ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಬಂಡಾಯ ಶಾಸಕರಿಗೆ ವೈ+ ಭದ್ರತೆ ನೀಡಿದ ಕೇಂದ್ರ

|
Google Oneindia Kannada News

ಗುವಾಹಟಿ, ಜೂ. 26: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಶಿವಸೇನೆಯ ಬಂಡಾಯ ಶಾಸಕರಿಗೆ ಮುಂಜಾಗ್ರತೆಯ ಕ್ರಮವಾಗಿ ಕೇಂದ್ರ ಸರ್ಕಾರವು ವೈ+ ಶ್ರೇಣಿಭದ್ರತೆಯನ್ನು ನೀಡಿದೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಏಕನಾಥ್ ಶಿಂಧೆ ಅವರ ಪಾಳಯಕ್ಕೆ ಸೇರಿರುವ 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರ ಸರ್ಕಾರವು ಸಶಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿಯ ವೈ+ಭದ್ರತೆಯನ್ನು ಒದಗಿಸಿದೆ.

Breaking: ಶಿವಸೇನೆ ಬಂಡಾಯ ಶಾಸಕರು ತಂಗಿರುವ ಹೋಟೆಲ್ ಬಳಿ ಟಿಎಂಸಿ ಪ್ರತಿಭಟನೆBreaking: ಶಿವಸೇನೆ ಬಂಡಾಯ ಶಾಸಕರು ತಂಗಿರುವ ಹೋಟೆಲ್ ಬಳಿ ಟಿಎಂಸಿ ಪ್ರತಿಭಟನೆ

ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಡಿಜಿಪಿ ರಜನೀಶ್ ಸೇಠ್ ಮತ್ತು ಇತರರಿಗೆ ಬರೆದ ಪತ್ರದಲ್ಲಿ ಬಂಡಾಯ ಶಾಸಕರ ಕುಟುಂಬ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆರೋಪಿಸಿ ಒಂದು ದಿನದ ನಂತರ ಇದು ಈ ಬೆಳವಣಿಗೆ ಬಂದಿದೆ. ಆದರೆ ಮಹಾ ವಿಕಾಸ್ ಅಘಾಡಿ ಸರ್ಕಾರ ಈ ಆರೋಪಗಳನ್ನು ತಿರಸ್ಕರಿಸಿತ್ತು.

ಮಹಾರಾಷ್ಟ್ರದಾದ್ಯಂತ ಬಂಡಾಯ ಶಾಸಕರ ಕಚೇರಿಗಳನ್ನು ಶಿವಸೈನಿಕರು ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಏಕನಾಥ್‌ ಶಿಂಧೆ ಅವರ ಪತ್ರ ಬರೆದಿದ್ದರು. ಠಾಕ್ರೆಯವರ ಶಿವಸೇನೆ ಬೀದಿಗಿಳಿಯುವುದಾಗಿ ಬೆದರಿಕೆ ಹಾಕಿರುವ ಕಾರಣ ಮುಂದಿನ ಕಾರ್ಯತಂತ್ರವನ್ನು ಚರ್ಚಿಸಲು ಶಿಂಧೆ ಅವರು ಭಾನುವಾರದಂದು ಅಸ್ಸಾಂನ ಗುವಾಹಟಿಯ ಹೋಟೆಲ್‌ನಲ್ಲಿ ತಮ್ಮೊಂದಿಗೆ ಇರುವ ಶಾಸಕರ ಸಭೆಯನ್ನು ಕರೆದಿದ್ದಾರೆ.

ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!

 ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ

ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ

ಜೂ. 23ರಂದು ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿರುವ ಹೋಟೆಲ್‌ ಮುಂದೆ ಟಿಎಂಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಸ್ಸಾಂನ ಟಿಎಂಸಿ ಮುಖ್ಯಸ್ಥ ರಿಪುನ್ ಬೋರಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಟಿಎಂಸಿ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.

 ಬಂಡಾಯ ಶಾಸಕರಿಗೆ ಅಸ್ಸಾಂ ಆತಿಥ್ಯ

ಬಂಡಾಯ ಶಾಸಕರಿಗೆ ಅಸ್ಸಾಂ ಆತಿಥ್ಯ

ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಮುಖ್ಯಮಂತ್ರಿ ಉದ್ದವ್‌ ಠಾಕ್ರೆಯ ಸರ್ಕಾರವನ್ನು ಬೀಳಿಸಲು ಅಸ್ಸಾಂ ಬಿಜೆಪಿ ಸರ್ಕಾರ ನೆರವಾಗುತ್ತಿದೆ . ಹೀಗಾಗಿ ಶಿವಸೇನೆಯ ಬಂಡಾಯ ಶಾಸಕರಿಗೆ ಆತಿಥ್ಯ ನೀಡುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಅಸ್ಸಾಂನ ರ್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ತಂಗಿದ್ದಿ, ಟಿಎಂಸಿ ಕಾರ್ಯಕರ್ತರು ಅಲ್ಲಿ ಪ್ರತಿಭಟನೆ ನಡೆಸಿದ್ದಾರೆ.

 55 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತ

55 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತ

ಅಸ್ಸಾಂನಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ಯವ್ಯಸ್ತವಾಗಿದ್ದು, ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದೆ. ರಾಜ್ಯದಲ್ಲಿರುವ ಬ್ರಹ್ಮಪುತ್ರ ಮತ್ತು ಬರಾಕ್‌ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ಮೇ ತಿಂಗಳಲ್ಲಿ ಇದುವರೆಗೆ 55 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಗಿದ್ದು, 89 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡದ ಅಸ್ಸಾಂ ಸರ್ಕಾರ ಈಗ ಮಹಾರಾಷ್ಟ್ರ ಬಂಡಾಯ ಶಾಸಕರನ್ನು ಐಷಾರಾಮಿ ಹೋಟೆಲ್‌ನಲ್ಲಿ ಇಟ್ಟು ಸಲುಹುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

 ಸರ್ಕಾರದ ಮೂರನೇ ಎರಡರಷ್ಟು ಬಲ

ಸರ್ಕಾರದ ಮೂರನೇ ಎರಡರಷ್ಟು ಬಲ

ಶಿವಸೇನೆಯ 55 ಶಾಸಕರ ಪೈಕಿ ಕನಿಷ್ಠ 38 ಶಾಸಕರ ಬೆಂಬಲವಿದೆ ಎಂದು ಏಕನಾಥ್‌ ಶಿಂಧೆ ಹೇಳಿಕೊಂಡಿದ್ದಾರೆ. ಇದು 288 ಸದಸ್ಯರ ಮಹಾರಾಷ್ಟ್ರ ಶಾಸಕಾಂಗ ಸಭೆಯಲ್ಲಿ ಪಕ್ಷದ ಮೂರನೇ ಎರಡರಷ್ಟು ಬಲವನ್ನು ಹೊಂದಿದೆ. ಶಿಂಧೆಯವರನ್ನು ಅವರ ಮಾತಿನ ಪ್ರಕಾರ ತೆಗೆದುಕೊಳ್ಳುವುದಾದರೆ, ಅವರು ಒಂದು ಪಕ್ಷವನ್ನು ತೊರೆದು ಮತ್ತೊಂದು ರಾಜಕೀಯ ಪಕ್ಷವನ್ನು ರಚಿಸಬಹುದು ಅಥವಾ ಇನ್ನೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು ಎಂದು ಅರ್ಥ. ಈ ಎರಡೂ ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ತೀವ್ರ ಪತನಕ್ಕೆ ಕಾರಣವಾಗುತ್ತದೆ.

English summary
center have given The Shiv Sena's rebel MLAs to Y + security as a precautionary measure in the wake of the Maharashtra political crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X