• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸ್ಸಾಂ ಮತ್ತೆ ಒಳನುಸುಳುಕೋರರ ಕೇಂದ್ರವಾಗಲು ಬಿಡುವುದಿಲ್ಲ: ಅಮಿತ್ ಶಾ

|
Google Oneindia Kannada News

ಗುವಾಹಟಿ, ಮಾರ್ಚ್ 31: ಅಸ್ಸಾಂ ಮತ್ತೆ ಒಳನುಸುಳುಕೋರರ ಕೇಂದ್ರವಾಗಲು ನಾನು ಬಿಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಗಳನ್ನು ಕೈಗೊಂಡಿದ್ದಾರೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದಿನ್ ಅಜ್ಮಲ್ ಅವರಿಗೆ ಸವಾಲು ಹಾಕಿರುವ ಅಮಿತ್ ಶಾ ಯಾವುದೇ ಕಾರಣಕ್ಕೂ ಅಸ್ಸಾಂ ಮತ್ತೆ ಒಳನುಸುಳುಕೋರರ ಕೇಂದ್ರವಾಗಲು ಬಿಡುವುದಿಲ್ಲ, ಕಳೆದ ಐದು ವರ್ಷಗಳಿಂದ ಭೂಭಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ.

ಕಾಂಗ್ರೆಸ್ ಬಿಜೆಪಿಯಂತಲ್ಲ, ಚುನಾವಣೆ ವೇಳೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ: ರಾಹುಲ್ ಗಾಂಧಿಕಾಂಗ್ರೆಸ್ ಬಿಜೆಪಿಯಂತಲ್ಲ, ಚುನಾವಣೆ ವೇಳೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ: ರಾಹುಲ್ ಗಾಂಧಿ

ಜನರು ಯಾರು ಇರಬೇಕು ಯಾರು ಇರಬಾರದು ಎಂದು ತೀರ್ಮಾನ ಮಾಡುತ್ತಾರೆ ಎಂದು ಬಿಜ್ನಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಮಯದಲ್ಲಿ ಹೇಳಿದರು. ಬಂಗಾಳದಲ್ಲಿ ಮೊದಲ ಹಂತದ 30 ಕ್ಷೇತ್ರಗಳ ಪೈಕಿ 26 ಮತ್ತು ಅಸ್ಸಾಂನ ಮೊದಲ ಹಂತದ 47 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಅಮಿತ್ ಶಾ ಭವಿಷ್ಯ ನುಡಿದರು.

ಎರಡೂ ರಾಜ್ಯಗಳಲ್ಲಿ ಶೇಕಡಾವಾರು ಮತದಾನ ಪ್ರಮಾಣ ಅಧಿಕವಾಗಿದ್ದು, ಇದು ಬಿಜೆಪಿ ಪರ ಉಭಯ ರಾಜ್ಯಗಳ ಜನರ ಒಲವು ಎತ್ತಿ ತೋರಿಸುತ್ತದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಪರ ಮತದಾರನ ಒಲವು ಕಂಡುಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳು ಲಭಿಸಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

English summary
Union Home Minister Amit Shah on Wednesday told AIUDF Chief Badruddin Ajmal sternly that BJP will not allow Assam to become a hub for infiltrators again after the saffron party had successfully freed the land encroached by them during the last five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X