ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯದಲ್ಲಿ ಭೂಕುಸಿತಕ್ಕೆ 3 ಸಾವು, ಅಸ್ಸಾಂನಲ್ಲಿ ಆರೆಂಜ್ ಅಲರ್ಟ್

|
Google Oneindia Kannada News

ಶಿಲ್ಲಾಂಗ್ ಜೂನ್ 09: ಇಂದು ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮೇಘಾಲಯದಲ್ಲಿ ಜನಜೀವನ ಸ್ಥಗಿತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಗಂಬೆಗ್ರೆ ಪ್ರದೇಶದಲ್ಲಿ ಭಾರಿ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಆದರೆ ಧಾರಾಕಾರ ಮಳೆಯಿಂದಾಗಿ ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟ, ಅಸ್ಸಾಂನ ಮಂಕಾಚಾರ್ ಜಿಲ್ಲೆ ಪ್ರವಾಹಕ್ಕೆ ಸಿಲುಕಿದೆ. ಇದರಲ್ಲಿ ಅನೇಕ ಹಳ್ಳಿಗಳು ಮುಳುಗಿವೆ ಮತ್ತು ನೂರಾರು ಕುಟುಂಬಗಳು ಇದರಿಂದ ತೊಂದರೆಗೀಡಾಗಿವೆ.

ಇಷ್ಟು ಮಾತ್ರವಲ್ಲದೆ ಗುವಾಹಟಿ ನಗರದ ಕಹಿಲಿಪಾರ, ಜಟಿಯಾ, ಹಟಿಗಾಂವ್ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ನೀರು ನಿಂತಿದೆ. ಹವಾಮಾನ ಇಲಾಖೆಯು ಈಶಾನ್ಯ ರಾಜ್ಯಗಳಲ್ಲಿ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ. ಮಾನ್ಸೂನ್‌ನಿಂದಾಗಿ ಮೇಘಾಲಯ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿಗೆ ಶಾಖದಿಂದ ಮುಕ್ತಿ: ಮಾಸಾಂತ್ಯಕ್ಕೆ ಮುಂಗಾರುದೆಹಲಿಗೆ ಶಾಖದಿಂದ ಮುಕ್ತಿ: ಮಾಸಾಂತ್ಯಕ್ಕೆ ಮುಂಗಾರು

ಭೂಕುಸಿತದಿಂದ ಬಾಲಕ ಸಾವು

ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯ ಗಂಬೆಗ್ರೆ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ನೈಋತ್ಯ ಗಾರೋ ಬೆಟ್ಟಗಳ ಬೆಟಾಸಿಂಗ್ ಪ್ರದೇಶದಲ್ಲಿ ಭೂಕುಸಿತದಿಂದ ಎರಡೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಬ್ಲಾಕ್‌ನಿಂದ 32 ಕಿಮೀ ಮತ್ತು ತುರಾದಿಂದ 45 ಕಿಮೀ ದೂರದಲ್ಲಿರುವ ಗಂಬೆಗ್ರೆ ಬ್ಲಾಕ್‌ನ ಜೆಬಲ್ಗ್ರೆ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಸಜೀವ ಸಮಾಧಿಯಾಗಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಸೌತ್ ವೆಸ್ಟ್ ಗಾರೋ ಹಿಲ್ಸ್‌ನ ಬೆಟಾಸಿಂಗ್ ಬ್ಲಾಕ್‌ನ ಸಮತಿ ಗ್ರಾಮದಲ್ಲಿ ಭೂಕುಸಿತದಲ್ಲಿ ಮನೆ ನಾಶವಾದಾಗ ಎರಡೂವರೆ ವರ್ಷದ ಮಗು ತನ್ನ ಪ್ರಾಣವನ್ನು ಕಳೆದುಕೊಂಡಿದೆ.

ಹವಾಮಾನ ಮುನ್ಸೂಚನೆ: ಕರ್ನಾಟಕದ ಕೆಲವೆಡೆ ಮುಂದಿನ 5 ದಿನ ಮಳೆ ನಿರೀಕ್ಷೆಹವಾಮಾನ ಮುನ್ಸೂಚನೆ: ಕರ್ನಾಟಕದ ಕೆಲವೆಡೆ ಮುಂದಿನ 5 ದಿನ ಮಳೆ ನಿರೀಕ್ಷೆ

ಅಸ್ಸಾಂನಲ್ಲಿ ಮತ್ತೆ ಪ್ರವಾಹ

ಅಸ್ಸಾಂನಲ್ಲಿ ಮತ್ತೆ ಪ್ರವಾಹ

ಮೇಘಾಲಯದ ವೆಸ್ಟ್ ಗಾರೊ ಬೆಟ್ಟಗಳ ಗ್ಯಾಂಬೆಗ್ರೆ ಬ್ಲಾಕ್‌ನಲ್ಲಿ ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಅಸ್ಸಾಂನ ದಕ್ಷಿಣ ಸಲ್ಮಾರಾ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ ಹಲವಾರು ಗ್ರಾಮಗಳು ಮುಳುಗಿದ್ದು, ಈ ಪ್ರದೇಶದ ನೂರಾರು ಕುಟುಂಬಗಳಿಗೆ ಪರಿಣಾಮ ಬೀರಿದೆ. ಭಾರೀ ಮಳೆಯಿಂದಾಗಿ ಗುವಾಹಟಿ ನಗರದ ಕಹಿಲಿಪಾರಾ, ಜಟಿಯಾ ಮತ್ತು ಹಟಿಗಾಂವ್ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಗುರುವಾರ ನೀರು ನಿಂತಿದೆ.

ಸಿಕ್ಕಿಂನಲ್ಲಿ ಭಾರೀ ಮಳೆಯ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯು ಜೂನ್ 12 ರವರೆಗೆ ಅಸ್ಸಾಂನಲ್ಲಿ ಭಾರೀ ಮಳೆಯ ನಡುವೆ ಈಶಾನ್ಯ ಭಾರತದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. IMD ಮುಂದಿನ ಕೆಲವು ದಿನಗಳಲ್ಲಿ ಈಶಾನ್ಯ ಭಾರತ, ಉಪ ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ಮುಂದಿನ ಎರಡು ದಿನಗಳಲ್ಲಿ, ವಾಯುವ್ಯ, ಮಧ್ಯ ಮತ್ತು ನೆರೆಯ ಪೂರ್ವ ಭಾರತದಾದ್ಯಂತ ಪ್ರತ್ಯೇಕವಾದ ಸ್ಥಳಗಳಲ್ಲಿ ಬಿಸಿಲಿನ ಶಾಖದ ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ. ಮುಂದಿನ 5 ದಿನಗಳ ಕಾಲ ಅಸ್ಸಾಂನಲ್ಲಿ ಮಳೆ ಮುಂದುವರಿಯುತ್ತದೆ.

ಪ್ರವಾಹದ ಭೀತಿಯಲ್ಲಿ ಅಸ್ಸಾಂ

ಪ್ರವಾಹದ ಭೀತಿಯಲ್ಲಿ ಅಸ್ಸಾಂ


ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಅಸ್ಸಾಂನಲ್ಲಿ ಕೇವಲ ಒಂದು ತಿಂಗಳಲ್ಲಿ 36 ಜೀವಗಳನ್ನು ಸಾವನ್ನಪ್ಪಿವೆ. ಮಾತ್ರವಲ್ಲದೇ ಒಟ್ಟು 2,90,749 ಜನರ ಮೇಲೆ ಪರಿಣಾಮ ಬೀರಿದೆ. ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವೆಂದರೆ ನಾಗಾವ್. ಅಲ್ಲಿ ಪ್ರವಾಹದಿಂದಾಗಿ 3.07 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದರೆ, ಕ್ಯಾಚಾರ್‌ನಲ್ಲಿ 99,060 ಜನರು ಮತ್ತು ಮೋರಿಗಾಂವ್‌ನಲ್ಲಿ 40,843 ಜನರು ಬಾಧಿತರಾಗಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 401 ಗ್ರಾಮಗಳು ಮುಳುಗಡೆಯಾಗಿದ್ದು, 16,562 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1,55,269 ಸಾಕುಪ್ರಾಣಿಗಳು ಹಾನಿಗೊಳಗಾಗಿವೆ.

Recommended Video

ಎಲ್ಲರನ್ನ ತುಳಿಯೋದೇ ಸಿದ್ದು ಕೆಲಸ !! | Oneindia Kannada

English summary
Assam Rain: A family of three and a little child lost their lives after they were buried alive in landslides that occurred in two places in Garo Hills of Meghalaya in the early hours of Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X