ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಪ್ರವಾಹಕ್ಕೆ 6 ಮಂದಿ ಬಲಿ:8 ಲಕ್ಷಕ್ಕೂ ಹೆಚ್ಚು ಮಂದಿಗೆ ಅಪಾಯ ಭೀತಿ

|
Google Oneindia Kannada News

ಗುವಾಹಟಿ, ಜುಲೈ 13: ಮುಂಗಾರು ದೇಶಾದ್ಯಂತ ಚುರುಕಾಗಿದ್ದು, ಮಲೆನಾಡು, ಕರಾವಳಿ, ಮುಂಬೈ, ಅಸ್ಸಾಂ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ.

ಅಸ್ಸಾಂನಲ್ಲಿ ಪ್ರವಾಹ ಎದುರಾಗಿದ್ದು ಈಗಾಗಲೇ ಎಂಟು ಮಂದಿ ಮೃತಪಟ್ಟಿದ್ದು, ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಅಪಾಯದ ಅಂಚಿನಲ್ಲಿದ್ದಾರೆ.ಅಲ್ಲಿರುವ 27 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿದೆ. ಬ್ರಹ್ಮಪುತ್ರ ಸೇರಿ ಐದು ನದಿಗಳು ಭರ್ತಿಯಾಗಿದೆ.

ಮಳೆಗಾಗಿ ಕುಂತಮ್ಮನ ಬೆಟ್ಟ ಹತ್ತಿದ ಭಕ್ತರು... ಮಳೆಗಾಗಿ ಕುಂತಮ್ಮನ ಬೆಟ್ಟ ಹತ್ತಿದ ಭಕ್ತರು...

27 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. 7 ಸಾವಿರಕ್ಕೂ ಹೆಚ್ಚು ಮಂದಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Assam flood 6 dead rivers are in danger position

ಅರುಣಾಚಲ ಪ್ರದೇಶದಲ್ಲಿ ಎರಡು ವಿದ್ಯಾರ್ಥಿಗಳು ಮಳೆಗೆ ಬಲಿಯಾಗಿದ್ದಾರೆ. ಬರ್‌ಪೇಟಾ ಸೇರಿದಂತೆ 17 ಜಿಲ್ಲೆಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದು 85 ಸಾವಿರ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿದೆ.

ಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆ ಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆ

ಅಸ್ಸಾಂನಲ್ಲಿರುವ 9 ಜಿಲ್ಲೆಯ ಅಪರೂಪದ ಕಾಯಿಲೆಯಿಂದ 2013ರಿಂದ ಇಲ್ಲಿಯವರೆಗೆ ಒಟ್ಟು 700 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೆದ್ದಾರಿಯಲ್ಲಿ ಚಲಿಸುವಾಗ ರಸ್ತೆಯ ಮೇಲೂ ನೀರು ಹರಿಯುತ್ತಿರುವ ಕಾರಣ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

English summary
Assam flood 6 dead rivers are in danger position, Along with Brahmaputra river five other rivers are flowing above the danger mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X