ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಹಳಿ ತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು

|
Google Oneindia Kannada News

ಗುವಾಹಟಿ, ಜನವರಿ 13: ಪಾಟ್ನಾ-ಗುವಾಹಟಿ-ಬಿಕಾನೆರ್ ಎಕ್ಸ್ ಪ್ರೆಸ್ ರೈಲು ಗುರುವಾರ ಸಂಜೆ ಪಶ್ಚಿಮ ಬಂಗಾಳದಲ್ಲಿ ಹಳಿತಪ್ಪಿದ್ದು, 4 ರಿಂದ 5 ಬೋಗಿಗಳು ಉರುಳಿ ಬಿದ್ದಿದೆ. ಬಿಕಾನೇರ್-ಗುವಾಹಟಿ ರೈಲು ಅಪಘಾತದ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಸಣ್ಣಪುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಶಾನ್ಯ ಫ್ರಂಟಿಯರ್ ರೈಲು ವಿಭಾಗಕ್ಕೆ ಬರುವ ಪಟನಾ-ಗುವಾಹಟಿ-ಬಿಕಾನೆರ್ ಎಕ್ಸ್ ಪ್ರೆಸ್ ಅಪಘಾತದಲ್ಲಿ ಸಾಕಷ್ಟು ಸಾವು ನೋವು ಆಗಿರುವ ಶಂಕೆ ವ್ಯಕ್ತವಾಗಿದ್ದು, ರೈಲ್ಷೇ ರಕ್ಷಣಾ ವಿಭಾಗ ಕೂಡ ತುರ್ತಾಗಿ ಸ್ಥಳಕ್ಕೆ ತೆರಳಿದೆ.

ಬೆಳಗ್ಗೆ ಪಟನಾದಿಂದ ಹೊರಟಿದ್ದ ಪ್ರಯಾಣಿಕ ರೈಲು ಜಲಪಾಯಿಗುರಿ ಜಿಲ್ಲೆಯ ಮೈನಾಗುರಿಯ ದೊಮೊಹನಿಯಲ್ಲಿ ಅವಗಢಕ್ಕೆ ತುತ್ತಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

Recommended Video

mekedatu padayatra ಕೊನೆಗೊಳಿಸಿದ್ದಕ್ಕೆ ಕಾರಣ ತಿಳಿಸಿದ Siddaramaiah | Oneindia Kannada
Guwahati-bound Bikaner Express Derails In West Bengals Jalpaiguri

ಎಲ್ಲವೂ ಸ್ಲೀಪರ್ ಕೋಚ್ ನ ಬೋಗಿಗಳಾಗಿವೆ ಎಂದು ವರದಿಯಾಗಿದೆ. ಪಟನಾದಿಂದ ಗುವಾಹಟಿಗೆ ಹೊರಟಿದ್ದ ವೇಳೆ ರೈಲು ಅಪಘಾತಕ್ಕೆ ಈಡಾಗಿದೆ. ಅಪಘಾತದಲ್ಲಿ 4 ರಿಂದ 5 ಬೋಗಿಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.

ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಬಗ್ಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ನಾನು ನಾಳೆ ಬೆಳಿಗ್ಗೆ ಘಟನೆ ನಡೆದ ಪ್ರದೇಶವನ್ನು ತಲುಪುತ್ತಿದ್ದೇನೆ. ಸ್ಥಳದಲ್ಲಿ ವೈದ್ಯಕೀಯ ತಂಡಗಳು, ಹಿರಿಯ ಅಧಿಕಾರಿಗಳು ಇದ್ದಾರೆ. ಪ್ರಧಾನಿ ಮೋದಿ ಕೂಡ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಅವಲೋಕಿಸಿದ್ದಾರೆ. ನಾವು ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

ಮೋದಿ ಸಂತಾಪ



ಈ ದುರ್ಘಟನೆಯ ವಿವರಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಕೇಳಿ ಪಡೆದುಕೊಂಡಿದ್ದೇನೆ. ಮೃತರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

''ದೋಮೊಹಾನಿ ಮತ್ತು ನ್ಯೂ ಮೇನಗುರಿ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಸುಮಾರು 10 ಕೋಚ್‌ಗಳು ಪರಿಣಾಮ ಬೀರಿವೆ. 3 ಸಾವು, 20 ಮಂದಿಗೆ ಗಾಯ; ಮೃತರಿಗೆ 5 ಲಕ್ಷ, ತೀವ್ರ ಗಾಯಗೊಂಡವರಿಗೆ 1 ಲಕ್ಷ, ಸಣ್ಣಪುಟ್ಟ ಗಾಯಗಳಿಗೆ 25,000 ರೂ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ,'' ಎಂದು ಈಶಾನ್ಯ ರೈಲ್ವೆ ಮುಖ್ಯ ಪಿಆರ್‌ಒ ಉನೀತ್ ಕೌರ್ ಹೇಳಿದ್ದಾರೆ.

ಅಪಘಾತದಿಂದ ಸಂತ್ರಸ್ತರಾದವರಿಗೆ ಸಹಾಯವನ್ನು ವಿಸ್ತರಿಸುವ ಪೂರ್ವ ರೈಲ್ವೇಯು ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಹಾಯಕ್ಕಾಗಿ ರಾಜಸ್ಥಾನ (01512725942), ಅಸ್ಸಾಂ (0361-2731621, 2731622, 2731623), ಮತ್ತು ಪಶ್ಚಿಮ ಬಂಗಾಳ (8134054999) ಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದೆ.

ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್ ಹಳಿತಪ್ಪಿದ ಕಾರಣ ಪೂರ್ವ ರೈಲ್ವೆಯು ರೈಲ್ವೇ ಸಮಯಗಳಲ್ಲಿ ಬದಲಾವಣೆಯನ್ನು ಘೋಷಿಸಿದೆ. "15633 ರ ಹಳಿತಪ್ಪಿದ ಕಾರಣ ಎನ್.ಎಫ್. ರೈಲ್ವೇ, 13147ಅಪ್ ಸೀಲ್ಡಾ - ಬಮನ್‌ಹಾಟ್ ಉತ್ತರಬಂಗಾ ಎಕ್ಸ್‌ಪ್ರೆಸ್ (ಜೆ.ಸಿ.ಒ 13.01.2022) ನ್ಯೂ ಜಲ್ಪೈಗುರಿ ಮತ್ತು 13148 ಡೌನ್ ಉತ್ತರಬಂಗಾ ಎಕ್ಸ್‌ಪ್ರೆಸ್‌ನಲ್ಲಿ (ಜೆ.ಸಿ.ಒ 14.01.2022) ಅಲ್ಪಾವಧಿಗೆ ಹೊಸ ಜಲ್ಪೈಗುರಿಯಿಂದ ಸಂಚರಿಸಲಿದೆ.

ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಎರಡು ತಂಡಗಳನ್ನು ಧಾವಿಸಿದೆ.

English summary
Four to five bogies of the Bikaner Express (15633) have derailed in West Bengal's Jalpaiguri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X