ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಸ್ಸಾಂನಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಮತ್ತೊಂದು ಬಲಿ

|
Google Oneindia Kannada News

ಗುವಾಹಟಿ, ಜುಲೈ 23: ಅಸ್ಸಾಂನಲ್ಲಿ ಕಳೆದ 24 ಗಂಟೆಗಳಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ವೈರಸ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಈ ಸೋಂಕಿನಿಂದ ಸಾವನ್ನಪ್ಪಿದವರು ಸಂಖ್ಯೆ 38 ಕ್ಕೆ ಏರಿದೆ.

ವರದಿಗಳ ಪ್ರಕಾರ, ಜುಲೈ 21 ರಂದು (ಗುರುವಾರ) ಗೋಲಾಘಾಟ್ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ಎರಡು ಸಾವುಗಳು ವರದಿಯಾಗಿದ್ದು, ಜುಲೈ 20 ರಂದು (ಬುಧವಾರ) ಮೂರು ಮಂದಿ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಅಸ್ಸಾಂಗೆ ಮತ್ತೊಂದು ಸಂಕಟ: ಜಪಾನೀಸ್ ಎನ್ಸೆಫಾಲಿಟಿಸ್‌ಗೆ 27 ಬಲಿಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಅಸ್ಸಾಂಗೆ ಮತ್ತೊಂದು ಸಂಕಟ: ಜಪಾನೀಸ್ ಎನ್ಸೆಫಾಲಿಟಿಸ್‌ಗೆ 27 ಬಲಿ

ಅಸ್ಸಾಂನ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬಿಸ್ವನಾಥ್ ಜಿಲ್ಲೆಯಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಇದೇ ವೇಳೆಯಲ್ಲಿ ರಾಜ್ಯದಲ್ಲಿ 15 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ 15 ಪ್ರಕರಣಗಳಲ್ಲಿ ಮೂರು ನಾಗಾವ್ ಜಿಲ್ಲೆಯಿಂದ ವರದಿಯಾಗಿದ್ದು, ಬಕ್ಸಾ ಮತ್ತು ಜೋರ್ಹತ್‌ನಲ್ಲಿ ತಲಾ ಇಬ್ಬರು, ಚಿರಾಂಗ್, ದಿಬ್ರುಗಢ್, ಗೋಲ್‌ಪಾರಾ, ಗೋಲಾಘಾಟ್, ಚರೈಡಿಯೊ, ಶಿವಸಾಗರ್, ತಿನ್ಸುಕಿಯಾ ಮತ್ತು ನಲ್ಬರಿ ಜಿಲ್ಲೆಯಿಂದ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

Assam: Japanese Encephalitis Kills 1 More Toll Reaches 38

ಜುಲೈನಲ್ಲಿ ಇದುವರೆಗೆ ರಾಜ್ಯದಲ್ಲಿ ಒಟ್ಟು 251 ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನ ವಿರುದ್ಧ ಹೋರಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲಾಡಳಿತಗಳು ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದೆ.

ಜಪಾನೀಸ್ ಎನ್ಸೆಫಾಲಿಟಿಸ್ ವೈರಸ್ (ಜೆಇವಿ) ಏಷ್ಯಾದಲ್ಲಿ ವೈರಲ್ ಎನ್ಸೆಫಾಲಿಟಿಸ್ಗೆ ಪ್ರಮುಖ ಕಾರಣವಾಗಿದೆ. ಇದು ಸೊಳ್ಳೆಯಿಂದ ಹರಡುವ ಫ್ಲೇವಿವೈರಸ್ ಆಗಿದ್ದು, ಡೆಂಗ್ಯೂ, ಹಳದಿ ಜ್ವರ ಮತ್ತು ವೆಸ್ಟ್ ನೈಲ್ ವೈರಸ್‌ಗಳಂತೆಯೇ ಅದೇ ಕುಲಕ್ಕೆ ಸೇರಿದ ಸೋಂಕಾಗಿದೆ.

ಜಪಾನೀಸ್ ಎನ್ಸೆಫಾಲಿಟಿಸ್ ವೈರಲ್ ಕಾಯಿಲೆಯ ಮೊದಲ ಪ್ರಕರಣ 1871 ರಲ್ಲಿ ಜಪಾನ್‌ನಲ್ಲಿ ದಾಖಲಾಗಿತ್ತು. ಈ ರೋಗದ ಲಕ್ಷಣಗಳನ್ನು ಹೊಂದಿರುವವರಲ್ಲಿ ಸಾವಿನ ಪ್ರಮಾಣವು ಶೇಕಡಾ 30 ರಷ್ಟಿರುತ್ತದೆ ಎನ್ನಲಾಗಿದೆ.

ಎರಡು ವಿನಾಶಕಾರಿ ಪ್ರವಾಹಗಳ ವಿರುದ್ಧ ಹೋರಾಡಿ ಇತ್ತೀಚೆಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಅಸ್ಸಾಂ ರಾಜ್ಯಕ್ಕೆ ಈಗ ಜಪಾನೀಸ್ ಎನ್ಸೆಫಾಲಿಟಿಸ್ (JE) ಕಾಟ ಶುರುವಾಗಿದ್ದು, ರಾಜ್ಯದಲ್ಲಿ ಆತಂಕದ ವಾತವಾರಣವಿದೆ.

English summary
Japanese Encephalitis update: one more death was reported in last 24 hours in Assam, total death rise to 38. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X