• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಹಿರಂಗವಾಗಿ ಡೊನಾಲ್ಡ್ ಟ್ರಂಪ್ ಕಾಲೆಳೆದ ಅಸ್ಸಾಂ ಹುಡುಗಿ!

|

ಗುವಾಹಟಿ, ನವೆಂಬರ್ 28: 'ನಾನು ನಿಮಗಿಂತ(ಡೊನಾಲ್ಡ್ ಟ್ರಂಪ್) 54 ವರ್ಷ ಚಿಕ್ಕವಳು. ನಾನು ಸಾಧಾರಣ ಅಂಕದೊಂದಿಗೆ ಹೈಸ್ಕೂಲ್ ಮುಗಿಸಿದ್ದೇನೆ. ಆದರೆ ನನಗೆ ಹವಾಮಾನಕ್ಕೂ(weather), ವಾತಾವರಣಕ್ಕೂ(climate) ಇರುವ ವ್ಯತ್ಯಾಸ ಗೊತ್ತು' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಬಹಿರಂಗವಾಗಿಯೇ ಅಮೆರಿಕ ಅಧ್ಯಕ್ಷರ ಕಾಲೆಳೆದಿದ್ದಾಳೆ ಅಸ್ಸಾಮಿನ ಹುಡುಗಿ ಆಸ್ಥಾ ಸರ್ಮಹ್!

ಅಮೆರಿಕದಲ್ಲಿ ಚಳಿ ಹೆಚ್ಚಾಗಿದ್ದು ತಾಪಮಾನ ಕನಿಷ್ಠ -2 ಡಿಗ್ರಿ ಸೆಲ್ಷಿಯಸ್ ತಲುಪಿದೆ. ಈ ಕುರಿತು ಟ್ವೀಟ್ ಮಾಡಿದ್ದ ಟ್ರಂಪ್, 'ಅಮೆರಿಕದ ಅತ್ಯಂತ ಕ್ರೂರ ಚಳಿ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಜಾಗತಿಕ ತಾಪಮಾನಕ್ಕೆ ಏನಾಯಿತು' ಎಂದಿದ್ದರು.

ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಗುದ್ದು ; $ 1.66 ಬಿಲಿಯನ್ ಸೇನಾ ನೆರವು ರದ್ದು

ಅದಕ್ಕೆ ಆಸ್ಥಾ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮ ಲೋಕವೇ ಭೇಷ್ ಎಂದಿದೆ. ಆಕೆಯ ಟ್ವೀಟ್ ಅನ್ನು ಹಲವು ಅಂತಾರಾಷ್ಟ್ರೀಯ ಪತ್ರಿಕೆಗಳು ಪ್ರಕಟಿಸಿ, ಟ್ರಂಪ್ ರನ್ನು ಆಡಿಕೊಂಡಿದ್ದಾರೆ!

ಆಸ್ಥಾ ಸರ್ಮಹ್ ಟ್ವೀಟ್ ನಲ್ಲೇನಿದೆ?

'ನಾನು ನಿಮಗಿಂತ 54 ವರ್ಷ ಚಿಕ್ಕವಳು. ನಾನು ಹೈಸ್ಕೂಲ್ ಅನ್ನು ಸಾಧಾರಣ ಅಂಕದೊಂದಿಗೆ ಮುಗಿಸಿದ್ದೇನೆ. ಆದರೆ ನನಗೆ ವಾತಾವರಣಕ್ಕೂ, ಹವಾಮಾನಕ್ಕೂ ಇರುವ ವ್ಯತ್ಯಾಸ ಗೊತ್ತು. ನಿಮಗೆ ಗೊತ್ತಿಲ್ಲ ಎಂದರೆ ಕೇಳಿ, ಅರ್ಥವಾಗುವಂತೆ ಹೇಳುತ್ತೇನೆ. ನಾನು ಎರಡನೇ ತರಗತಿಯಲ್ಲಿದ್ದಾಗ ಕೊಂಡ ಎನ್ ಸೈಕ್ಲೋಪೀಡಿಯಾವನ್ನು ನಿಮಗೆ ಕೊಡುತ್ತೇನೆ. ಅದರಲ್ಲಿ ಚಿತ್ರ ಸಹಿತ ಮಾಹಿತಿ ಇದೆ' ಎಂದು ಆಸ್ಥಾ ಸರ್ಮಹ್ ಟ್ರಂಪ್ ಗೆ ಟ್ವೀಟ್ ಮಾಡಿದ್ದರು.

ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್

ಮೆಚ್ಚುಗೆಯ ಸುರಿಮಳೆ!

ಆಸ್ಥಾ ಅವರ ಈ ಟ್ವೀಟ್ ಅನ್ನು ನೋಡಿ ಅವರಿಗೆ ಸಾಕಷ್ಟು ಜನ ಭೇಷ್ ಎಂದಿದ್ದಾರೆ. ಆಕೆಯ ಈ ಟ್ವೀಟ್ ಗೆ ಸುಮಾರು 570 ಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದರೆ, 5.7 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ, 24 ಸಾವಿರ ಜನ ಈ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ!

ಟ್ರಂಪ್ 'ಕ್ಸೆನೋ ಫೋಬಿಕ್', ಅವರನ್ನು ಎಂದೂ ಕ್ಷಮಿಸಲ್ಲ ಎಂದ ಮಿಶೆಲ್ ಒಬಾಮ

ಕ್ಲಿಂಟನ್ ಮಾಡಲಾಗದ್ದನ್ನು ಈಕೆ ಮಾಡಿದರು!

ಕ್ಲಿಂಟನ್ ಬಳಿಯೂ ಮಾಡಲಾಗದ ಕೆಲಸವನ್ನು ಈ ಹುಡುಗಿ ಮಾಡಿದರು ಎಂದು ಆದಿತ್ಯ ಜಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಎನ್ ಎನ್ ಸೈಕ್ಲೋಪೀಡಿಯಾ ಓದುತ್ತಿರಬಹುದು!

ಬಹುಶಃ ಟ್ರಂಪ್ ಈಗ ಎನ್ ಸೈಕ್ಲೋಪೀಡಿಯಾ ಓದುತ್ತಿರಬಹುದು. ಅವರು ವಾತಾವರಣ ಮತ್ತು ಹವಾಮಾನದ ನಡುವಿನ ವ್ಯತ್ಯಾಸ ತಿಳಿಯಬೇಕಿದೆ ಎಂದಿದ್ದಾರೆ ಆಶಿಕುರ್ ರೆಹ್ಮಾನ್ ಲಾವ್ಲು.

English summary
Weather is not climate, an Assa girl takes on Donald Trump's tweet on Global warming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X