ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಂಐ ಪಾವತಿಸಲಾಗದೆ ಒಂದೇ ಕುಟುಂಬದ ಐವರ ಆತ್ಮಹತ್ಯೆ

|
Google Oneindia Kannada News

ಗುವಾಹಟಿ, ನವೆಂಬರ್ 2: ಹಣಕಾಸು ಸಮಸ್ಯೆಯು ವ್ಯಕ್ತಿ, ಆತನ ಪತ್ನಿ ಮತ್ತು ಅವರ ಮೂವರು ಹೆಣ್ಣುಮಕ್ಕಳ ಜೀವ ಬಲಿಪಡೆದ ಹೃದಯವಿದ್ರಾವಕ ಘಟನೆ ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ನಡೆದಿದೆ.

45 ವರ್ಷದ ನಿರ್ಮಲ್ ಪೌಲ್ ಅಡುಗೆ ಅನಿಲ ಮಾರಾಟದ ಸಬ್ ಏಜೆನ್ಸಿ ನಡೆಸುತ್ತಿದ್ದ. ಅದಕ್ಕಾಗಿ ಬ್ಯಾಂಕ್‌ಗಳು ಮತ್ತು ಸ್ಥಳೀಯ ಸಾಲಗಾರರಿಂದ ಸುಮಾರು 25-30 ಲಕ್ಷ ಸಾಲ ಪಡೆದಿದ್ದ. ಆದರೆ ಕಳೆದ ಕೆಲವು ತಿಂಗಳಿನಿಂದ ಆತನಿಗೆ ಇಎಂಐಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪಬ್ಜಿ ಗೇಮ್ ಆಡಲು ಸಾಧ್ಯವಾಗದೆ ನೊಂದ ಬಾಲಕ ಆತ್ಮಹತ್ಯೆ ಪಬ್ಜಿ ಗೇಮ್ ಆಡಲು ಸಾಧ್ಯವಾಗದೆ ನೊಂದ ಬಾಲಕ ಆತ್ಮಹತ್ಯೆ

ರಾಜಧಾನಿ ಗುವಾಹಟಿಯಿಂದ ಐದು ಗಂಟೆ ಪ್ರಯಾಣದಷ್ಟು ದೂರ ಇರುವ ಗ್ರಾಮದಲ್ಲಿನ ತಮ್ಮ ಮನೆಯಲ್ಲಿ ಈ ಕುಟುಂಬದ ಐದೂ ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಭಾನುವಾರ ಅವರ ಮೃತದೇಹಗಳು ಪತ್ತೆಯಾಗಿವೆ.

 Family Of 5 Allegedly Dies By Suicide In Assam Due To Financial Problems

ನಿರ್ಮಲ್ ಪಾಲ್ ಮತ್ತು ಆತನ ಪತ್ನಿ ಮಲ್ಲಿಕಾ (40) ಹಾಗೂ ಅವರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರೌಷನ್ ತಿಳಿಸಿದ್ದಾರೆ.

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ಆತ್ಮಹತ್ಯೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ಆತ್ಮಹತ್ಯೆ

ಪಾಲ್ ಅವರ ಮೊದಲ ಮಗಳು ಪೂಜಾ, ವಿಜ್ಞಾನ ಪದವೀಧರೆಯಾಗಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಇನ್ನಿಬ್ಬರು ಮಕ್ಕಳು ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದರು. ಈ ಘಟನೆ ಹಿಂದೆ ಬೇರೆ ಸಂಚು ನಡೆದಿದೆ ಎಂದು ಆರೋಪಿಸಿರುವ ಆಲ್ ಅಸ್ಸಾಂ ಬಂಗಾಲಿ ಯುವ ಚತ್ರ ಸಂಸ್ಥೆಯ ಘಟಕ, ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ.

English summary
A family of 5 allegedly died by suicide in Assam's Kokrajhar after they had not able to pay EMI's for last few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X