ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತ್ಯತೀತತೆ ಹಾಗೂ ಕೋಮುವಾದದ ಆಟ ದೇಶಕ್ಕೆ ಹಾನಿ ಮಾಡಿದೆ: ಮೋದಿ

|
Google Oneindia Kannada News

ಗುವಾಹಟಿ, ಏಪ್ರಿಲ್ 3: ಜಾತ್ಯತೀತತೆ ಹಾಗೂ ಕೋಮುವಾದದ ಆಟ ದೇಶಕ್ಕೆ ಹಾನಿಯುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿರುವ ಅವರು, ಯಾವುದೇ ತಾರತಮ್ಯ ತೋರದೆ ನಾವು ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತೇವೆ, ಆದರೆ ಕೆಲವರು ದೇಶವನ್ನು ವೋಟ್ ಬ್ಯಾಂಕ್ ಗಾಗಿ ವಿಭಜಿಸುತ್ತಿದ್ದಾರೆ ಎಂದು ಹೇಳಿದರು.

ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...

ಅದನ್ನು ದುರದೃಷ್ಟವಾಗಿ ಜಾತ್ಯತೀತತೆ ಎಂದು ಕರೆಯುತ್ತಾರೆ. ಆದರೆ ನಾವು ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುವವರನ್ನು ಕೋಮುವಾದಿಗಳೆಂದು ಕರೆಯುತ್ತೇವೆ. ಈ ಜಾತ್ಯತೀತತೆ, ಕೋಮುವಾದದ ಆಟದಲ್ಲಿ ದೇಶ ಹಾಳಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Games Of Secularism, Communalism Caused Great Damage To Country, Says PM Modi

ನನ್ನ ರಾಜಕೀಯ ಅನುಭವ ಪ್ರಕಾರ ಮತ್ತು ಜನರಿಂದ ಸಿಕ್ಕಿರುವ ಪ್ರೀತಿ, ವಿಶ್ವಾಸಗಳನ್ನು ನೋಡಿದಾಗ ಈ ಬಾರಿ ಕೂಡ ಅಸ್ಸಾಂನಲ್ಲಿ ಎನ್ ಡಿಎ ಸರ್ಕಾರ ರಚಿಸುತ್ತದೆ ಎಂದು ನನಗೆ ಅನಿಸುತ್ತಿದೆ. ಅಸ್ಸಾಂನ ಗುರುತಿಗೆ ಅವಮಾನ ಮಾಡಿದವರನ್ನು ಮತ್ತು ಹಿಂಸಾಚಾರಕ್ಕೆ ಪ್ರೋತ್ಸಾಹ, ಅಪಪ್ರಚಾರ ನೀಡುವವರನ್ನು ಅಸ್ಸಾಂ ಜನತೆ ಸಹಿಸಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ವೇಳೆ ವಿಪರೀತ ಬಿಸಿಲಿನಿಂದ ತಲೆಸುತ್ತಿ ಬಿದ್ದ ಕಾರ್ಯಕರ್ತರೊಬ್ಬರಿಗೆ ಆರೈಕೆ ಮಾಡುವಂತೆ ಪ್ರಧಾನಿ ಅಲ್ಲಿದ್ದವರಿಗೆ ಸೂಚಿಸಿದರು.

ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ.

English summary
Prime Minister Narendra Modi on Saturday said that BJP works for everyone without discrimination but some people divide the country for vote bank, which is unfortunately called secularism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X