ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ಪರ ಪ್ರಬಲ ಅಲೆ ನನ್ನ ಅನುಭವಕ್ಕೆ ಬರುತ್ತಿದೆ ಎಂದ ಪ್ರಧಾನಿ ಮೋದಿ

|
Google Oneindia Kannada News

ಸಿಲ್ಚಾರ್ (ಅಸ್ಸಾಂ), ಏಪ್ರಿಲ್ 11: ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಗುರುವಾರ 'ಮೋದಿ ಸರಕಾರದ ದೊಡ್ಡ ಮಟ್ಟದ ಅಲೆ' ನನಗೆ ಅನುಭವಕ್ಕೆ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯಾವ ಕಡೆಗೆ ಗಾಳಿ ಬೀಸುತ್ತಿದೆ ಎಂಬುದು ನಿಮ್ಮ ಉತ್ಸಾಹದಿಂದ ಗೊತ್ತಾಗುತ್ತದೆ. ದೇಶದ ಕೆಲ ಭಾಗದಲ್ಲಿ ಮೊದಲ ಹಂತದ ಮತದಾನ ಈ ದಿನ ನಡೆದಿದೆ. ಈ ವರೆಗೆ ನಮಗೆ ಗೊತ್ತಾಗಿರುವುದು ಏನೆಂದರೆ, ಫಿರ್ ಏಕ್ ಬಾರ್ ಮೋದಿ ಸರಕಾರ್ ಎಂಬ ಜಬರ್ದಸ್ತ್ ಅಲೆ ನನಗೆ ಕಾಣಿಸುತ್ತಿದೆ ಎಂದು ಅಸ್ಸಾಂನ್ ಸಿಲ್ಚಾರ್ ನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅಸ್ಸಾಮ್ ನಲ್ಲಿ ಎಲ್ಲ ಐದು ಸ್ಥಾನಗಳಲ್ಲಿ ಜಯಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರು ಚಹಾದ ರುಚಿ ಮಾತ್ರ ಸವಿಯಬಲ್ಲರು. ಅವರಿಗೆ ಚಹಾದ ಎಲೆ ಕತ್ತರಿಸುವ ವೇಳೆಯಲ್ಲಿ ಹೇಗೆ ಕೈ ಕತ್ತರಿಸುತ್ತದೆ ಅಥವಾ ಕೆಮಿಕಲ್ ಗಳು ಹೇಗೆ ಕಾಯಿಲೆ ತರುತ್ತವೆ ಎಂಬುದು ಅರ್ಥವಾಗಲ್ಲ" ಎಂದಿದ್ದಾರೆ.

Massive Modi government wave sensed in first phase of elections, said PM

ಈ ಹಿಂದೆ ನಾನು ಅಂದುಕೊಂಡಿದ್ದೆ: ನಾನೊಬ್ಬ ಚಾಯ್ ವಾಲಾ ಅನ್ನೋ ಕಾರಣಕ್ಕೆ ವಾಗ್ದಾಳಿ ನಡೆಸುತ್ತಾರೆ. ಆದರೆ ಕಾಂಗ್ರೆಸ್ ಅಸ್ಸಾಂ ಮತ್ತು ಬಂಗಾಲದ ಟೀ ಗಾರ್ಡನ್ ಕಡೆಗೂ ದಶಕಗಟ್ಟಲೆ ಕಣ್ಣೆತ್ತಿಯೂ ನೋಡಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅಂಗಡಿ ಮುಚ್ಚುವ ಭಯದಲ್ಲಿದೆ 'ಬೆರಕೆ ಕೂಟ'ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅಂಗಡಿ ಮುಚ್ಚುವ ಭಯದಲ್ಲಿದೆ 'ಬೆರಕೆ ಕೂಟ'

ಅಂದಹಾಗೆ, ಏಪ್ರಿಲ್ ಹನ್ನೊಂದರ ಗುರುವಾರದಂದು ಹದಿನೆಂಟು ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಸುತ್ತಿನ ಮತದಾನ ಆಗಿದೆ. ಮೇ ಹತ್ತೊಂಬತ್ತನೇ ತಾರೀಕು ಏಳನೇ ಸುತ್ತಿನ ಮತದಾನ ಕೊನೆ ಆಗುತ್ತದೆ. ಮೇ ಇಪ್ಪತ್ಮೂರನೇ ತಾರೀಕು ಫಲಿತಾಂಶ ಘೋಷಣೆ ಆಗಲಿದೆ.

English summary
Prime Minister Narendra Modi said Thursday that he sensed a "massive Modi government wave" as parts of India voted in the first round of the national election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X