ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಪ್ರತಿ ವಿರುದ್ಧ ಸುಪ್ರೀಂಗೆ ಮನವಿ

|
Google Oneindia Kannada News

ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮೂಲಕ ಭಾರತೀಯ ನಾಗರಿಕರನ್ನು ಗುರುತಿಸುವ ಯೋಜನೆ ಕರಡು ಪ್ರತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಸ್ಸಾಂನ ರಾಜ್ಯ ಸಂಯೋಜಕರಾದ ಹಿತೇಶ್ ದೇವ್ ಶರ್ಮ ಅವರು ಕರಡು ಪ್ರತಿಯಲ್ಲಿ ಅರ್ಹರಾದವ ಹೆಸರು ನಾಪತ್ತೆಯಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.

ಭಾರತದ ಸಾಮಾನ್ಯ ನಾಗರಿಕರನ್ನು ಮೂರು ಕಾನೂನುಗಳ ಅಡಿಯಲ್ಲಿ (1955ರ ಪೌರತ್ವ ಕಾಯ್ದೆ, 1946ರ ವಿದೇಶಿಗರ ಕಾಯ್ದೆ, 1920ರ ಪಾಸ್‌ಪೋರ್ಟ್ ಕಾಯ್ದೆ) ಒಳ ನುಸುಳುಕೋರರು, ಅಕ್ರಮ ವಲಸಿಗರಿಂದ ಪ್ರತ್ಯೇಕಿಸುವ, ವ್ಯಾಖ್ಯಾನಿಸುವ, ಗುರುತಿಸುವ ಮತ್ತು ಖಾತರಿಪಡಿಸುವ ಕಾರ್ಯ ಮಾಡಲಾಗುತ್ತದೆ.

ಆದರೆ, ರಾಷ್ಟ್ರೀಯ ಪೌರತ್ವ ನೋಂದಣಿಗೆ ಅರ್ಹರಾದ ಸುಮಾರು 50, 000ಕ್ಕೂ ಅಧಿಕ ಮಂದಿ ಹೆಸರನ್ನು ಕರಡು ಪ್ರತಿಯಿಂದ ಹೊರಹಾಕಲಾಗಿದೆ. ಹೀಗಾಗಿ ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಈ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ಅಷ್ಟು ಮಂದಿ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಎನ್ ಆರ್ ಸಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅದೇ ರೀತಿ, ಎನ್ ಆರ್ ಸಿಯ 'ಮೂಲ ನಿವಾಸಿಗಳು' ವಿಭಾಗದ ಅಡಿಯಲ್ಲಿ ಕಾಮರೂಪ್ ಜಿಲ್ಲೆಯ ಸುಮಾರು 30,684 ಜನರಲ್ಲಿ 7,446 ಜನರು ಅನರ್ಹರು ಎಂದು ಕಂಡುಬಂದಿದೆ ಮತ್ತು 23,345 ಜನರು 'ಮೂಲ ನಿವಾಸಿಗಳು' ವಿಭಾಗದ ಹೊರತಾಗಿ ಅರ್ಹರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 'ಮೂಲ ನಿವಾಸಿಗಳು' ವಿಭಾಗದಲ್ಲಿ ಕೇವಲ 107 ಮಂದಿ ಮಾತ್ರ ಅರ್ಹರು ಎಂದಿರುವುದು ಇಲ್ಲಿ ಉಲ್ಲೇಖಾರ್ಹ ಎಂದಿದ್ದಾರೆ.

Assam NRC: State Coordinator Moves Supreme Court Re-verification Of Draft NRC

ರಾಜ್ಯದ ಇತರ ಭಾಗಗಳಲ್ಲಿ ಇದೇ ರೀತಿಯ ಪ್ರಕ್ರಿಯೆಯನ್ನು ನಡೆಸಿದರೆ, ಮೂಲ ನಿವಾಸಿಗಳ ವಿಭಾಗದ ಮೂಲಕ ಎನ್‌ಆರ್‌ಸಿಗೆ ಪ್ರವೇಶಿಸಿದ ಹೆಚ್ಚು ಅನರ್ಹ ವ್ಯಕ್ತಿಗಳು ಇರಬಹುದು.

ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?

ಆದ್ದರಿಂದ ಸಮಯ ಪರಿಶೀಲನೆಗಾಗಿ ಮರು ಪರಿಶೀಲನೆ ಮಾಡುವಂತೆ ಆದೇಶಿಸುವಂತೆ ಶರ್ಮಾ ಅವರು ನ್ಯಾಯಾಲಯವನ್ನು ಕೋರಿದ್ದಾರೆ ಮತ್ತು ಅಸ್ಸಾಂ ಕಾರ್ಯತಂತ್ರದ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುವುದರಿಂದ ಇದು ರಾಷ್ಟ್ರದ ಹಿತದೃಷ್ಟಿಯಿಂದ ಕೂಡಿದೆ ಎಂದಿದ್ದಾರೆ.

Assam NRC: State Coordinator Moves Supreme Court Re-verification Of Draft NRC

"ಸಂಪೂರ್ಣ, ಸಮಗ್ರ, ಸಮಯ-ಪರಿಮಿತಿಯ ಮರು ಪರಿಶೀಲನೆಗೆ ಎನ್ ಆರ್ ಸಿ ಕರಡು ಪ್ರತಿ ಒಳಪಡಲಿ ಮತ್ತು ಎನ್ ಆರ್ ಸಿಯ ಪೂರಕ ಪಟ್ಟಿಗೆ ಸೂಕ್ತವಾದ ನಿರ್ದೇಶನಗಳನ್ನು ನೀಡಬೇಕೆಂದು"ಮನವಿ ಸಲ್ಲಿಸಿದ್ದಾರೆ.

ಚರ್ಚೆ: ಸಿಎಎ, ಎನ್ಆರ್ ಸಿ ಪರ-ವಿರೋಧ ಏನು? ಎತ್ತ? ಏಕೆ?ಚರ್ಚೆ: ಸಿಎಎ, ಎನ್ಆರ್ ಸಿ ಪರ-ವಿರೋಧ ಏನು? ಎತ್ತ? ಏಕೆ?

ಮರು ಪರಿಶೀಲನೆ ಆಯಾ ಜಿಲ್ಲೆಗಳಲ್ಲಿ ಮೇಲ್ವಿಚಾರಣಾ ಸಮಿತಿಯ ಮೇಲ್ವಿಚಾರಣೆಯಲ್ಲಿ ಮಾಡಬೇಕು ಮತ್ತು ಸಮಿತಿಯು ಮೇಲಾಗಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಂದಿರಬೇಕು ಎಂದು ಕೋರಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ವಿಷಯವೆಂದರೆ 3.93 ಲಕ್ಷ ಜನರನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ (ಒಟ್ಟು 40 ಲಕ್ಷದಲ್ಲಿ) ಅವರು ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ.

ಕೆಲವು ಮಾದರಿ ತಪಾಸಣೆ ಮತ್ತು ವಿಶ್ಲೇಷಣೆಯ ನಂತರ, 3.93 ಲಕ್ಷದಲ್ಲಿ 50,695 ಜನರು 'ಮೂಲ ನಿವಾಸಿಗಳು' ಅಥವಾ "ಇತರ ರಾಜ್ಯಗಳ ವ್ಯಕ್ತಿಗಳು" ವಿಭಾಗದ ಅಡಿಯಲ್ಲಿ ಎನ್ಆರ್‌ಸಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Assam NRC: State Coordinator Moves Supreme Court Re-verification Of Draft NRC

ಸಮಗ್ರ ಮರು ಪರಿಶೀಲನೆ ನಂತರ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಆದಾಗ್ಯೂ, ಈ ವ್ಯಕ್ತಿಗಳು ಪಟ್ಟಿಯಿಂದ ಹೊರಗಿಟ್ಟಿದ್ದನ್ನು ಆಕ್ಷೇಪಿಸದ ಕಾರಣ, ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಏಕೆಂದರೆ ಪೌರತ್ವ ನಿಯಮಗಳು 2003 ರ ಪರಿಚ್ಛೇದ 8ನೇ ಷರತ್ತಿನ ಪ್ರಕಾರ ಹಕ್ಕುಗಳು ಮತ್ತು ಆಕ್ಷೇಪಣೆಗಳ ಫಲಿತಾಂಶಗಳಿಂದ ತೃಪ್ತರಾಗದ ವ್ಯಕ್ತಿಗಳು ಮಾತ್ರ ವಿದೇಶಿಯರ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು.

ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ

ಈ ವ್ಯಕ್ತಿಗಳು ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಕಾರಣ, ಅವರು ಈಗ ವಿದೇಶಿಯರ ನ್ಯಾಯಮಂಡಳಿಯ ಮುಂದೆ ಯಾವುದೇ ಮೇಲ್ಮನವಿ ಸಲ್ಲಿಸಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ವ್ಯಕ್ತಿಯು ಆಡಳಿತ ಅಧಿಕಾರಿಗಳ ಎದುರು ದಾಖಲೆಗಳ ಆಧಾರದಲ್ಲಿ ತನ್ನ ಪೌರತ್ವ ಸಾಬೀತುಪಡಿಸುವಂತೆ ಹೇಳುವುದು ಅದರ ಅನುಷ್ಟಾನದ ಮಟ್ಟದಲ್ಲಿಯೇ ಸಮಸ್ಯಾತ್ಮಕವಾಗಿದೆ. ಇದು ಆಡಳಿತಾಧಿಕಾರಿಗಳ ದಬ್ಬಾಳಿಕೆ ಮತ್ತು ಸ್ವೇಚ್ಛಾಚಾರಕ್ಕೂ ಕಾರಣವಾಗಬಹುದು. ಏಕೆಂದರೆ ಭಾರತದ ಜನಸಂಖ್ಯೆಯ ಹೆಚ್ಚಿನ ಪಾಲು ಹಿಂದುಳಿದವರು ಹಾಗೂ ಅವಿದ್ಯಾವಂತರಿದ್ದಾರೆ.

Recommended Video

Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada
Assam NRC: State Coordinator Moves Supreme Court Re-verification Of Draft NRC

ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸುಮಾರು 20 ಲಕ್ಷ ಜನರನ್ನು ವಿದೇಶಿಗರೆಂದು ಪರಿಗಣಿಸಿ ನಾಗರಿಕರ ಪಟ್ಟಿಯಿಂದ ಪ್ರತ್ಯೇಕಿಸಲಾಗಿದೆ. ಇದರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಿವೃತ್ತ ಸೈನಿಕ ಸಹ ಸೇರಿದ್ದಾರೆ. ಹಾಗೆಯೇ 2003ರ ನಿಯಮದಲ್ಲಿನ 'ಅನುಮಾನಾಸ್ಪದ ನಾಗರಿಕ'ನನ್ನು ಗುರುತಿಸುವ ವಿಭಾಗ ಕೂಡ ವಿಚಿತ್ರವಾಗಿದೆ. ಇಲ್ಲಿ ಕೂಡ ಆಡಳಿತಾಧಿಕಾರಿಗಳ ಹಸ್ತಕ್ಷೇಪ ಅಲ್ಲಗಳೆಯುವಂತಿಲ್ಲ.

ಹಾಗೆಯೇ ಅನುಮಾನ ಉಂಟಾದ ನಾಗರಿಕರನ್ನು ಯಾವ ರೀತಿ ವಿಚಾರಣೆ ನಡೆಸಲಾಗುವುದು ಎಂಬುದಕ್ಕೆ ಮಾರ್ಗದರ್ಶಿಯನ್ನು ನೀಡಿಲ್ಲ. ಶಂಕಾಸ್ಪದ ಎನಿಸಿದರೆ ನಿಮಗೆ ಏನು ಮಾಡಲಾಗುತ್ತದೆ ಎಂದು ಕೂಡ ನಿಯಮಗಳು ವಿವರಿಸಿಲ್ಲ. ಆದರೆ 1964ರ ವಿದೇಶಿಗರ (ನ್ಯಾಯಮಂಡಳಿ) ತಿದ್ದುಪಡಿ ಆದೇಶದ ಪ್ರಕಾರ ಅನುಮಾನಾಸ್ಪದ ನಾಗರಿಕರನ್ನು ವಿದೇಶಿಗರ ನ್ಯಾಯಮಂಡಳಿ ವಿಚಾರಣೆಗೆ ಸೂಚಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವಿದೆ.

English summary
The State Co-ordinator of the Assam NRC has approached the Supreme Court seeking a comprehensive and time bound reverification of draft NRC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X