ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಬಿಜೆಪಿ ಅಭ್ಯರ್ಥಿ ಆಸ್ತಿ 5 ವರ್ಷಗಳಲ್ಲಿ 10 ಕೋಟಿ ರೂ ಏರಿಕೆ

|
Google Oneindia Kannada News

ಗುವಾಹಟಿ, ಮಾರ್ಚ್ 23: ಅಸ್ಸಾಂ ವಿಧಾನಸಭೆ ಚುನಾವಣೆಗೆ ಜಲುಕ್‌ಬರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಅಸ್ಸಾಂ ಹಣಕಾಸು ಸಚಿವ ಹಿಮಂತಾ ಬಿಸ್ವಾ ಶರ್ಮಾ ಅವರ ಬಳಿ ಕೇವಲ 25 ಸಾವಿರ ರೂ ನಗದು ಇದ್ದು, ಬ್ಯಾಂಕ್‌ನಲ್ಲಿ 50 ಲಕ್ಷ ಠೇವಣಿ ಇಟ್ಟಿದ್ದಾರೆ. ಅವರ ಬಳಿ ಯಾವುದೇ ಬಾಂಡ್, ಶೇರ್ ಹಾಗೂ ಇನ್ಸುರೆನ್ಸ್ ಪಾಲಿಸಿಗಳೂ ಇಲ್ಲ ಎಂದು ಘೋಷಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅವರ ವೈಯಕ್ತಿಕ ಆದಾಯ ಏರಿಕೆ ಕಂಡಿಲ್ಲ. ಆದರೆ ಅವರ ಕುಟುಂಬದ ಆದಾಯ ಮಾತ್ರ ಹತ್ತು ಕೋಟಿ ರೂ ಏರಿಕೆಯಾಗಿದೆ.

ಭಾರತದ 48 ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 7372.96 ಕೋಟಿ ರೂ.ಭಾರತದ 48 ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 7372.96 ಕೋಟಿ ರೂ.

ತಾವು ಕಾರು, ನಿವೇಶನದಂಥ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಅವರ ಆಸ್ತಿಯಲ್ಲಿ ಮಾತ್ರ ಏರಿಕೆಯಾಗಿದೆ. 2016ರಲ್ಲಿ 1.02 ಕೋಟಿ ರೂ ಇದ್ದದ್ದು ಈಗ 1.72 ಕೋಟಿ ರೂಪಾಯಿಗೆ ತಲುಪಿದೆ.

Himanta Biswa Sarma Family Income Up By 10 Crores In 5 Years

ಅವರ ಕುಟುಂಬದ ಆದಾಯ ಐದು ವರ್ಷಗಳಲ್ಲಿ ಹತ್ತು ಕೋಟಿಗೂ ಹೆಚ್ಚು ಏರಿಕೆಯಾಗಿದೆ. ಅವರ ಪತ್ನಿ ರಿನಿಕಿ ಭಯನ್ ಶರ್ಮಾ ಅವರ ಆದಾಯವೇ ಒಂಬತ್ತು ಕೋಟಿಗೆ ಮುಟ್ಟಿದೆ. ನಾಲ್ಕು ಮಂದಿಯ ಅವರ ಕುಟುಂಬದಲ್ಲಿ, ಐದು ವರ್ಷಕ್ಕೆ ಒಟ್ಟು ಆದಾಯವು 17.27 ಕೋಟಿ ಇದೆ. ಐದು ವರ್ಷದ ಹಿಂದೆ 6.38 ಕೋಟಿ ರೂ ಆಸ್ತಿ ಇತ್ತು.

ಹಿಮಂತ ಅವರು ತಮ್ಮ ಹೆಸರಿನಲ್ಲಿ 68.48 ಕೋಟಿ ರೂ ಸಾಲ ತೋರಿಸಿದ್ದಾರೆ. ಐದು ವರ್ಷಗಳ ಹಿಂದೆ ಇವರ ಸಾಲದ ಮೊತ್ತ 8 ಕೋಟಿ ರೂ ಇತ್ತು.

ಸತತ ಐದನೇ ಬಾರಿ ಹಿಮಂತ ಅವರು ಜಲುಕ್‌ಬರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

English summary
Assam finance minister Himanta Biswa Sarma owns assets worth Rs 1.7 crore and Family income up by Rs 10 crores in five years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X