ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಮಾಜಿ ಮುಖ್ಯಮಂತ್ರಿಯೇ ಎನ್‌ಆರ್‌ಸಿ ಇಂದ ಹೊರಕ್ಕೆ

|
Google Oneindia Kannada News

ಗುವಾಹಟಿ, ಜನವರಿ 11: ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಅವರೇ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಅಸ್ಸಾಂ ನಲ್ಲಿ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೊಂದಣಿ) ಜಾರಿಯಲ್ಲಿದ್ದು, ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಸ್ಯೆದಾ ಅನ್ವರಾ ತೈಮೂರ್ ಅವರ ಹೆಸರೇ ಪಟ್ಟಿಯಲ್ಲಿಲ್ಲ.

ಪೌರತ್ವ ನೊಂದಣಿಯ ಕರಡು ಪಟ್ಟಿ ತಯಾರಾಗಿದ್ದು, ಪಟ್ಟಿಯಲ್ಲಿ ಅಸ್ಸಾಂ ನ ಏಕೈಕ ಮಹಿಳಾ ಸಿಎಂ ಆಗಿದ್ದ ಸ್ಯೆದಾ ಅನ್ವರಾ ತೈಮೂರ್ ಅವರ ಹೆಸರೇ ಇಲ್ಲ.

Assam Former Chief Minister Left Out From NRC Draft

ಆಸ್ಟ್ರೇಲಿಯಾನಲ್ಲಿ ನೆಲೆಸಿದ್ದ ಸ್ಯೆದಾ ಅನ್ವರಾ ತೈಮೂರ್ ಕಳೆದ ಆಗಸ್ಟ್‌ನಲ್ಲಿ ಅಸ್ಸಾಂ ಗೆ ವಾಪಸ್ಸಾಗಿದ್ದು, ತಮ್ಮ ಮತ್ತು ತಮ್ಮ ಕುಟುಂಬದ ಹೆಸರನ್ನು ಪೌರತ್ವ ಕರಡು ಪಟ್ಟಿಯಲ್ಲಿ ಸೇರಿಸಲು ಹೆಣಗಿದ್ದಾರೆ. ಆದರೆ ಅವರ ಹೆಸರೇ ಪಟ್ಟಿಯಿಂದ ಕೈಬಿಟ್ಟಿದೆ.

'ಅಗತ್ಯ ದಾಖಲೆಗಳನ್ನು ನೀಡುವಂತೆ ನಾನು ನನ್ನ ಸಂಬಂಧಿಕರಿಗೆ ಹೇಳಿದ್ದೆ, ಅವರು ಕೊಟ್ಟಿದ್ದಾರೆ, ಆದರೆ ಕೆಲವು ಕಾರಣಗಳಿಂದ ನನ್ನ ಹೆಸರು ಬಿಟ್ಟುಹೋಗಿದೆ' ಎಂದು ಅನ್ವರಾ ತೈಮೂರ್ ಹೇಳಿದ್ದಾರೆ.

ಅನ್ವರಾ ತೈಮೂರ್ ಕುಟುಂಬ ಸದಸ್ಯರ ಬಳಿ ಸೂಕ್ತ ಕುಟುಂಬ ದಾಖಲೆ ಹಾಗೂ 'ಹಿನ್ನೆಲೆ ದಾಖಲೆ' ಇರಲಿಲ್ಲ ಹಾಗಾಗಿ ಅವರ ಹೆಸರು ಕೈಬಿಟ್ಟಿದೆ ಎಂದು ಎನ್‌ಆರ್‌ಸಿ ಅಸ್ಸಾಂ ಅಧಿಕಾರಿಗಳು ಹೇಳಿದ್ದಾರೆ.

ಎನ್‌ಆರ್‌ಸಿ ಇಂದಾಗಿ ಅಸ್ಸಾಂ ಒಂದರಲ್ಲಿ ಈವರೆಗೆ 40 ಲಕ್ಷ ಮಂದಿ ಭಾರತೀಯ ಪೌರತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಎನ್‌ಆರ್‌ಸಿ ಯಲ್ಲಿ ಸಲ್ಲಿಕೆಯಾಗಿದ್ದ 3.29 ಕೋಟಿ ಅರ್ಜಿಯಲ್ಲಿ 2.89 ಕೋಟಿ ಅರ್ಜಿಗಳಿಗೆ ಮಾತ್ರವೇ ಪೌರತ್ವ ದೊರಕಿದೆ.

ಈಗ ಅಸ್ಸಾಂ ನಲ್ಲಿ ಎನ್‌ಆರ್‌ಸಿಯ ಕರಡು ಪಟ್ಟಿಯನ್ನು ಮಾತ್ರವೇ ಸಿದ್ಧಪಡಿಸಲಾಗುತ್ತಿದ್ದು, ಪೂರ್ಣ ಪ್ರಮಾಣದ ಪಟ್ಟಿ ಸಿದ್ಧಪಡಿಸಲು ಇನ್ನಷ್ಟು ಸಮಯ ಹಿಡಿಯಲಿದೆ.

English summary
Assam former chief minister Syeda Anwara Taimur not included in NRC draft of Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X