ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿ

|
Google Oneindia Kannada News

ಗುವಾಹಟಿ, ಜೂನ್ 9: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಲ್ಲಿರುವ ಭಾಗ್ ಜನ್ ನೈಸರ್ಗಿಕ ತೈಲ, ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Recommended Video

ಚಿರು ಜಾತಕದಲ್ಲಿದ್ದ ದೋಷದ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು? | Chiranjeevi Sarja's Horoscope

ಹಾಗ್ನೋಡಿದ್ರೆ, 13 ದಿನಗಳಿಂದಲೂ ಈ ಬಾವಿಯಿಂದ ಗ್ಯಾಸ್ ಲೀಕ್ ಆಗುತ್ತಲೇ ಇತ್ತು. ಮೇ 29 ರಿಂದ ಸೋರಿಕೆಯಾಗುತ್ತಿದ್ದ ಅನಿಲವನ್ನು ನಿಯಂತ್ರಿಸುವಷ್ಟರಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಗ್ಯಾಸ್ ಸೋರಿಕೆಯಾಗಿಲ್ಲ; ನಿಟ್ಟುಸಿರು ಬಿಟ್ಟ ಮುಂಬೈ ಜನರುಗ್ಯಾಸ್ ಸೋರಿಕೆಯಾಗಿಲ್ಲ; ನಿಟ್ಟುಸಿರು ಬಿಟ್ಟ ಮುಂಬೈ ಜನರು

ಸೋರಿಕೆ ಆಗುತ್ತಿದ್ದ ಅನಿಲವನ್ನು ನಿಯಂತ್ರಿಸಲು ಸಿಂಗಾಪುರ್ ನಿಂದ ಮೂವರು ಪರಿಣಿತರು ಆಗಮಿಸಿದ್ದರು. ಇವರು ಆಯಿಲ್ ಇಂಡಿಯಾ ಮತ್ತು ಒ.ಎನ್.ಜಿ.ಸಿ ತಂಡಗಳೊಂದಿಗೆ ಅನಿಲ ಸೋರಿಕೆ ಬಗ್ಗೆ ಚರ್ಚಿಸಿದ್ದರು. ಹೀಗಿರುವಾಗಲೇ, ಅವಘಡ ಜರುಗಿದೆ.

Massive Fire Broke Out At Gas Well Of OIL At Tinsukia District Assam

''ಮಧ್ಯಾಹ್ನ 1.40 ಕ್ಕೆ ಘಟನೆ ಜರುಗಿದೆ. ಅವಘಡದಿಂದ ಒ.ಎನ್.ಜಿ.ಸಿ ಯಲ್ಲಿನ ಅಗ್ನಿಶಾಮಕ ಸಿಬ್ಬಂದಿಯೊಬ್ಬರಿಗೆ ಗಾಯಗೊಂಡಿದ್ದಾರೆ. ಇದರ ಹೊರತಾಗಿ ಇನ್ಯಾವುದೇ ಸಾವು-ನೋವಿನ ಮಾಹಿತಿ ಲಭ್ಯವಾಗಿಲ್ಲ'' ಎಂದು OIL ಸೀನಿಯರ್ ಮ್ಯಾನೇಜರ್ ಜಯಂತ್ ಬೊರ್ಮುಡೊಯ್ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ: 5 ಮಂದಿ ಸಾವುಗುಜರಾತ್‌ನಲ್ಲಿ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ: 5 ಮಂದಿ ಸಾವು

ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡಾಗ ಸ್ಥಳದಲ್ಲಿ ಪರಿಣಿತರು ಮತ್ತು ಸಿಬ್ಬಂದಿಗಳು ಇರಲಿಲ್ಲ. ಹಾಗೇ ಈ ಘಟನೆಯಿಂದ ತೈಲ ಬಾವಿಯ 1.5 ಕೀ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಯಾವುದೇ ಅಪಾಯ ಇಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.

English summary
Massive Fire broke out at gas well of OIL at Tinsukia district Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X