ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸವಿಲ್ಲ!

|
Google Oneindia Kannada News

ಗುವಾಹಟಿ, ಅಕ್ಟೋಬರ್ 22: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಕೆಲಸ ನೀಡದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂ ಸರ್ಕಾರದ ಮಂತ್ರಿ ಮಂಡಲದ ಈ ನಿರ್ಧಾರ 2021 ರಿಂದ ಜಾರಿಗೆ ಬರಲಿದೆ.

ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ತಿಳಿಸಿದ್ದಾರೆ. 2021 ರ ಜನವರಿ 1 ರಿಂದ ಇದು ಜಾರಿಗೆ ಬರಲಿದ್ದು, ಎಲ್ಲಾ ಕುಟುಂಬಕ್ಕೂ ಇದು ಅನ್ವಯವಾಗಲಿದೆ ಎಂದು ಸೋನಾವಾಲ್ ಹೇಳಿದ್ದಾರೆ.

Recommended Video

ಗೆದ್ದ ಖುಷಿಗೆ ಜಂಬೂ ಸವಾರಿ ಮಾಡಲು ಹೋಗಿ ಬಿದ್ದ ಉಪಸಭಾಪತಿ: ವೈರಲ್ ವಿಡಿಯೋ | Oneindia Kannada

ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ

ಸೆಪ್ಟೆಂಬರ್ 2017 ರಲ್ಲೇ ಅಸ್ಸಾಮ್ ವಿಧಾನಸಭೆಯಲ್ಲಿ 'ಅಸ್ಸಾಮಿನ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ಯೋಜನೆ' ಮಸೂದೆಯೊಂದನ್ನು ಜಾರಗೆ ತರಲಾಗಿತ್ತು. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಸರ್ಕಾರಿ ಕೆಲಸ ಹಾಗೂ ಇಗಾಗಲೇ ಸರ್ಕಾರಿ ಕೆಲಸದಲ್ಲಿರುವವರೂ ಮುಂದೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿತ್ತು.

From 2021, No Government Jobs In Assam Who Have More Than 2 Kids

ಕಳೆದ ಆಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜನಸಂಖ್ಯಾ ನಿಯಂತ್ರಣದ ಬಗ್ಗೆಯೇ ಕಳವಳ ವ್ಯಕ್ತಪಡಿಸಿದ್ದರು. ಈಇ ಮೂಲಕ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರುವ ಸೂಚನೆಯನ್ನು ಅವರು ನೀಡಿದ್ದರು.

English summary
From 2021 Assam Governent will Not to give Government Jobs To People having More than 2 Kids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X