ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪುಟ್ಬಾಲ್ ಭಾಷೆ!

|
Google Oneindia Kannada News

ಕೊಕ್ರಝಾರ್, ಏಪ್ರಿಲ್ 1: ಅಸ್ಸಾಂನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಮಹಾಮೈತ್ರಿಯ ದೊಡ್ಡ ಸುಳ್ಳು ಮತ್ತು ಡಬಲ್ ಇಂಜಿನ್ ಸರ್ಕಾರದ ಮಹಾ ವಿಕಾಸ ನಡುವಿನ ಹೋರಾಟ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊಕ್ರಝಾರ್‌ನಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಲ್ಲಿನ ಯುವಕರಿಗೆ ಫುಟ್‌ಬಾಲ್ ಕ್ರೀಡೆ ಎಂದರೆ ಬಹಳ ಜನಪ್ರಿಯವಾಗಿದೆ. ಅದೇ ಭಾಷೆಯಲ್ಲಿ ಹೇಳಬೇಕಾದರೆ, ಇಲ್ಲಿನ ಜನರು ಕಾಂಗ್ರೆಸ್ ಮತ್ತು ಮಹಾಮೈತ್ರಿ ಕೂಟಕ್ಕೆ ಜನರು ಮತ್ತೊಮ್ಮೆ ರೆಡ್ ಕಾರ್ಡ್ ತೋರಿಸಲಿದ್ದಾರೆ ಎಂದರು.

ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಜನರು ಅಭಿವೃದ್ಧಿ ಶಾಂತಿ ಮತ್ತು ಸುರಕ್ಷತೆಗಾಗಿ ಎನ್‌ಡಿಎ ಒಕ್ಕೂಟವನ್ನು ನೆಚ್ಚಿಕೊಂಡಿದ್ದಾರೆ. ಕೊಕ್ರಝಾರ್‌ನನ್ನು ಹಿಂಸಾಚಾರಕ್ಕೆ ತಳ್ಳಿದ ಆ ಪಕ್ಷದ ಮುಖಂಡರಿಗೆ ಕಾಂಗ್ರೆಸ್ ತನ್ನ 'ಕೈ' ಮತ್ತು ಅದೃಷ್ಟವನ್ನು ಹಸ್ತಾಂತರಿಸಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಮತ ಬ್ಯಾಂಕ್‌ನ್ನು ಉಳಿಸಿಕೊಂಡು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Assam People Will Trust NDA Govt For Development, Peace, Security Of State, Says PM Modi

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತು:

ಬುಧವಾರವಷ್ಟೇ, ಅಸ್ಸಾಂನ ಮಹಿಳೆಯರ ಕಠಿಣ ಪರಿಶ್ರಮದ ಸಂಕೇತವಾದ ಅಸ್ಸಾಂನ ಗುರುತು ಹೇಗೆ ಸಾರ್ವಜನಿಕವಾಗಿ ಅವಮಾನಿಸಲ್ಪಟ್ಟಿದೆ ಎಂದು ಇಡೀ ಅಸ್ಸಾಂ ರಾಜ್ಯವು ವೀಡಿಯೊದಲ್ಲಿ ನೋಡಿದೆ. ಆ ಚಿತ್ರಗಳನ್ನು ನೋಡಿದ ಅಸ್ಸಾಂ ಪ್ರಿಯರಿಗೆ ನೋವು ಮತ್ತು ಕೋಪ ತರಿಸುತ್ತದೆ ಎಂದು ಪ್ರಧಾನಿ ಮೋದಿ ಕಿಡಿ ಕಾರಿದರು.

ಕಾಂಗ್ರೆಸ್ ಮುಖಂಡರು ಎಐಯುಡಿಎಫ್ ಚಿಹ್ನೆ ಆಗಿರುವ 'ಲಾಕ್ & ಕೀ' ಅನ್ನು ಅಸ್ಸಾಂ ಜನರ ಗುರುತು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಸುಳ್ಳು ಮತ್ತು ಪಿತೂರಿಯನ್ನು ಅರ್ಥಮಾಡಿಕೊಳ್ಳಿ. ಅಂತಹ ಜನರು ಮತ್ತೆ ಅಧಿಕಾರಕ್ಕೆ ಬರುವ ಮೊದಲು ಶರಣಾಗುತ್ತಿದ್ದಾರೆ. ಈ ತಪ್ಪಿಗೆ ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲ, ಇಡೀ ಮಹಾಮೈತ್ರಿಗೆ ಶಿಕ್ಷೆಯಾಗಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Recommended Video

10 ರೂಪಾಯಿ ಇಳಿಕೆ ಕಂಡ ಎಲ್‌ಪಿಜಿ ಸಿಲಿಂಡರ್‌ ಬೆಲೆ... | Oneindia Kannada

ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಏಪ್ರಿಲ್.1ರಂದು 39 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಅಂತಿಮವಾಗಿ ಏಪ್ರಿಲ್ 6 ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ.2ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.

English summary
Assam People Will Trust NDA Govt For Development, Peace, Security Of State, Says PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X