಖದ ಅಗತ್ಯವಿಲ್ಲ. ಏಕೆಂದರೆ ಪಕ್ಷವು ಅವರಿಂದಲೇ ತುಂಬಿದೆ ಮತ್ತು ಹೆಚ್ಚಿನ ಸಂಖ್ಯೆಯ ಪಾಟಿದಾರ್ ಮತದಾರರು ಆಡಳಿತ ಪಕ್ಷದಲ್ಲಿದ್ದಾರೆ. 2021ರ ಫೆಬ್ರವರಿ- ಮಾರ್ಚ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಇದಕ್ಕೆ ಇತ್ತೀಚಿನ ಸಾಕ್ಷಿಯಾಗಿದೆ.

ಯಾವ ತರ್ಕದಿಂದ ಅಲ್ಪೇಶ್ ಠಾಕೂರ್ ಅವರನ್ನು ದೂಷಿಸಿದರೋ ಅದೇ ಲಾಜಿಕ್‌ನೊಂದಿಗೆ ಹಾರ್ದಿಕ್ ಅವರನ್ನು ನಿಗ್ರಹಿಸಲು ಬಿಜೆಪಿ ಹಾರ್ದಿಕ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದೆ ಎಂದು ಮೂಲಗಳು ಹೇಳುತ್ತವೆ. ಠಾಕೂರ್ 2017 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಧನ್‌ಪುರದಿಂದ ಗೆದ್ದರು ಮತ್ತು ನಂತರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಅದೇ ಕ್ಷೇತ್ರದಿಂದ ಸೋತರು. ಪಟೇಲ್ ತಮ್ಮ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಮತ್ತು ಶಾಸಕರಾಗಲು ಹಾರ್ದಿಕ್‌ಗೆ ಇದು ಸಾಧ್ಯತೆಯು ಇದೆ ಎನ್ನಲಾಗಿದೆ.

English summary
An ordinary boy hardik patel from a powerful community who had won the big national party BJP in Gujarat, his mother, is joining the party today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X