ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ರಾಮಮಂದಿರ: ಅಸ್ಸಾಂ ಮುಸ್ಲಿಂ ಸಂಘಟನೆಯಿಂದ ದೇಣಿಗೆ

|
Google Oneindia Kannada News

ಗುವಾಹಟಿ, ನವೆಂಬರ್ 10: ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಕುರಿತಂತೆ ಶನಿವಾರ ತೀರ್ಪು ಹೊರಬಿದ್ದಿದೆ.

ರಾಮಮಂದಿರ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಮುಸಲ್ಮಾನರೂ ಮಂದಿರ ನಿರ್ಮಾಣದಲ್ಲಿ ಭಾಗಿಯಾಗುವ ಸೂಚನೆ ದೊರೆತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಅಸ್ಸಾಂನ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯೊಂದು ಘೋಷಿಸಿದೆ.

2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಿದ್ದ ಕಾನೂನು ಅಡೆತಡೆಗಳು ನಿವಾರಣೆಯಾದಂತೆ ಮಂದಿರ ನಿರ್ಮಾಣಕ್ಕೆ ಹಿಂದು ಸಂಘಟನೆಗಳು ಭರದ ಸಿದ್ಧತೆಯಲ್ಲಿ ತೊಡಗಿವೆ.

Ayodhya Ram Mandir Donations From Assam Muslim Organization

ಸುಪ್ರೀಂ ಕೊರ್ಟ್​ ನೀಡಿದ ಐತಿಹಾಸಿಕ ತೀರ್ಪನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲರು ಸ್ವಾಗತಿಸಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಕೋರುತ್ತೇವೆ. ನಮ್ಮ ಸಂಘದ ವತಿಯಿಂದ ರಾಮಾಲಯ ನಿರ್ಮಾಣಕ್ಕೆ 1 ಲಕ್ಷ ರೂ ದೇಣಿಗೆ ನೀಡುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮೈನುಲ್ ಹಕ್ ಹೇಳಿದ್ದಾರೆ.

ಅಸ್ಸಾಂನ ಸ್ಥಳೀಯ ಮುಸ್ಲಿಮರ ಯುವ ಮತ್ತು ವಿದ್ಯಾರ್ಥಿ ಪರಿಷತ್ತಿನ ಅಂಗವಾದ ಆಲ್ ಅಸ್ಸಾಂ ಗೋರಿಯಾ ಮೋರಿಯಾ ಯುವಛತ್ರ ಪರಿಷತ್ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆ ತೀರ್ಪು: ಪಾಕಿಸ್ತಾನದ ಪ್ರತಿಕ್ರಿಯೆ ಹೀಗಿತ್ತುಅಯೋಧ್ಯೆ ತೀರ್ಪು: ಪಾಕಿಸ್ತಾನದ ಪ್ರತಿಕ್ರಿಯೆ ಹೀಗಿತ್ತು

ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆ ಮಾಡಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಪರ್ಯಾಯವಾಗಿ ಸುನ್ನಿ ವಕ್ಫ್ ಮಂಡಳಿಗೆ ಒದಗಿಸಬೇಕು ಎಂದು ಹೇಳಿದೆ.

ವಿವಾದಿತ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟಿಗಳನ್ನು ಒಳಗೊಂಡ ಮಂಡಳಿ ರಚನೆಗೆ ಮೂರು ತಿಂಗಳಲ್ಲಿ ಯೋಜನೆಯೊಂದನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

English summary
Ayodhya Ram Mandir: Assam Muslim Organization Give 1 Lakh Donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X