ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಎಫ್ ಎಎಸ್ ಐ, ಅವರ ಪತ್ನಿ ಈಗ ಅಸ್ಸಾಂನಲ್ಲಿ 'ವಿದೇಶೀಯರು'

By ಅನಿಲ್ ಆಚಾರ್
|
Google Oneindia Kannada News

ಗುವಾಹತಿ, ಆಗಸ್ಟ್ 23: ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಸಹಾಯಕ ಸಬ್ ಇನ್ ಸ್ಪೆಕ್ಟರ್ ಹಾಗೂ ಅವರ ಪತ್ನಿಯನ್ನು ವಿದೇಶೀಯರು ಎಂದು ಘೋಷಿಸಲಾಗಿದೆ. ಪೂರ್ವ ಅಸ್ಸಾಂನ ಜೊಹ್ರತ್ ಪಟ್ಟಣದ ವಿದೇಶಿಯರ ನ್ಯಾಯಮಂಡಳಿಯು ಈ ಘೋಷಣೆ ಮಾಡಿದೆ. ಮುಜಿಬುರ್ ರೆಹಮಾನ್ ಮತ್ತು ಅವರ ಪತ್ನಿಯನ್ನು ಭಾರತೀಯೇತರರು ಎಂದು ಜುಲೈ ತಿಂಗಳಲ್ಲಿ ನೀಡಿದ ತೀರ್ಪಿನಲ್ಲಿ ಏಕಪಕ್ಷೀಯವಾಗಿ ಘೋಷಿಸಲಾಗಿದೆ.

ಈ ಅಧಿಕಾರಿಯ ಪೋಷಕರು, ಸೋದರ- ಸೋದರಿಯರ ಪೌರತ್ವದ ಬಗ್ಗೆ ಯಾವುದೇ ಸಂಶಯ ಇಲ್ಲ. ಅಸ್ಸಾಂ- ನಾಗಾಲ್ಯಾಂಡ್ ಗಡಿಯ ಸಮೀಪ ಗೋಲಾಘಾಟ್ ಜಿಲ್ಲೆಯ ಉದಯ್ ಪುರ್- ಮಿಕಿರ್ ಪಟ್ಟಿಯಲ್ಲಿ ಈ ಕುಟುಂಬ ವಾಸವಿದೆ.

ಅಸ್ಸಾಂ ಪ್ರವಾಹ ಸಮಸ್ಯೆ ನಿವಾರಣೆಗೆ ಏರ್‌ಟೆಲ್ ಹೇಗೆ ಸಹಾಯ ಮಾಡುತ್ತಿದೆ ಗೊತ್ತೆ?ಅಸ್ಸಾಂ ಪ್ರವಾಹ ಸಮಸ್ಯೆ ನಿವಾರಣೆಗೆ ಏರ್‌ಟೆಲ್ ಹೇಗೆ ಸಹಾಯ ಮಾಡುತ್ತಿದೆ ಗೊತ್ತೆ?

ರೆಹಮಾನ್ ಅವರು ಸದ್ಯಕ್ಕೆ ಪಂಜಾಬ್ ನಲ್ಲಿ ಸೇವೆಗೆ ನಿಯೋಜನೆ ಆಗಿದ್ದಾರೆ. ಜುಲೈ ಕೊನೆ ವಾರದಲ್ಲಿ ರಜಾ ಕಳೆಯಲು ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ತೀರ್ಪಿನ ಬಗ್ಗೆ ಗೊತ್ತಾಗಿದೆ.

BSF ASI And His Wife Declared Foreigners In Assam

ನಮ್ಮ ಹತ್ತಿರ 1923ನೇ ಇಸವಿಯ ಭೂ ದಾಖಲಾತಿಗಳು ಇವೆ. ಯಾರೋ ಕುಡುಕರ ಮಾತು ಕೇಳಿಸಿಕೊಂಡು ನಿಜವಾದ ಭಾರತದ ನಾಗರಿಕನನ್ನೇ ವಿದೇಶಿ ಎನ್ನುವುದು ತೀರಾ ಚಿಲ್ಲರೆತನ. ನನ್ನ ಕುಟುಂಬಕ್ಕೆ ನ್ಯಾಯಮಂಡಳಿಯ ನೋಟಿಸ್ ಕೂಡ ಬಂದಿಲ್ಲ. ಕರ್ತವ್ಯದ ಮೇಲೆ ಹೊರಗೆ ಇದ್ದಾಗ ನನ್ನ ಗ್ರಾಮದ ಮುಖ್ಯಸ್ಥರೂ ಈ ಬಗ್ಗೆ ತಿಳಿಸಿಲ್ಲ ಎಂದು ರೆಹಮಾನ್ ಹೇಳಿದ್ದಾರೆ. ಇದೀಗ ರೆಹಮಾನ್ ಅವರು ಗುವಾಹತಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ನಿವೃತ್ತ ಯೋಧ ಮೊಹಮ್ಮದ್ ಸನಾವುಲ್ಲಾ ಅವರಿಗೆ ಜೂನ್ ನಲ್ಲಿ ಜಾಮೀನು ಸಿಕ್ಕಿತ್ತು. ಅವರನ್ನು ಮೇ 28ರಂದು ಗುವಾಹತಿಯಲ್ಲಿ ಇರುವ ವಿದೇಶಿ ನ್ಯಾಯಮಂಡಳಿಯಿಂದ 'ವಿದೇಶೀಯ' ಎಂದು ಘೋಷಿಸಲಾಗಿತ್ತು. ಪಶ್ಚಿಮ ಅಸ್ಸಾಂನ ಗೋಲ್ ಪರದಲ್ಲಿರುವ ವಿಚಾರಣೆ ಕೇಂದ್ರದಲ್ಲಿ ಅವರು ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರು.

English summary
BSF ASI Muzibur Rahman and his wife declared as 'Foreigners' in Assam. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X