ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುವಾಹತಿ ಶಾಪಿಂಗ್ ಮಾಲ್ ಹೊರಗೆ ಗ್ರೆನೇಡ್ ದಾಳಿ, ಇಬ್ಬರ ಸಾವು, ಒಂಬತ್ತು ಮಂದಿಗೆ ಗಾಯ

|
Google Oneindia Kannada News

ಗುವಾಹತಿ (ಅಸ್ಸಾಂ), ಮೇ 15: ಜನ ನಿಬಿಡ ಶಾಪಿಂಗ್ ಮಾಲ್ ನ ಹೊರ ಭಾಗದಲ್ಲಿ ಗ್ರೆನೇಡ್ ಸ್ಫೋಟವಾಗಿ, ಇಬ್ಬರು ಮೃತಪಟ್ಟಿದ್ದಾರೆ. ಕನಿಷ್ಠ ಒಂಬತ್ತು ಮಂದಿ ಗಾಯಗೊಂಡ ಘಟನೆ ಅಸ್ಸಾಮ್ ನ ರಾಜಧಾನಿ ಗುವಾಹತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಝೂ ರಸ್ತೆ ಬಡಾವಣೆಯಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಪೊಲೀಸರು ಹಾಜರಿದ್ದಾರೆ. ಪರೇಶ್ ಬರುವಾ ನೇತೃತ್ವದ ಉಲ್ಫಾ ಭಯೋತ್ಪಾದನಾ ಗುಂಪು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ನಗರ ಪೊಲೀಸ್ ಆಯುಕ್ತರಾದ ದೀಪಕ್ ಕುಮಾರ್ ಮಾತನಾಡಿ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಅಸ್ಸಾಂ: ಮಾರ್ಕೆಟ್‌ನಲ್ಲಿ ಗ್ರೆನೇಡ್ ಸ್ಫೋಟದಿಂದ ಇಬ್ಬರ ಸಾವುಅಸ್ಸಾಂ: ಮಾರ್ಕೆಟ್‌ನಲ್ಲಿ ಗ್ರೆನೇಡ್ ಸ್ಫೋಟದಿಂದ ಇಬ್ಬರ ಸಾವು

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ನಾಕಾಬಂದಿ ಹಾಕಲಾಗಿತ್ತು. ಗಾಯಗೊಂಡವರಲ್ಲಿ ಇಬ್ಬರು ಸಶಸ್ತ್ರ ಸೀಮಾ ಬಲಕ್ಕೆ ಸೇರಿದವರೂ ಇದ್ದಾರೆ. ನಾಕಾ ಪರಿಶೀಲನಾ ತಂಡವೇ ಉಗ್ರರ ಗುರಿಯಾಗಿದ್ದಿರಬಹುದು ಎಂದು ಶಂಕಿಸಲಾಗಿದೆ. ಅಸ್ಸಾಂನ ಕಾರ್ಯಾಲಯದಿಂದ ಈ ಸ್ಥಳ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ.

Grenade Attack

ನಗರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಸರ್ಬನಂದ ಸೋನೋವಾಲ ಸಭೆ ನಡೆಸಿ, ಸೂಚಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ. ಕೇಂದ್ರ ಅಸ್ಸಾಂನ ತೀನ್ ಸುಕಿಯಾದಲ್ಲಿ ಮೂವರು ಉಲ್ಫಾ ಉಗ್ರರನ್ನು ಬಂಧಿಸಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎನ್ನಲಾಗಿದೆ.

English summary
Grenade attack out side shopping mall in Guwahati, Assam on Wednesday night. Two dead and many injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X