ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮುವಾದಿ 'ಮಿಯಾ' ಮುಸ್ಲಿಮರ ಮತ ಬಿಜೆಪಿಗೆ ಬೇಕಿಲ್ಲ

|
Google Oneindia Kannada News

ಗುವಾಹಟಿ, ಫೆಬ್ರವರಿ 4: ರಾಜ್ಯ ಚುನಾವಣೆಯಲ್ಲಿ ಬಂಗಾಳ ಮೂಲದ ಮುಸ್ಲಿ ಸಮುದಾಯದ ಮತಗಳ ಅಗತ್ಯ ಬಿಜೆಪಿಗೆ ಇಲ್ಲ ಎಂದು ಅಸ್ಸಾಂನ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಾಂತ ಬಿಸ್ವಾಸ್ ಸರ್ಮಾ ಹೇಳಿದ್ದಾರೆ. 'ಮಿಯಾ' ಮುಸ್ಲಿಮರ ಸಮುದಾಯವು ಅಸ್ಸಾಂ ಸಂಸ್ಕೃತಿಯನ್ನು, ಭಾಷೆ ಹಾಗೂ ಭಾರತೀಯ ಸಂಸ್ಕೃತಿಯ ಸಂಯೋಜನೆಯನ್ನ ಬಹಿರಂಗವಾಗಿ ಪ್ರಶ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ತಮ್ಮ ಮಿಯಾಗಳು ಎಂದು ಅವರು ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ. ಈ ಮಿಯಾ ಎಂದು ಕರೆಸಿಕೊಳ್ಳುವ ಜನರು ಬಹಳ ಕೋಮುವಾದಿಗಳು ಮತ್ತು ಮೂಲಭೂತವಾದಿಗಳು. ಅವರು ಅಸ್ಸಾಂ ಸಂಸ್ಕೃತಿ ಮತ್ತು ಅಸ್ಸಾಮಿ ಭಾಷೆಯನ್ನು ಹಾಳು ಮಾಡುವಂತಹ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಾಗಿ ನಾನು ಅವರ ಮತಗಳಿಂದ ಶಾಸಕನಾಗಲು ಬಯಸುವುದಿಲ್ಲ. ಅವರು ನನಗೆ ಮತ ಹಾಕಿದರೆ ನನಗೆ ವಿಧಾನಸಭೆಯಲ್ಲಿ ಕೂರಲು ಸಾಧ್ಯವಾಗುವುದಿಲ್ಲ' ಎಂದು ಸರ್ಮಾ ಹೇಳಿದ್ದಾರೆ.

ಅಸ್ಸಾಂ ಚುನಾವಣೆ: ನಾಗರಿಕ ನೋಂದಣಿಯಲ್ಲಿ ಹೆಸರಿಲ್ಲದಿದ್ದರೂ ಮತದಾನಅಸ್ಸಾಂ ಚುನಾವಣೆ: ನಾಗರಿಕ ನೋಂದಣಿಯಲ್ಲಿ ಹೆಸರಿಲ್ಲದಿದ್ದರೂ ಮತದಾನ

'ಈ ಜನರು ಅಸ್ಸಾಂ ಸಂಸ್ಕೃತಿ ಮತ್ತು ಭಾಷೆಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ. ಅಲ್ಲದೆ, ಭಾರತೀಯ ಸಂಸ್ಕೃತಿ ಸಂಯೋಜನೆಯನ್ನು ಪ್ರಶ್ನಿಸುತ್ತಿದ್ದಾರೆ. ಅವರು ನಮಗೆ ಮತ ಹಾಕಬಾರದು' ಎಂದಿದ್ದಾರೆ.

Dont Need Miya Muslims Vote, They Are Very Communal: Himanta Biswas Sarma

ತಮ್ಮನ್ನು ಮಿಯಾ ಮುಸ್ಲಿಮರು ಎಂದು ಗುರುತಿಸಿಕೊಳ್ಳುವ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ. ಕಾಂಗ್ರೆಸ್ ಕೂಡ ಅದನ್ನು ಮಾಡಬೇಕು ಎಂದು ಸರ್ಮಾ ಒತ್ತಾಯಿಸಿದ್ದಾರೆ. ಅಸ್ಸಾಂನಲ್ಲಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ನಡೆಯಬೇಕಿದೆ.

English summary
Assam minister Himanta Biswas Sarma said that BJP does not need votes from Miya Muslim community as they are very communal and challenging Assamese culture and language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X