ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಹೆಸರು ಮೋದಿ ಅಲ್ಲ, ನಾನಂತೂ ಮೋದಿ ಅಲ್ಲವೇ ಅಲ್ಲ; ರಾಹುಲ್

|
Google Oneindia Kannada News

ಗುವಾಹಟಿ, ಮಾರ್ಚ್ 31: "ನನ್ನ ಹೆಸರು ನರೇಂದ್ರ ಮೋದಿಯಲ್ಲ. ನಿಮಗೆ ಸುಳ್ಳುಗಳನ್ನು ಹೇಳಲು ನಾನಿಲ್ಲಿಗೆ ಬಂದಿಲ್ಲ. ಅಸ್ಸಾಂ ಜನರ ಬಗ್ಗೆ, ರೈತರ ಬಗ್ಗೆ ಅಥವಾ ಇನ್ನಿತರ ಯಾವುದೇ ವಿಷಯಗಳ ಕುರಿತು ಮೋದಿ ಸುಳ್ಳು ಹೇಳುವುದನ್ನು ಕೇಳಲು ನೀವು ಬಯಸಿದರೆ ಟಿ.ವಿ ಆನ್ ಮಾಡಿ ಸಾಕು. ಭಾರತಕ್ಕೆ 24/7 ಮೋದಿ ಸುಳ್ಳು ಹೇಳುತ್ತಲೇ ಇರುತ್ತಾರೆ. ನಿಮಗೆ ಸತ್ಯ ಬೇಕೆಂದಿದದ್ದರೆ ನನ್ನ ಮಾತು ಕೇಳಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿ ಕುರಿತು ಸಾಲು ಸಾಲು ಟೀಕೆಗಳನ್ನು ಮಾಡಿದ್ದಾರೆ.

ಅಸ್ಸಾಂನ ಚಾಯ್‌ಗಾವ್ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಬಿಜೆಪಿ ಮೇಲೆ ವಾಗ್ದಾಳಿ ನಡೆಸಿ, ನಿಮಗೆ ಸತ್ಯ ಬೇಕೆಂದರೆ ನನ್ನ ಮಾತನ್ನು ಕೇಳಿ ಎಂದು ಜನರನ್ನುದ್ದೇಶಿಸಿ ಮಾತನಾಡಿದರು. ಈ ಹಿಂದೆ ನಿಮಗೆ ಭರವಸೆ ನೀಡಿದಂತೆ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರೇ ಗಂಟೆಗಳಲ್ಲಿ ಕೃಷಿ ಸಾಲ ಮನ್ನಾ ಮಾಡಿತು. ಯುಪಿಎ ಸರ್ಕಾರ 70 ಸಾವಿರ ಕೋಟಿ ಕೃಷಿ ಸಾಲವನ್ನು ಮನ್ನಾ ಮಾಡಿತು ಎಂದು ಸಮರ್ಥಿಸಿಕೊಂಡರು. ಮುಂದೆ ಓದಿ...

"ಬಿಜೆಪಿ ಹೊರಗಿನವರಿಗೆ ಚಹಾ ತೋಟ ಮಾರುತ್ತಿದೆ"

ಬೇರೆ ಬೇರೆ ಭಾಷೆಯ, ಸಂಸ್ಕೃತಿಯ ಆಲೋಚನೆಯ ಜನರು ನನ್ನ ಮಾತನ್ನು ಕೇಳುತ್ತಿದ್ದಾರೆ. ಅಸ್ಸಾಂ ಎಂದರೆ ಇದು. ಆದರೆ ಬಿಜೆಪಿ ಸಹೋದರರ ನಡುವೆಯೇ ಜಗಳ ತರುತ್ತಿದೆ. ದ್ವೇಷ ಸೃಷ್ಟಿಸುತ್ತಿದೆ. ಹೊರಗಿನರಿಗೆ ಇಲ್ಲಿನ ಚಹಾ ತೋಟಗಳನ್ನು ಗುತ್ತಿಗೆ ನೀಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಬಿಜೆಪಿಯಂತಲ್ಲ, ಚುನಾವಣೆ ವೇಳೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ: ರಾಹುಲ್ ಗಾಂಧಿಕಾಂಗ್ರೆಸ್ ಬಿಜೆಪಿಯಂತಲ್ಲ, ಚುನಾವಣೆ ವೇಳೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ: ರಾಹುಲ್ ಗಾಂಧಿ

"ದೆಹಲಿಯಲ್ಲಿ ಕುಳಿತು ರಾಜ್ಯ ಆಳುವುದಿಲ್ಲ"

ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಿನ ಜನರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ದೆಹಲಿಯಲ್ಲೋ ನಾಗಪುರದಲ್ಲೋ ಕುಳಿತು ರಾಜ್ಯದ ಆಳ್ವಿಕೆ ಮಾಡುವುದಿಲ್ಲ ಎಂದ ಅವರು, ಇಲ್ಲಿನ ಚಹಾ ಕಾರ್ಮಿಕರು, ಯುವಜನರು ಹಾಗೂ ಮಹಿಳೆಯರ ಕುರಿತು ಐದು ಭರವಸೆಗಳನ್ನು ಕಾಂಗ್ರೆಸ್ ಪೂರೈಸಲಿದೆ ಎಂದು ಹೇಳಿದರು.

"ನಿಮ್ಮೆಲ್ಲಾ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧ"

ಜನರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಯುವಜನರಗೆ ಕೆಲಸ ಸಿಗಬೇಕು. ಚಹಾ ಕಾರ್ಮಿಕರ ಕನಿಷ್ಠ ವೇತನವನ್ನು ರೂ365ಕ್ಕೆ ಏರಿಸಬೇಕು. ಗೃಹಿಣಿಯರಿಗೆ 2000 ರೂ ಭತ್ಯೆ ಸಿಗಬೇಕು. ಈ ಎಲ್ಲಾ ಬೇಡಿಕೆಗಳನ್ನು ನಾವು ಒಪ್ಪಿಕೊಂಡಿದ್ದೇವೆ. ನಮ್ಮ ಮುಖ್ಯಮಂತ್ರಿ ಅವೆಲ್ಲವನ್ನೂ ಪೂರೈಸುತ್ತಾರೆ ಎಂದು ಹೇಳಿದರು.

ಅಸ್ಸಾಂ: ಸಿಎಎ ಹೊರತಾಗಿ ಚಹಾ ಕಾರ್ಮಿಕರಿಗೆ ರಾಹುಲ್ ಗಾಂಧಿ ಸಿಹಿಸುದ್ದಿಅಸ್ಸಾಂ: ಸಿಎಎ ಹೊರತಾಗಿ ಚಹಾ ಕಾರ್ಮಿಕರಿಗೆ ರಾಹುಲ್ ಗಾಂಧಿ ಸಿಹಿಸುದ್ದಿ

 ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ

ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ

ಮೋದಿ ನೌಕರಿ ಸೃಷ್ಟಿಸುವ ಎಲ್ಲಾ ದಾರಿಗಳನ್ನು ಮುಚ್ಚಿದ್ದಾರೆ. ನಮ್ಮ ವಿಮಾನ ನಿಲ್ದಾಣ, ಚಹಾ ತೋಟ, ತೈಲ ಕಂಪನಿಗಳನ್ನೂ ತಮ್ಮ ಉದ್ಯಮಿ ಸ್ನೇಹಿತರಿಗೆ ವಹಿಸಿದ್ದಾರೆ ಎಂದು ದೂರಿದರು. ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಗುರುವಾರ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 6ರಂದು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
My name is not narendra modi. I have'nt come here to lie to you said Congress leader Rahul Gandhi in Assam election rally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X