ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ನಲ್ಲಿ ಸಂಗ್ರಹಿಸಿದ್ದ ಎನ್‌ಆರ್‌ಸಿ ಮಾಹಿತಿ ಮಾಯ!

|
Google Oneindia Kannada News

ಗುವಾಹಟಿ, ಫೆಬ್ರವರಿ 12: ದೇಶದಾದ್ಯಂತ ಎನ್‌ಆರ್‌ಸಿ-ಸಿಎಎ ಚರ್ಚೆಗಳು ಜಾರಿ ಇರುವಾಗಲೇ, ದೇಶದಲ್ಲಿ ಮೊದಲಿಗೆ ಎನ್‌ಆರ್‌ಸಿ ಜಾರಿಗೆ ಬಂದಿದ್ದ ಅಸ್ಸಾಂ ನಲ್ಲಿ ಎನ್‌ಆರ್‌ಸಿ ಅಡಿ ಸಂಗ್ರಹಿಸಿದ ನಾಗರೀಕರ ಮಾಹಿತಿ 'ಕ್ಲೌಡ್‌' ನಿಂದ ಮಾಯವಾಗಿವೆ!

ಹೌದು, ಎನ್‌ಆರ್‌ಸಿ ಅಡಿಯಲ್ಲಿ ನಾಗರೀಕರ ಮಾಹಿತಿ ಸಂಗ್ರಹಿಸಿದ್ದ ಅಸ್ಸಾಂ ಸರ್ಕಾರ, ನಾಗರೀಕ ಪಡೆಯುವವರ ಅಂತಿಮ ಪಟ್ಟಿಯನ್ನು ತಯಾರು ಮಾಡಿ ಸುಪ್ರೀಂಕೋರ್ಟ್ ಆದೇಶದಂತೆ ಆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು, ಆದರೆ ಆ ಮಾಹಿತಿಯೇ ಕಾಣೆಯಾಗಿದೆ.

ಮಕ್ಕಳ ಮೇಲೆ ಕಾನೂನು ಕತ್ತಿ: ಪೊಲೀಸರಿಗೆ ಪೋಷಕರ ಪ್ರಶ್ನೆಗಳುಮಕ್ಕಳ ಮೇಲೆ ಕಾನೂನು ಕತ್ತಿ: ಪೊಲೀಸರಿಗೆ ಪೋಷಕರ ಪ್ರಶ್ನೆಗಳು

ಆಗಸ್ಟ್ 31 ರಂದು ಅಸ್ಸಾಂ ಸರ್ಕಾರವು ನಾಗರೀಕ ಪಡೆಯುವವರ, ಪಡೆಯದವರ ಎನ್‌ಆರ್‌ಸಿ ಅಂತಿಮ ಪಟ್ಟಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿತ್ತು, ಆದರೆ ದಿಢೀರನೆ ಪಟ್ಟಿಯೇ ನಾಪತ್ತೆಯಾಗಿದೆ.

Assam NRC Information Gone Missing From Cloud

'ವಿಪ್ರೋ ದೊಂದಿಗಿನ ಒಪ್ಪಂದ ಮರುನವೀಕರಣ ಮಾಡದೇ ಇರುವ ಕಾರಣ ವಿಪ್ರೋ ಹೀಗೆ ಮಾಡಿದೆ' ಎಂದು ಎನ್‌ಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿಯನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿಡುವ ಕ್ಲೌಡ್ ಸೇವೆಯನ್ನು ವಿಪ್ರೋ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಅವರೊಂದಿಗಿನ ಒಪ್ಪಂದ ಅಕ್ಟೋಬರ್ 2019 ಕ್ಕೆ ಅಂತ್ಯವಾಗಿತ್ತು. ಡಿಸೆಂಬರ್ 15 ರಿಂದ ವೆಬ್‌ಸೈಟ್‌ ನಲ್ಲಿ ಮಾಹಿತಿ ಕಾಣೆ ಆಗಿತ್ತು.

ಸಿಎಎ ವಿಚಾರದಲ್ಲಿ ಡಬಲ್ ಗೇಮ್, ಮುಸ್ಲಿಂರಿಗೆ ನೋ ಪ್ರಾಬ್ಲಂ-ರಜನಿಕಾಂತ್ಸಿಎಎ ವಿಚಾರದಲ್ಲಿ ಡಬಲ್ ಗೇಮ್, ಮುಸ್ಲಿಂರಿಗೆ ನೋ ಪ್ರಾಬ್ಲಂ-ರಜನಿಕಾಂತ್

ಎನ್‌ಆರ್‌ಸಿ ಯ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಮಾತನಾಡಿ, 'ಈ ಬಗ್ಗೆ ವಿಪ್ರೋ ಗೆ ಪತ್ರ ಬರೆದಿದ್ದು, ಕೆಲವೇ ದಿನಗಳಲ್ಲಿ ಜನರಿಗೆ ಎನ್‌ಆರ್‌ಸಿ ಮಾಹಿತಿ ಲಭ್ಯವಾಗಲಿದೆ' ಎಂದು ಭರವಸೆ ನೀಡಿದ್ದಾರೆ.

English summary
Assam NRC information gone missing from Assam official website. NRC coordinator said This happens because of Wipro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X