• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ

|
Google Oneindia Kannada News

ಗುವಾಹಟಿ, ಜು.12: ಅಸ್ಸಾಂನ ದಕ್ಷಿಣ ಬೆಟ್ಟಗಳ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ತನ್ನ ಸ್ವಂತ ಕಾರ್ಯಕರ್ತರಿಂದ ಗುಂಡು ಹಾರಿಸಲ್ಪಟ್ಟ ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್‌ಎಫ್‌)ನ ಸ್ವಯಂ ಘೋಷಿತ ಕಮಾಂಡರ್ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾನೆ.

ಪೊಲೀಸರ ಪ್ರಕಾರ, ಮರದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ವೀರಪ್ಪನ್ ಎಂದೂ ಕರೆಯಲ್ಪಡುವ ಮಂಗಿನ್ ಖಲ್ಹೌ, ಈ ಗುಂಪಿನ ಏಕೈಕ ಹಿರಿಯ ಸದಸ್ಯನಾಗಿದ್ದನು. ಈ ಗುಂಪು ಹಲವಾರು ನಾಯಕರನ್ನು ಪೊಲೀಸ್‌ರೊಂದಿಗೆ ಮುಖಾಮುಖಿ ಸಂದರ್ಭ ಕಳೆದುಕೊಂಡಿದೆ ಮತ್ತು ಕಳೆದ ಒಂದು ವರ್ಷದಲ್ಲಿ ಹಲವಾರು ಮಂದಿ ಶರಣಾಗಿದ್ದಾರೆ. ಹೀಗಾಗಿ ಈಗ ಗುಂಪಿಗೆ ಯಾರೂ ನಾಯಕರಿಲ್ಲದಂತಾಗಿದೆ ಎಂದು ವರದಿಯಾಗಿದೆ.

'ಬಿಜೆಪಿಗೆ ಸೇರಿ' : ಪ್ರತಿಪಕ್ಷದ ಶಾಸಕರಿಗೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಮನವಿ'ಬಿಜೆಪಿಗೆ ಸೇರಿ' : ಪ್ರತಿಪಕ್ಷದ ಶಾಸಕರಿಗೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಮನವಿ

ಭಾನುವಾರ, ಬೊಕಾಜನ್ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದ ಭೂಪ್ರದೇಶವಾದ ಖೆಂಗ್‌ಪಿಬುಂಗ್‌ನಲ್ಲಿ ಕಾರ್ಬಿ ಆಂಗ್ಲಾಂಗ್ ಜಿಲ್ಲಾ ಕೇಂದ್ರ ಕಚೇರಿ ದಿಫುವಿನಿಂದ 56 ಕಿ.ಮೀ ದೂರವಿರುವ ಕಾಡಿನಲ್ಲಿ ಗುಂಪಿನ ಸದಸ್ಯರ ನಡುವೆ ಯಾವುದೋ ವಿಚಾರದಲ್ಲಿ ಜಗಳ ನಡೆದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, "ಮಂಗಿನ್ ಮೇಲೆ ಹಲವಾರು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾರೆ. ಭಾನುವಾರ ಬೆಳಿಗ್ಗೆ ಪೊಲೀಸರು ಆತನ ಮೃತದೇಹ ವಶಕ್ಕೆ ಪಡೆದಿದ್ದಾರೆ. ಆತನನ್ನು ತನ್ನದೇ ಕಾರ್ಯಕರ್ತರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಶಂಕಿಸಲಾಗಿದೆ," ಎಂದು ತಿಳಿಸಿದ್ದಾರೆ. ಶವವನ್ನು ಬೊಕಾಜನ್‌ನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಯುಪಿಆರ್‌ಎಫ್‌ ಹೆಚ್ಚಾಗಿ ಅಸ್ಸಾಂನ ದಕ್ಷಿಣ ಬೆಟ್ಟಗಳಲ್ಲಿ ವಾಸಿಸುವ ಕುಕಿ ಸಮುದಾಯಕ್ಕೆ ಸೇರಿದ ಕಾರ್ಯಕರ್ತರನ್ನು ಒಳಗೊಂಡಿದೆ. ಕಳೆದ ದಶಕದಲ್ಲಿ ಸಿಂಗಾಸನ್ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮ್ಯಾನ್ಮಾರ್ ಮೂಲಕ ಚೀನಾದ ಯುನಾನ್ ಮೂಲದ ಆರ್ಡನೆನ್ಸ್ ಕಾರ್ಖಾನೆಯಿಂದ ಆಕ್ರಮಣಕಾರಿ ರೈಫಲ್‌ಗಳನ್ನು ಖರೀದಿಸಿದ್ದ ಕುಖ್ಯಾತಿಯನ್ನು ಈ ಗುಂಪು ಗಳಿಸಿದೆ.

ಬಿಜೆಪಿ ಸೇರ್ಪಡೆಗೊಂಡ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾಬಿಜೆಪಿ ಸೇರ್ಪಡೆಗೊಂಡ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ

ಆದರೆ ಕಳೆದ ಅಕ್ಟೋಬರ್‌ನಲ್ಲಿ ಸಿಂಘಾಸನ್ ಬೆಟ್ಟದಲ್ಲಿ ಪೋಲಿಸ್ ಎನ್‌ಕೌಂಟರ್‌ನಲ್ಲಿ ಅದರ ಕಮಾಂಡರ್ ಮಾರ್ಟಿನ್ ಗೈಟ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಳಿಕ ತಂಡದ ಹಲವಾರು ಮಂದಿ ಶರಣಾಗಲು ಮುಂದೆ ಬಂದಿದ್ದಾರೆ.

ಅಂದಿನ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ಗೆ ಬರೆದ ಪತ್ರದಲ್ಲಿ, ಈ ತಂಡವು "ಶಾಶ್ವತ ಶಾಂತಿ ಮತ್ತು ಸಾಮರಸ್ಯ" ದ ಬಗ್ಗೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಎರಡು ತಿಂಗಳ ಕಾಲ "ಏಕಪಕ್ಷೀಯ ಕದನ ವಿರಾಮ" ಎಂದು ಘೋಷಿಸಿತ್ತು. ಅದರ 40-50 ಕಾರ್ಯಕರ್ತರ ಗುರುತಿನ ಪಟ್ಟಿಯನ್ನು ಸಹ ಹಂಚಿಕೊಂಡಿತ್ತು.

(ಒನ್‌ಇಂಡಿಯಾ ಸುದ್ದಿ)

English summary
A self-styled commander-in-chief of the United People's Revolutionary Front (UPRF) died on the intervening night of Saturday after being shot by his own cadres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X