ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣದ ಸಮೀಪ ಸೇನಾ ಸಮವಸ್ತ್ರದಲ್ಲಿದ್ದ 11 ಮಂದಿ ಬಂಧನ

|
Google Oneindia Kannada News

ಗುವಾಹಟಿ, ನವೆಂಬರ್ 18: ಅಸ್ಸಾಂನ ಗುವಾಹಟಿಯಲ್ಲಿನ ಎಲ್‌ಜಿಬಿಐ ವಿಮಾನ ನಿಲ್ದಾಣದ ಸಮೀಪ ಭಾರತೀಯ ಸೇನೆಯ ಸಮವಸ್ತ್ರದಲ್ಲಿದ್ದ ಹನ್ನೊಂದು ಬಂಧಿಯನ್ನು ಮಂಗಳವಾರ ಬಂಧಿಸಲಾಗಿದೆ. ಸೇನಾ ಸಮವಸ್ತ್ರದಲ್ಲಿದ್ದ ಈ ವ್ಯಕ್ತಿಗಳು ತಮ್ಮ ಗುರುತಿನ ಚೀಟಿ ತೋರಿಸುವಲ್ಲಿ ವಿಫಲರಾಗಿದ್ದರು. ಅವರ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನೆಗೆ ಮೀಸಲಾದ ಅತ್ಯಧಿಕ ಭದ್ರತೆಯ ವಲಯಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈ ವ್ಯಕ್ತಿಗಳ ಚಟುವಟಿಕೆಯ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲ. ಸೇನಾ ವಿಭಾಗದಲ್ಲಿ ಮೊದಲು ನಾಲ್ವರನ್ನು ಗಸ್ತು ಪಡೆ ವಶಕ್ಕೆ ಪಡೆದುಕೊಂಡಿತ್ತು. ಅದರ ಬಳಿಕ ಇನ್ನೂ ಏಳು ಮಂದಿಯನ್ನು ಬಂಧಿಸಲಾಯಿತು. ತಮ್ಮ ಯಾವುದೇ ಗುರುತಿನ ಚೀಟಿ ತೋರಿಸಲು ವಿಫಲವಾಗಿದ್ದಕ್ಕೆ ಹಾಗೂ ತಮ್ಮ ಚಲನವಲನಗಳಿಗೆ ಸೂಕ್ತ ಕಾರಣ ನೀಡದ ಕಾರಣ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಡಿಯಲ್ಲಿ ನಮ್ಮ ಸೈನಿಕರನ್ನು ಬಲವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ನರೇಂದ್ರ ಮೋದಿಗಡಿಯಲ್ಲಿ ನಮ್ಮ ಸೈನಿಕರನ್ನು ಬಲವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ನರೇಂದ್ರ ಮೋದಿ

'ನಾವು ಎಲ್ಲ 11 ಮಂದಿಯನ್ನು ಬಂಧಿಸಿದ್ದೇವೆ. ಐಪಿಸಿ ವಿವಿಧ ಕಠಿಣ ಸೆಕ್ಷನ್‌ಗಳ ಅಡಿ ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದೇವೆ. ಬಂಧಿತ ವ್ಯಕ್ತಿಗಳು ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ' ಎಂದು ಗುವಾಹಟಿ ಜಂಟಿ ಪೊಲೀಸ್ ಆಯುಕ್ತ ದೇಬ್ರಾಜ್ ಉಪಾಧ್ಯಾಯ ತಿಳಿಸಿದ್ದಾರೆ.

 Assam Police Arrests 11 In Army Uniform, Couldnt Present ID Cards

'ಅವರು ಅಕ್ರಮವಾಗಿ ಸೇನಾ ಸಮವಸ್ತ್ರ ಧರಿಸಿದ್ದರು ಮತ್ತು ತಾವು ಭಾರತೀಯ ಸೇನೆಗೆ ಸಂಬಂಧಿಸಿದವರು ಎಂಬುದಕ್ಕೆ ಯಾವುದೇ ಕಾನೂನಾತ್ಮಕ ಮತ್ತು ಸೂಕ್ತ ಗುರುತಿನ ಚೀಟಿ ತೋರಿಸಲು ಅವರಿಂದ ಸಾಧ್ಯವಾಗಲಿಲ್ಲ. ಇಲ್ಲಿ ಏನೋ ಸಂಚು ನಡೆದಿದೆ ಎಂಬ ಅನುಮಾನ ಮೂಡಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಬೇಕು' ಎಂದಿದ್ದಾರೆ.

ಬಂಧಿತರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ಅವರು ಬಾಡಿಗೆಗೆ ಇದ್ದ ಮನೆಯನ್ನು ಪರಿಶೀಲಿಸಿದಾಗ ಕೆಲವು ನಕಲಿ ಗುರುತಿನ ಚೀಟಿಗಳು ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ.

English summary
Guwahati police have arrested 11 men wearing the Indian Army uniform near LGBI airport after they couldn't show their identity cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X