• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Just in: 2 ಕೋಟಿ ರೂ. ಮೌಲ್ಯದ ಡ್ರಗ್ಸ್‌ ನಾಶ ಮಾಡಿದ ಅಸ್ಸಾಂ ಪೊಲೀಸರು

|
Google Oneindia Kannada News

ಗುವಾಹಟಿ, ಜುಲೈ 31: ಅಸ್ಸಾಂ ಪೊಲೀಸರು ಕ್ಯಾಚಾರ್ ಜಿಲ್ಲೆಯಾದ್ಯಂತ ನಡೆಸಿದ ಹಲವು ದಾಳಿಗಳಲ್ಲಿ ಸುಮಾರು 1,920 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ನಾಶಪಡಿಸಿದ್ದಾರೆ. ನಿಷೇಧಿತ ಔಷಧಗಳ ವಿಲೇವಾರಿ ಕಾರ್ಯಕ್ರಮದ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ.

31.07 ಕೋಟಿ ರೂಪಾಯಿ ಮೌಲ್ಯದ ಸುಮಾರು 6.214 ಕೆಜಿ ಹೆರಾಯಿನ್, 1,751 ಕೋಟಿ ರೂಪಾಯಿ ಮೌಲ್ಯದ 683 ಕೆಜಿ ಗಾಂಜಾ, 16.26 ಕೋಟಿ ಮೌಲ್ಯದ 271 ಕೆಜಿ ಕೆಮ್ಮಿನ ಸಿರಪ್ ಬಾಟಲಿಗಳು ಮತ್ತು 120.80 ಕೋಟಿ ಮೌಲ್ಯದ 6.04 ಲಕ್ಷ ಯಾಬಾ (Yaba) ಮಾತ್ರೆಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಾಶಪಡಿಸಿದ ಒಟ್ಟು ಡ್ರಗ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 1920.02 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸೂಚನೆಯ ಮೇರೆಗೆ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಡಿಐಜಿ ಕಂಗ್ಕನ್ ಜ್ಯೋತಿ ಸೈಕಿಯಾ ಹೇಳಿದ್ದಾರೆ.

"1,920.02 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ನಾವು 10 ಮೇ 2021 ರಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಮತ್ತು ನಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು" ಎಂದು ಡಿಐಜಿ ಕಂಗ್ಕನ್ ಜ್ಯೋತಿ ಸೈಕಿಯಾ ತಿಳಿಸಿದ್ದಾರೆ.

ನಗರದ ಹೊರವಲಯದ ಪ್ರಾಗ್‌ಜ್ಯೋತಿಶಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹತಿಶಿಲಾ ದಾಂಪರಾದಲ್ಲಿ ವಶಪಡಿಸಿಕೊಂಡ 935 ಕೆಜಿ ಮಾದಕ ದ್ರವ್ಯವನ್ನು ಗುವಾಹಟಿ ಪೊಲೀಸರು ಸುಟ್ಟು ಹಾಕಿದ್ದಾರೆ. ಗುವಾಹಟಿಯ ವಿಶೇಷ ಡಿಜಿಪಿ ಮತ್ತು ಪೊಲೀಸ್ ಕಮಿಷನರ್ ಹರ್ಮೀತ್ ಸಿಂಗ್ ಅವರು ಗುವಾಹಟಿಯ ಜಂಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಂತ ಅವರೊಂದಿಗೆ ಡ್ರಗ್ಸ್‌ಗೆ ಬೆಂಕಿ ಇಟ್ಟಿದ್ದಾರೆ.

ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲೂ 68 ಕೋಟಿ ಮೌಲ್ಯದ ಡ್ರಗ್ಸ್ ನಾಶವಾಗಿದೆ. ಅದೇ ರೀತಿ ಬಿಸ್ವನಾಥ್ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ವಶಪಡಿಸಿಕೊಂಡ ಅಪಾರ ಪ್ರಮಾಣದ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ.

English summary
Assam Police destroyed a huge quantity of drugs worth around 1,920 crore recovered in multiple raids conducted across Cachar district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X