ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಅಸ್ಸಾಂಗೆ ಮತ್ತೊಂದು ಸಂಕಟ: ಜಪಾನೀಸ್ ಎನ್ಸೆಫಾಲಿಟಿಸ್‌ಗೆ 27 ಬಲಿ

|
Google Oneindia Kannada News

ಗುವಾಹಟಿ, ಜುಲೈ 17: ಎರಡು ವಿನಾಶಕಾರಿ ಪ್ರವಾಹಗಳ ವಿರುದ್ಧ ಹೋರಾಡಿ ಇತ್ತೀಚೆಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಅಸ್ಸಾಂಗೆ ಈಗ ಜಪಾನೀಸ್ ಎನ್ಸೆಫಾಲಿಟಿಸ್ (JE) ಕಾಟ ಶುರುವಾಗಿದ್ದು, ರಾಜ್ಯದಲ್ಲಿ ಆತಂಕದ ವಾತವಾರಣವಿದೆ.

ಅಸ್ಸಾಂನ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಪ್ರಕಾರ, ಈ ವರ್ಷ ಜುಲೈ 1 ರಿಂದ16 ರವರೆಗೆ 27 ಮಂದಿ ಈ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 169 ಪ್ರಕರಣಗಳು ವರದಿಯಾಗಿವೆ.

ಜುಲೈ 16 ರಂದು (ಶನಿವಾರ) ಒಂಬತ್ತು ಹೊಸ ಪ್ರಕರಣಗಳು ಮತ್ತು ನಾಲ್ಕು ಸಾವುಗಳು ವರದಿಯಾಗಿವೆ. ಜೋರ್ಹತ್ ಜಿಲ್ಲೆಯಲ್ಲಿ ಈ ಸಾವುಗಳು ಸಂಭವಿಸಿದೆ. ವರದಿಯಾಗಿರುವ ಒಂಬತ್ತು ಪ್ರಕರಣಗಳಲ್ಲಿ ಮೂರು ಗೋಲಾಘಾಟ್‌ನಲ್ಲಿ, ಶಿವಸಾಗರ್ ಮತ್ತು ಸೋನಿತ್‌ಪುರ ತಲಾ ಎರಡು ಮತ್ತು ಗೋಲ್ಪಾರಾ ಮತ್ತು ಕೊಕ್ರಜಾರ್ ತಲಾ ಒಂದು ವರದಿಯಾಗಿವೆ.

Japanese Encephalitis Disease Kills 27 Persons in Assam

ಜಪಾನೀಸ್ ಎನ್ಸೆಫಾಲಿಟಿಸ್ ಅಲ್ಲದೇ ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ಅಥವಾ ಎಇಎಸ್ ಎಂದು ಕರಸಿಕೊಳ್ಳು ಸೋಂಕಿನಿಂದಲೂ ಕೂಡ ಈ ವರ್ಷ ಅಸ್ಸಾಂನಲ್ಲಿ 16 ಜನರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ತ್ವರಿತವಾಗಿ ಸ್ಪಂದಿಸುವ ತಂಡವನ್ನು ರಚಿಸಿ ರೋಗ ಹರಡುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಗ್ಯ ತಂಡಗಳಿಗೆ ಜ್ವರ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಿ, ತ್ವರಿತವಾಗಿ ವರದಿ ನೀಡಲು ಸೂಚಿಸಲಾಗಿದೆ.

"ಜೆಇ ಪರೀಕ್ಷೆಗಳು ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ" ಎಂದು ಅಸ್ಸಾಂನ ರಾಷ್ಟ್ರೀಯ ಆರೋಗ್ಯ ಮಿಷನ್ ಮಾಹಿತಿ ನೀಡಿದೆ. ಅಸ್ಸಾಂನಲ್ಲಿ ಪ್ರತಿ ವರ್ಷ ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ಸೋಂಕಿನಿಂದ ನೂರಾರು ಜನರು ಸಾವನ್ನಪ್ಪುತ್ತಾರೆ. ಜಪಾನೀಸ್ ಎನ್ಸೆಫಾಲಿಟಿಸ್ ಒಂದು ವೈರಲ್ ಮಿದುಳಿನ ಸೋಂಕಾಗಿದ್ದು, ಇದು ಸೊಳ್ಳೆ ಕಡಿತದಿಂದ ಹರಡುತ್ತದೆ.

2018 ರಲ್ಲಿ ಜೆಇ ಮತ್ತು ಎಇಎಸ್ ಅಸ್ಸಾಂನಲ್ಲಿ 277 ಜನರನ್ನು ಬಲಿ ತೆಗೆದುಕೊಂಡಿತ್ತು. 2019 ರಲ್ಲಿ 514 ಮಂದಿ, 2020 ರಲ್ಲಿ 147 ಮತ್ತು 2021 ರಲ್ಲಿ 131 ಮಂದಿ ಮೃತಪಟ್ಟಿದ್ದರು.

ಈ ವರ್ಷ ಪ್ರವಾಹದಿಂದಾಗಿ ರಾಜ್ಯದಲ್ಲಿ 195 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ 19 ಮಂದಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಮೃತಪಟ್ಟರೇ, ಇನ್ನೂ ಮೂವತ್ತೇಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 34 ಜಿಲ್ಲೆಗಳಲ್ಲಿ ಅಂದಾಜು 90 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಈ ಸಮಯದಲ್ಲಿ ಮತ್ತೆ ಜಪಾನೀಸ್ ಎನ್ಸೆಫಾಲಿಟಿಸ್ ಕಾಣೀಸಿಕೊಂಡಿದ್ದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

English summary
Japanese encephalitis disease has creating havoc in Assam by taking more than 27 lives in the state. This north-east state had recently saw severe floods that afted lakhs of lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X