ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಗುವಾಹಟಿ ಪಾಲಿಕೆ ಚುನಾವಣೆ; ಬಿಜೆಪಿ ಮುನ್ನಡೆ

|
Google Oneindia Kannada News

ದಿಸ್‌ಪುರ್, ಏಪ್ರಿಲ್ 24; ಅಸ್ಸಾಂನ ಗುವಾಹಟಿ ಪಾಲಿಕೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. 57 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11ರಲ್ಲಿ ಗೆಲವು ಸಾಧಿಸಿದೆ. ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದೆ.

ಭಾನುವಾರ ಗುವಾಹಟಿ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. 57 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿಯ ಮೈತ್ರಿಕೂಟ ಎಜಿಪಿ 2 ವಾರ್ಡ್‌ಗಳಲ್ಲಿ ಜಯಗಳಿಸಿದೆ.

ಅಸ್ಸಾಂ ಪೊಲೀಸರಿಂದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನಅಸ್ಸಾಂ ಪೊಲೀಸರಿಂದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ

ಕಮ್ರೂಪ್ ಜಿಲ್ಲೆಯಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಮತ್ತು ಎಜೆಪಿ ಪಕ್ಷದ ಅಭ್ಯರ್ಥಿ ತಲಾ 1 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. 9 ವರ್ಷಗಳ ಬಳಿಕ ಗುಹಾವಟಿ ಪಾಲಿಕೆಗೆ ಚುನಾವಣೆ ನಡೆದಿತ್ತು.

50 ವರ್ಷಗಳ ಅಸ್ಸಾಂ-ಮೇಘಾಲಯದ ಗಡಿ ಸಮಸ್ಯೆ ಶೇ.70ರಷ್ಟು ಇತ್ಯರ್ಥ50 ವರ್ಷಗಳ ಅಸ್ಸಾಂ-ಮೇಘಾಲಯದ ಗಡಿ ಸಮಸ್ಯೆ ಶೇ.70ರಷ್ಟು ಇತ್ಯರ್ಥ

Guwahati Municipal Corporation Elections Result

ಬಿಜೆಪಿ ಗೆದ್ದಿರುವ 11 ವಾರ್ಡ್‌ಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಪಾಲಿಕೆ ಚುನಾವಣೆಯ ಪ್ರಚಾರ ನೇತೃತ್ವ ವಹಿಸಿದ್ದರು. ನಗರದಲ್ಲಿ ಹಲವು ಸಮಾವೇಶ ಉದ್ದೇಶಿಸಿ ಮತ ಯಾಚನೆ ಮಾಡಿದ್ದರು.

 ರಾಜ್ಯದಲ್ಲಿ150 ಟಾರ್ಗೆಟ್‌ಗಾಗಿ ಬಿಜೆಪಿ ಕಾರ್ಯತಂತ್ರ: ನಳಿನ್‍ ಕುಮಾರ್ ಕಟೀಲ್ ರಾಜ್ಯದಲ್ಲಿ150 ಟಾರ್ಗೆಟ್‌ಗಾಗಿ ಬಿಜೆಪಿ ಕಾರ್ಯತಂತ್ರ: ನಳಿನ್‍ ಕುಮಾರ್ ಕಟೀಲ್

57 ವಾರ್ಡ್‌ಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಆಮ್‌ ಆದ್ಮಿ ಪಕ್ಷದ ಶಾಸಕ ಅತಿಷಿ ಪಕ್ಷದ ಪರವಾಗಿ ಪ್ರಚಾರದ ಉಸ್ತುವಾರಿ ವಹಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳು 54 ವಾರ್ಡ್‌ಗಳಲ್ಲಿ ಕಣದಲ್ಲಿದ್ದರು. ಅಧಿಕಾರಕ್ಕೆ ಬಂದ 100 ದಿನದಲ್ಲಿ ಎಲ್ಲಾ ವಾರ್ಡ್‌ಗಳ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಭರವಸೆಯನ್ನು ಪಕ್ಷದ ನೀಡಿತ್ತು.

English summary
Guwahati municipal corporation elections result 2022. BJP wins 11 wards out of 57. Election counting underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X