ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲಾಕ್ ಡೌನ್ ಘೋಷಣೆ: ಇದು ಮೋದಿಯ 3ನೇ ಮಹಾ ಪ್ರಮಾದ'

|
Google Oneindia Kannada News

ಗುವಾಹಟಿ, ಮೇ 18: ಮಾರಣಾಂತಿಕ ಕೊರೊನಾ ವೈರಸ್ ತಡೆಗಟ್ಟಲು ಮಾರ್ಚ್ 25 ರಿಂದ ದೇಶದಾದ್ಯಂತ ಲಾಕ್ ಡೌನ್ ಚಾಲ್ತಿಯಲ್ಲಿದೆ. ಮೇ 31 ರವರೆಗೂ ಲಾಕ್ ಡೌನ್ ಮುಂದುವರೆಯಲಿದೆ.

ಹೀಗಿರುವಾಗಲೇ, ಲಾಕ್ ಡೌನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಕಿಡಿಕಾರಿದ್ದಾರೆ. ''ರಾಜ್ಯಗಳ ಜೊತೆಗೆ ಸಮಾಲೋಚನೆ ನಡೆಸದೆ, ಎಕ್ಸ್ ಪರ್ಟ್ ಗಳ ಅಭಿಪ್ರಾಯ ಪಡೆಯದೆ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ 3ನೇ ಮಹಾ ಪ್ರಮಾದ'' ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!

ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ನಾಯಕ ಅಲ್ಲ. ಅವರು 'ಡಿಕ್ಟೇಟರ್' ಎಂದು ತರುಣ್ ಗೊಗೊಯ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೋದಿಯ ನಿರ್ಧಾರದಿಂದ ಆರ್ಥಿಕತೆಗೆ ಪೆಟ್ಟು

ಮೋದಿಯ ನಿರ್ಧಾರದಿಂದ ಆರ್ಥಿಕತೆಗೆ ಪೆಟ್ಟು

''ಮೋದಿಯ ನಿರ್ಧಾರಗಳಿಂದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದೆ. ಲಕ್ಷಾಂತರ ಮಂದಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ವಲಸೆ ಕಾರ್ಮಿಕರು ಹೆಣಗಾಡುತ್ತಿದ್ದಾರೆ. ಯಾವುದೇ ಯೋಜನೆ ಇಲ್ಲದೆ ಲಾಕ್ ಡೌನ್ ಘೋಷಿಸುವ ಮೂಲಕ, ಮೋದಿ ದೂರದೃಷ್ಟಿಯ ನಾಯಕ ಅಲ್ಲ ಎಂಬುದು ಸಾಬೀತಾಗುತ್ತದೆ'' ಅಂತ ತರುಣ್ ಗೊಗೊಯ್ ಹೇಳಿದ್ದಾರೆ.

'ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ದೈನಂದಿನ ಧಾರಾವಾಹಿ ಆಗಿದೆ''ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ದೈನಂದಿನ ಧಾರಾವಾಹಿ ಆಗಿದೆ'

ಸರ್ವಾಧಿಕಾರಿಯ ಪ್ರವೃತ್ತಿ

ಸರ್ವಾಧಿಕಾರಿಯ ಪ್ರವೃತ್ತಿ

''ಎಲ್ಲಾ ವಿಷಯದಲ್ಲೂ ತಾನೇ ಪರಿಣಿತ ಅಂತ ಮೋದಿ ಭಾವಿಸಿದ್ದಾರೆ. ಹೀಗಾಗಿ ಅವರು ಯಾರನ್ನೂ ಸಂಪರ್ಕಿಸುವುದಿಲ್ಲ. ಇದು ಸರ್ವಾಧಿಕಾರಿಯ ಪ್ರವೃತ್ತಿ'' ಎಂದು ತರುಣ್ ಗೊಗೊಯ್ ಕಿಡಿಕಾರಿದ್ದಾರೆ.

ಮೋದಿ ಸರ್ಕಾರ ಬಡವರ ಪರ ಇಲ್ಲ

ಮೋದಿ ಸರ್ಕಾರ ಬಡವರ ಪರ ಇಲ್ಲ

''20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ನಲ್ಲಿ ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕಿತ್ತು. ಆದ್ರೆ, ವಲಸೆ ಕಾರ್ಮಿಕರ ಸಂಕಷ್ಟವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಜೊತೆಗೆ ರೈತರು, ನೇಕಾರರು, ಹಾಲು ಉತ್ಪಾದಕರು, ಸಣ್ಣ ವ್ಯಾಪಾರಿಗಳನ್ನು ಆರ್ಥಿಕ ಪ್ಯಾಕೇಜ್ ನಲ್ಲಿ ಕಡೆಗಣಿಸಲಾಗಿದೆ. ಈ ವರ್ಗಕ್ಕೆ ಹಣ ಸಹಾಯ ಸಿಕ್ಕಿಲ್ಲ. ಕೇವಲ ಪಡಿತರ ನೀಡಿದರೆ ಸಾಲುವುದಿಲ್ಲ. ಬದುಕಲು ಅವರಿಗೆಲ್ಲ ಹಣದ ಅವಶ್ಯಕತೆ ಮುಖ್ಯ. ಅವರುಗಳ ಸಾಲ ಮನ್ನಾ ಮಾಡುವಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಾಲ ಕೊಡುವುದೇ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಆಗಿದೆ. ಮೋದಿ ಸರ್ಕಾರ ಬಡವರ ಪರ ಇಲ್ಲ. ಹೀಗೆ ಸಾಗಿದರೆ, ಭಾರತದ ಆರ್ಥಿಕತೆಗೆ ಪುನಶ್ಚೇತನ ಸಿಗುವುದಿಲ್ಲ'' ಅಂತ ತರುಣ್ ಗೊಗೊಯ್ ಅಭಿಪ್ರಾಯ ಪಟ್ಟಿದ್ದಾರೆ.

ಆರ್ಥಿಕ ಪ್ಯಾಕೇಜ್ ನಲ್ಲಿ ರೈತರಿಗೆ ಸಾಲ: ನಿಜವಾಗಿಯೂ ಅನ್ನದಾತನ ಕೈ ಸೇರುತ್ತಾ.?ಆರ್ಥಿಕ ಪ್ಯಾಕೇಜ್ ನಲ್ಲಿ ರೈತರಿಗೆ ಸಾಲ: ನಿಜವಾಗಿಯೂ ಅನ್ನದಾತನ ಕೈ ಸೇರುತ್ತಾ.?

English summary
Imposing Lockdown without consulting states was Modi's 3rd Biggest mistake says Tarun Gogoi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X