• search
 • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸ್ಸಾಂ ತೈಲಬಾವಿಯಲ್ಲಿ ಸ್ಫೋಟ: 3 ಮಂದಿ ವಿದೇಶಿ ತಜ್ಞರಿಗೆ ಗಾಯ

|

ಗುವಾಹಟಿ, ಜುಲೈ 22: ಅಸ್ಸಾಂ ತೈಲಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು, ಮೂರು ಮಂದಿ ವಿದೇಶಿ ತಜ್ಞರು ಗಾಯಗೊಂಡಿದ್ದಾರೆ.

   America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

   ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯ ಬಾಘ್‌ಜನ್‌ ಪ್ರದೇಶದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ ತೈಲ ಬಾವಿಯಲ್ಲಿ ಸ್ಫೋಟ ಸಂಭವಿಸಿದೆ.

   ಮೂರು ಮಂದಿ ವಿದೇಶಿ ತಜ್ಞರು ಕಳೆದ ಒಂದು ತಿಂಗಳಿನಿಂದ ಆ ತೈಲ ಬಾವಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು.

   ಸ್ಫೋಟದಲ್ಲಿ ತಜ್ಞರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಯಿಲ್ ಇಂಡಿಯಾ ಸೀನಿಯರ್ ಮ್ಯಾನೇಜರ್ ತಿಳಿಸಿದ್ದಾರೆ.

   ಅಸ್ಸಾಂ ತೈಲ ಬಾವಿ ಅಗ್ನಿ ಅವಘಡ: 638 ಮೆ. ಟನ್ ಕಚ್ಚಾ ತೈಲ ನಷ್ಟ ಸಾಧ್ಯತೆ

   ತಜ್ಞರನ್ನು ಆಂಥೊನಿ ಸ್ಟೀವನ್ ರೆನಾಲ್ಡ್ಸ್, ಕ್ರೇಗ್ ನೇಲ್ ಡಂಕನ್, ಡೌಗ್ ಡಲ್ಲಾಸ್ ಎಂದು ಗುರುತಿಸಲಾಗಿದೆ.

   ಬ್ಲೋ ಔಟ್ ಪ್ರಿವೆಂಟರ್ ಇಲ್ಲದೆಯೇ ತೈಲ ಬಾವಿಯನ್ನು ತೆರೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.

   ಮೇ 28ರಿಂದಲೇ ತೈಲ ಬಾವಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿತ್ತು. ಜೂನ್ 9 ರಂದು ಒಮ್ಮೆ ಬೆಂಕಿ ಕಾಣಿಸಿಕೊಂಡಿತ್ತು. ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದರು.

   English summary
   A massive blast occurred near the Oil India Limited's Baghjan well in Assam's Tinsukia district on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X