ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5ರೂ ತಗ್ಗಿಸಿದ ಸರ್ಕಾರ!

|
Google Oneindia Kannada News

ಗುವಾಹಟಿ, ಫೆಬ್ರುವರಿ 12: ಪೆಟ್ರೋಲ್, ಡೀಸೆಲ್ ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಶುಕ್ರವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 29 ಪೈಸೆ ಏರಿಕೆಗೊಂಡು 88.14 ರೂಪಾಯಿ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 35 ಪೈಸೆ ಏರಿಕೆಯಾಗಿ 78.38 ರೂಪಾಯಿಗೆ ತಲುಪಿದೆ.

ಗಗನಮುಖಿಯಾಗುತ್ತಿರುವ ಇಂಧನ ಬೆಲೆ ಏರಿಕೆಗೆ ಎಲ್ಲೆಡೆ ವಿರೋಧವೂ ವ್ಯಕ್ತವಾಗುತ್ತಿದೆ. ಆದರೆ ಇಂಥ ಸಮಯದಲ್ಲಿ ಅಸ್ಸಾಂ ಸರ್ಕಾರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 5 ರೂಪಾಯಿಯನ್ನು ಕಡಿಮೆ ಮಾಡುವುದಾಗಿ ಶುಕ್ರವಾರ ವಿಧಾನಸಭೆಯಲ್ಲಿ ಘೋಷಣೆ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚುವರಿ ಸೆಸ್ ಹಿಂತೆಗೆದುಕೊಂಡಿದ್ದು, ಲೀಟರಿಗೆ 5 ರೂಪಾಯಿ ಕಡಿಮೆ ಮಾಡಿರುವುದಾಗಿ ಘೋಷಿಸಲಾಗಿದೆ. ಮುಂದೆ ಓದಿ...

 ಪೆಟ್ರೋಲ್, ಡೀಸೆಲ್‌ಗೆ 5ರೂ ಕಡಿಮೆ ಮಾಡಿದ ಅಸ್ಸಾಂ ಸರ್ಕಾರ

ಪೆಟ್ರೋಲ್, ಡೀಸೆಲ್‌ಗೆ 5ರೂ ಕಡಿಮೆ ಮಾಡಿದ ಅಸ್ಸಾಂ ಸರ್ಕಾರ

ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಅಸ್ಸಾಂ ಹಣಕಾಸು ಸಚಿವರಾದ ಹಿಮಂತ ಬಿಸ್ವಾಸ್ ಅವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಗ್ಗಿಸುವ ಘೋಷಣೆ ಮಾಡಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಐದು ರೂಪಾಯಿಯನ್ನು ಕಡಿಮೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅಷ್ಟೇ ಅಲ್ಲದೇ ಮದ್ಯದ ಮೇಲಿನ ಸುಂಕವನ್ನು 25%ರಷ್ಟು ಇಳಿಸುವುದಾಗಿಯೂ ತಿಳಿಸಲಾಗಿದೆ.

ಪೆಟ್ರೋಲ್, ಡೀಸೆಲ್ ದರ ಸತತ 3ನೇ ದಿನ ಏರಿಕೆ: ಫೆ. 12ರಂದು ಹೀಗಿದೆಪೆಟ್ರೋಲ್, ಡೀಸೆಲ್ ದರ ಸತತ 3ನೇ ದಿನ ಏರಿಕೆ: ಫೆ. 12ರಂದು ಹೀಗಿದೆ

 ಶುಕ್ರವಾರ ಮಧ್ಯ ರಾತ್ರಿಯಿಂದಲೇ ಹೊಸ ಬೆಲೆ ಜಾರಿ

ಶುಕ್ರವಾರ ಮಧ್ಯ ರಾತ್ರಿಯಿಂದಲೇ ಹೊಸ ಬೆಲೆ ಜಾರಿ

ಪೆಟ್ರೋಲ್ ಹಾಗೂ ಡೀಸೆಲ್ ನಲ್ಲಿ ಐದು ರೂಪಾಯಿಯನ್ನು ಕಡಿಮೆ ಮಾಡಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ಈ ಹೊಸ ಬೆಲೆ ಜಾರಿಯಲ್ಲಿರಲಿದೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರ ಈ ರೀತಿ ಘೋಷಣೆ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

 ಬೆಲೆ ಇಳಿಕೆ ಹಿಂದಿನ ಕಾರಣವೇನಿರಬಹುದು?

ಬೆಲೆ ಇಳಿಕೆ ಹಿಂದಿನ ಕಾರಣವೇನಿರಬಹುದು?

ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಬಿಜೆಪಿ ಗೆಲ್ಲಿಸುವ ಹಣಾಹಣಿಯಲ್ಲಿದ್ದಾರೆ. ಚುನಾವಣೆಗೆ ಒಂದು ತಿಂಗಳ ಮುನ್ನ ಇಂಧನ ಬೆಲೆ ಇಳಿಕೆ ಮಾಡಲಾಗಿದೆ. ಇದು ಚುನಾವಣಾ ಕಾರ್ಯತಂತ್ರ ಎನ್ನುವ ಅಭಿಪ್ರಾಯ ವ್ಯಕ್ತಗೊಂಡಿದೆ.

 ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ಚುನಾವಣೆ ಸಾಧ್ಯತೆ

ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ಚುನಾವಣೆ ಸಾಧ್ಯತೆ

ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೊರತಾಗಿಯೂ ಹಲವು ಬಿಜೆಪಿಯ ನಾಯಕರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಈಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಆನಂತರವೂ ಹಲವು ಬಿಜೆಪಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

English summary
Assam government has announced that it has cut petrol and diesel prices by ₹5 and reduced the duty on liquor by 25%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X