• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸ್ಸಾಂನಲ್ಲಿ ಭಾರೀ ಪ್ರವಾಹ, ಜನ ಜೀವನ ಅತಂತ್ರ: ಜನರ ನೆರವಿಗೆ ನಿಂತ ಬಿಜೆಪಿ ಶಾಸಕ

|

ಗುವಾಹಟಿ, ಜುಲೈ 15: ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಲ್ಲಿನ ಜನ ಜೀವನ ಅತಂತ್ರವಾಗಿದೆ. ಪ್ರವಾಹದಿಂದಾಗಿ ಊರುಗಳೆಲ್ಲಾ ಮುಳುಗಿ ಹೋಗುತ್ತಿವೆ. ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳತ್ತ ವಲಸೆ ಹೋಗುತ್ತಿದ್ದಾರೆ.

ಇದುವರೆಗೂ ಅಸ್ಸಾಂನ 27 ಜಿಲ್ಲೆಗಳಲ್ಲಿನ 22 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಸ್ಸಾಂನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಅಸ್ಸಾಂ ಲಕ್ಷಿಂಪುರ್, ಬಾರ್ಪೇಟ, ಬೊಂಗೈಗಾಂವ್, ಕಾಮರೂಪ್, ಗೋಲಾಘಾಟ್​ ಮತ್ತು ಶಿವಸಾಗರದ ತಲಾ ಒಬ್ಬರು ನಿನ್ನೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.ಒಟ್ಟಾರೆ ಸಾವನ್ನಪ್ಪಿರುವ 76 ಜನರಲ್ಲಿ 26 ಜನರು ಭೂಕುಸಿತದಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ಸ್ಥಳೀಯರ ನೆರವಿಗೆ ನಿಂತ ಬಿಜೆಪಿ ಶಾಸಕ

ಅಸ್ಸಾಂನ ಪ್ರವಾಹದ ಮಧ್ಯೆ, ಅಸ್ಸಾಂನ ಖುಮ್ತೈನ ಭಾರತೀಯ ಜನತಾ ಪಕ್ಷದ ಶಾಸಕ ಮೃಣಾಲ್ ಸೈಕಿಯಾ, ತಮ್ಮ ಕ್ಷೇತ್ರದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸ್ವತಃ ತಾನೇ ನೀರಿಗೆ ಇಳಿದು ಜನರ ರಕ್ಷಣೆಗೆ ಧಾವಿಸಿದ್ದಾರೆ. ತನ್ನ ಕ್ಷೇತ್ರದ ಮುಳುಗಿರುವ ಪ್ರದೇಶಗಳಿಂದ ಜನರನ್ನು ರಕ್ಷಿಸುವ ಕಾರ್ಯಕ್ಕೆ ಇಳಿದಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ನೂರಾರು ಪ್ರಾಣಿಗಳನ್ನು ಉಳಿಸಿದ ಶಾಸಕ ಸೈಕಿಯಾ

ತನ್ನ ಕ್ಷೇತ್ರದ ಜನರಿಗಷ್ಟೇ ಸಹಾಯ ಹಸ್ತ ಚಾಚದ ಶಾಸಕರು ಪ್ರದೇಶಗಳಲ್ಲಿನ ಜಾನುವಾರುಗಳನ್ನು ಉಳಿಸುವಲ್ಲಿ ಜನರಿಗೆ ಸಹಾಯ ಮಾಡಿದರು.

ಈ ಕುರಿತು ಟ್ವೀಟರ್‌ ಬರೆದುಕೊಂಡಿರುವ ಶಾಸಕ 'ಅನೇಕ ಸ್ಥಳಗಳಿಂದ ಸಿಕ್ಕಿಬಿದ್ದ ನೂರಾರು ಆಡುಗಳನ್ನು ಉಳಿಸಲು ಸಂತೋಷವಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೊಬೈಲ್ ಕಿಚನ್ ಮೂಲಕ ಸಂತ್ರಸ್ಥರಿಗೆ ಊಟದ ಸೇವೆ

ಪ್ರವಾಹದಿಂದ ಜನರನ್ನು ರಕ್ಷಿಸಿದ್ದಷ್ಟೇ ಅಲ್ಲದೆ. ಶಾಸಕರು ಮೊಬೈಲ್ ಕಿಚನ್ ಅನ್ನು ಸಹ ನಡೆಸುತ್ತಿದ್ದಾರೆ. ಆ ಮೂಲಕ ನೂರಾರು ಪ್ರವಾಹ ಪೀಡಿತರಿಗೆ ಆಹಾರವನ್ನು ಒದಗಿಸುತ್ತಿದ್ದಾರೆ.

45 ಲಕ್ಷಕ್ಕೂ ಹೆಚ್ಚು ಜನರು ಅತಂತ್ರ

45 ಲಕ್ಷಕ್ಕೂ ಹೆಚ್ಚು ಜನರು ಅತಂತ್ರ

ಜುಲೈ 14 ರ ವೇಳೆಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ 30 ಜಿಲ್ಲೆಗಳಲ್ಲಿ 59 ಜನರು ಮೃತಪಟ್ಟಿದ್ದಾರೆ ಮತ್ತು 45,40,890 ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

English summary
Amid floods ravaging Assam, Bharatiya Janata Party MLA Mrinal Saikia from Khumtai, Assam, wading through waist-deep flood water to rescue the people stranded in his constituency is winning the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X