ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಾಂಗ್ಲಾದೇಶದಿಂದ ಒಬ್ಬರನ್ನೂ ಅಸ್ಸಾಂ ಒಳಗೆ ಬಿಟ್ಟುಕೊಳ್ಳುವುದಿಲ್ಲ"

|
Google Oneindia Kannada News

ಗುವಾಹಟಿ, ಡಿಸೆಂಬರ್.20: ಬಾಂಗ್ಲಾದೇಶದ ಒಬ್ಬರೇ ಒಬ್ಬ ವ್ಯಕ್ತಿಯನ್ನು ಕೂಡಾ ಅಸ್ಸಾಂನಲ್ಲಿ ಬಿಟ್ಟುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವ್ಯಾಪ್ತಿ ಪ್ರತಿಭಟನೆ ನಡೆಯುತ್ತಿದೆ. ಇದರ ಮಧ್ಯೆ ಸ್ಪಷ್ಟನೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ವಲಸಿಗರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಗುಜರಾತ್ ನಲ್ಲಿ ಪೊಲೀಸರ ಜೀಪ್ ಶೇಕ್, 3 ಸಾವಿರ ಮಂದಿ ವಿರುದ್ಧ ಎಫ್ಐಆರ್ಗುಜರಾತ್ ನಲ್ಲಿ ಪೊಲೀಸರ ಜೀಪ್ ಶೇಕ್, 3 ಸಾವಿರ ಮಂದಿ ವಿರುದ್ಧ ಎಫ್ಐಆರ್

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿರುವ ಅಸ್ಸಾಂ ಸಿಎಂ, ಬಾಂಗ್ಲಾದೇಶದಿಂದ ವಲಸೆ ಬರುವ ಒಬ್ಬರಿಗೂ ಅಸ್ಸಾಂನಲ್ಲಿ ನೆಲೆಸಲು ಜಾಗ ನೀಡುವುದಿಲ್ಲ ಎಂದಿದ್ದಾರೆ. ಅಸ್ಸಾಂನ ಪ್ರಜೆಗಳ ಭಾಷೆ ಹಾಗೂ ಹಕ್ಕಿಗೆ ಯಾವುದೇ ಧಕ್ಕೆ ಬಾರದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

Not A Single Person Of Bangladesh Will Get To Enter Assam

"ಈಗಾಗಲೇ ವಲಸೆ ಬಂದವರಿಗೆ ಭಾರತದ ಪೌರತ್ವ"

ಬಾಂಗ್ಲಾದೇಶದಿಂದ ದಶಕಗಳ ಹಿಂದೆ ವಲಸೆ ಬಂದವರಿಗೆ ದೇಶದ ಪೌರತ್ವವನ್ನು ನೀಡುವ ಬಗ್ಗೆ ಪೌರತ್ವ ತಿದ್ದುಪಡಿ ಕಾಯ್ದೆ ಉಲ್ಲೇಖಿಸಿದೆ. ಅದೇ ವಿಚಾರದ ಬಗ್ಗೆ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲಾ ಸ್ಪಷ್ಟನೆ ನೀಡಿದ್ದಾರೆ. ನೆರೆ ರಾಷ್ಟ್ರದಲ್ಲಿ ಧಾರ್ಮಿಕ ಕಿರುಕುಳದಿಂದ ನೊಂದು ದಶಕಗಳ ಹಿಂದೆಯೇ ಅಸ್ಸಾಂಗೆ ವಲಸೆ ಬಂದಿರುವ ಮುಸ್ಲಿಮೇತರ ಪ್ರಜೆಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಅಸ್ಸಾಂನ ಮೂಲ ನಿವಾಸಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ರಾಜ್ಯ ಗೃಹ ಸಚಿವರ ಸಂದೇಶಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ರಾಜ್ಯ ಗೃಹ ಸಚಿವರ ಸಂದೇಶ

ಪೌರತ್ವಕ್ಕಾಗಿ ಒಮ್ಮ ಅರ್ಜಿ ಸಲ್ಲಿಸಿದರೆ ಸಾಕು, ಸರ್ಕಾರವೇ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಅಸ್ಸಾಂನ ಮೂಲ ಕಲೆ ಸಂಸ್ಕೃತಿ ಸಂಪ್ರದಾಯಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಸುಳ್ಳು ವದಂತಿಗಳಿಗೆ ರಾಜ್ಯದ ಜನರು ಕಿವಿಗೊಡಬೇಕಾದ ಅಗತ್ಯವಿಲ್ಲ ಎಂದು ಕರೆ ನೀಡಿದ್ದಾರೆ.

ಇನ್ನು, ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಕುರಿತು ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲಾ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಗೂ ಮುನ್ನ ಆರೋಗ್ಯಕರ ಹಾಗೂ ಶಾಂತಿಯುತ ಚರ್ಚೆಗೆ ನಾಯಕರು ಮುಂದಾಗಬೇಕು. ಶಾಂತಿ ಮಾತುಕತೆಯಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ.

English summary
Citizenship Amendment Act: "Not A Single Person Of Bangladesh Will Get To Enter Assam - CM Sarbananda Sonowal Clarification On CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X