ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯ : ಗಣಿ ಕಾರ್ಮಿಕರ ರಕ್ಷಣೆಗೆ ನೌಕಾಪಡೆ ತಂಡ ರವಾನೆ

|
Google Oneindia Kannada News

ಗುವಾಹಟಿ, ಡಿಸೆಂಬರ್ 28 : ಮೇಘಾಲಯದಲ್ಲಿ ಕಲ್ಲಿದ್ದಲಿನ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ರಕ್ಷಣೆಗೆ ನೌಕಾಪಡೆ 15 ಸದಸ್ಯರ ತಂಡವನ್ನು ಕಳುಹಿಸಿದೆ. ಎರಡು ವಾರಗಳಿಂದ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾರ್ಯಾಚರಣೆಗೆ ಆಗಮಿಸಿರುವ ತಂಡ ವಿಶೇಷ ಉಪಕರಣಗಳನ್ನು ತಂದಿದೆ. ನೀರಿನಾಳದಲ್ಲಿ ಚಿತ್ರೀಕರಣ ಮಾಡಬಹುದಾದ ರಿಮೋಟ್ ಮೂಲಕ ನಿಯಂತ್ರಸುವ ವಿಶೇಷ ಸಾಧನಗಳನ್ನು ತರಲಾಗಿದೆ.

ಎರಡು ವಾರವಾದರೂ ಪತ್ತೆಯಾಗದ ಮೇಘಾಲಯದ ಗಣಿ ಕಾರ್ಮಿಕರುಎರಡು ವಾರವಾದರೂ ಪತ್ತೆಯಾಗದ ಮೇಘಾಲಯದ ಗಣಿ ಕಾರ್ಮಿಕರು

ವಿಶೇಷ ತಂಡದ ಮೂರು ಜನರು ಈಗಾಗಲೇ ಗಣಿ ಇರುವ ಪ್ರದೇಶವನ್ನು ತಲುಪಿದ್ದಾರೆ. ಉಳಿದ ಸದಸ್ಯರು 12 ಗಂಟೆಗಳಲ್ಲಿ ಅಲ್ಲಿಗೆ ತಲುಪಲಿದ್ದಾರೆ ಎಂದು ನೌಕಾಪಡೆ ಹೇಳಿದೆ. ಖುದ್ದು ನೌಕಾಪಡೆಯೇ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲಿದೆ.

ನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲ

Meghalaya mine tragedy: Navy divers to join rescue operations

ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯ ಲುಂಥಾರಿ ಕಲ್ಲಿದ್ದಲಿನ ಗಣಿಯಲ್ಲಿ 15 ಕಾರ್ಮಿಕರು ಎರಡು ವಾರಗಳಿಂದ ಸಿಲುಕಿದ್ದಾರೆ. ಗಣಿಯೊಳಗೆ ನೀರು ನುಗ್ಗಿದ್ದು, ಅದನ್ನು ಹೊರಹಾಕಲಾಗುತ್ತಿದೆ. ನೀರು ತುಂಬಿರುವುದರಿಂದಲೇ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.

ಗಣಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ನೀರನ್ನು ಹೊರ ಹಾಕಲು ಬೇಕಿರುವ ಅಧಿಕ ಸಾಮರ್ಥ್ಯದ ಪಂಪ್‌ಗಳನ್ನು ಒದಗಿಸಲು ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ ಮುಂದೆ ಬಂದಿದೆ. ಕಂಪನಿಯ ತಜ್ಞರ ತಂಡ ಈಗಾಗಲೇ ಸ್ಥಳಕ್ಕೆ ತೆರಳಿದೆ.

English summary
Indian Navy is deploying a 15 member diving team from Visakhapatnam to assist in rescue operations for missing miners in Meghalaya. Indian Navy is deploying a 15 member diving team from Visakhapatnam to assist in rescue operations for missing miners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X