India
  • search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸ್ಸಾಂನಲ್ಲಿ ಪ್ರವಾಹಕ್ಕೆ 121 ಸಾವು, 25 ಲಕ್ಷ ಜನರು ಸಂತ್ರಸ್ತರು, ದೋಣಿಯಲ್ಲಿ ಸಿಎಂ ಭೇಟಿ

|
Google Oneindia Kannada News

ಗುವಾಹಟಿ ಜೂನ್ 26: ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮತ್ತೆ ಮಳೆಯ ಕಾರಣ, ಪ್ರವಾಹದಲ್ಲಿ ಸತ್ತವರ ಸಂಖ್ಯೆ ಶನಿವಾರ 121 ಕ್ಕೆ ತಲುಪಿದೆ. ಬಾರ್ಪೇಟಾ, ಕಚಾರ್, ದರಾಂಗ್, ಗೋಲ್‌ಘಾಟ್ ಜಿಲ್ಲೆಗಳಲ್ಲಿ ತಲಾ 1 ಸಾವುಗಳು ಸಂಭವಿಸಿವೆ. ಅಸ್ಸಾಂನಲ್ಲಿ ಶನಿವಾರದಂದು ಪ್ರವಾಹ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದ್ದು, ಸುಮಾರು 25.10 ಲಕ್ಷ ಜನರು, 2894 ಗ್ರಾಮಗಳು, 27 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ದೋಣಿ ಮೂಲಕ ನಿರಾಶ್ರಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಬರಾಕ್ ಕಣಿವೆ ಪ್ರದೇಶದಲ್ಲಿ ವಾಸಿಸುವ ಜನರನ್ನು ಹಿಮಂತ ಬಿಶ್ವ ಶರ್ಮಾ ಅವರು ಭೇಟಿ ಮಾಡಿದರು. ಅಲ್ಲಿ ಪ್ರವಾಹದ ನಡುವೆಯೂ ನೀರಿನಲ್ಲಿ ಮುಳುಗುತ್ತಿರುವ ಮನೆಗಳ ನಿರಾಶ್ರಿತರನ್ನು ಮುಖ್ಯಮಂತ್ರಿ ಸೂಕ್ತಕ್ರಮದ ಭರವಸೆ ನೀಡಿದ್ದಾರೆ. ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಅಲ್ಲಿ ಈಗ ನೀರು ಕಡಿಮೆಯಾಗುತ್ತಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಲ್ಲಿನ ಜನರಿಗೆ ಸಹಾಯ ಮಾಡುವಲ್ಲಿ ನಿರತವಾಗಿದೆ.

ಅಸ್ಸಾಂ ಪ್ರವಾಹ: ಅಸ್ಸಾಂ ಸಿಎಂ ಪರಿಹಾರ ನಿಧಿಗೆ ರಿಲಯನ್ಸ್ ಫೌಂಡೇಶನ್ 25 ಕೋಟಿ ರೂ. ಅಸ್ಸಾಂ ಪ್ರವಾಹ: ಅಸ್ಸಾಂ ಸಿಎಂ ಪರಿಹಾರ ನಿಧಿಗೆ ರಿಲಯನ್ಸ್ ಫೌಂಡೇಶನ್ 25 ಕೋಟಿ ರೂ.

ಸಾವಿನ ಸಂಖ್ಯೆ 121 ಕ್ಕೆ ಏರಿಕೆ

ಸಾವಿನ ಸಂಖ್ಯೆ 121 ಕ್ಕೆ ಏರಿಕೆ

ಅಸ್ಸಾಂನ ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಕಚಾರ್, ಚಿರಾಂಗ್, ದರ್ರಾಂಗ್, ಧೇಮ್ಜಿ, ಧುಬ್ರಿ, ದಿಬ್ರುಗಢ, ದಿಮಾ ಹಸಾವೊ, ಗೋಲ್ಘಾಟ್, ಹೈಲಕಂಡಿ, ಹೋಜೈ, ಕಾಮರೂಪ್, ಕರ್ಬಿ, ಕರೀಂಗಂಜ್, ಲಖಿಂಪುರ, ಮೊರಿಗಾಂವ್, ನಾಗಾಂವ್, ಅಸ್ಸಾಂನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಾಗಿವೆ. ನಲ್ಬರಿ, ದಕ್ಷಿಣ ತಸಲ್ಮರ, ತಮುಲ್ಪುರ್ ಮತ್ತು ಉದಲ್ಗುರಿ. ಪ್ರವಾಹವು ಈ ಜಿಲ್ಲೆಗಳಲ್ಲಿ ಹೆಚ್ಚು ತೊಂದರೆಗಳನ್ನು ಸೃಷ್ಟಿಸಿದೆ. ಮಾತ್ರವಲ್ಲದೆ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಪ್ರವಾಹಕ್ಕೆ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ 121 ಕ್ಕೆ ತಲುಪಿದೆ.

50 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತ

50 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತ

ಬಾರ್ಪೇಟಾ ಕುರಿತು ಮಾತನಾಡಿದ ಅವರು, ಅತಿ ಹೆಚ್ಚು ಪ್ರವಾಹದಿಂದ ಹಾನಿಗೊಳಗಾಗಿರುವುದು ಬಾರ್ಪೇಟಾ. ಇಲ್ಲಿ ಸುಮಾರು 7.50 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಪ್ರವಾಹದಿಂದಾಗಿ 5.11 ಲಕ್ಷ ಜನರಿಗೆ ಪರಿಹಾರ ಇನ್ನೂ ತಲುಪಿಲ್ಲ. ಅದೇ 2.33 ಲಕ್ಷ ಜನರು 637 ವಿವಿಧ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹದಿಂದಾಗಿ 80346 ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ಮುಳುಗಡೆಯಾಗಿದೆ. ಪ್ರವಾಹದಿಂದಾಗಿ ಸಿಲ್ಚಾರ್ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕಳೆದ 6 ದಿನಗಳಿಂದ ಇಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗಿವೆ.

96689 ಜನರು ಪ್ರವಾಹದಿಂದ ಸಂತ್ರಸ್ತ

ಸಿಲ್ಚಾರ್ ನಗರಕ್ಕೆ ಸಂಪರ್ಕ ಕಲ್ಪಿಸುವ ಬರಾಕ್ ನದಿಯಿಂದ ಇಲ್ಲಿನ ಜನರ ಸ್ಥಿತಿ ಹದಗೆಟ್ಟಿದೆ. ಇಲ್ಲಿ ವಿದ್ಯುತ್, ಕುಡಿಯುವ ನೀರು ಇಲ್ಲ. ಕಳೆದ 6 ದಿನಗಳಿಂದ ಇಲ್ಲಿ ಜನಜೀವನ ದುಸ್ತರವಾಗಿದೆ. ಸಿಲ್ಚಾರ್‌ನಲ್ಲಿ ಸುಮಾರು 2.78 ಲಕ್ಷ ಜನರು ಬಾಧಿತರಾಗಿದ್ದಾರೆ. ಇಲ್ಲಿ 224 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 96689 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಬ್ರಹ್ಮಪುತ್ರ ನದಿಯ ಬಗ್ಗೆ ಹೇಳುವುದಾದರೆ, ಇಲ್ಲಿ ಇನ್ನೂ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ.

ಕೃತಜ್ಞತೆಯನ್ನು ವ್ಯಕ್ತಪಡಿಸಿದ ಸಿಎಂ

ಕೃತಜ್ಞತೆಯನ್ನು ವ್ಯಕ್ತಪಡಿಸಿದ ಸಿಎಂ

ನಿರಂತರ ಮಳೆ ಮತ್ತು ಪ್ರವಾಹಗಳು ಅಸ್ಸಾಂನಲ್ಲಿ ಮುಂದುವರೆದಿದ್ದು, ರಿಲಯನ್ಸ್ ಫೌಂಡೇಶನ್ ಶುಕ್ರವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ಪರಿಹಾರ ನೀಡಿದೆ. ಇದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. "ಈ ನಿರ್ಣಾಯಕ ಘಟ್ಟದಲ್ಲಿ ಅಸ್ಸಾಂ ಜನರೊಂದಿಗೆ ನಿಂತಿದ್ದಕ್ಕಾಗಿ ಮುಖೇಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರಿಗೆ ನನ್ನ ಕೃತಜ್ಞತೆಗಳು. ಇದು ನಮ್ಮ ಪ್ರವಾಹ ಪರಿಹಾರವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.


ರಾಜ್ಯ ಸರ್ಕಾರ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಗೆ ಅಸ್ಸಾಂನಲ್ಲಿ ರಿಲಯನ್ಸ್ ಫೌಂಡೇಶನ್ ಬೆಂಬಲ ನೀಡುತ್ತಿದೆ. ರಿಲಯನ್ಸ್ ಫೌಂಡೇಶನ್ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ಜಿಲ್ಲಾಡಳಿತಗಳು ಮತ್ತು ಪ್ರವಾಹದಿಂದ ಉಂಟಾದ ಸಂಕಷ್ಟವನ್ನು ನಿವಾರಿಸಲು ಮೈದಾನದಲ್ಲಿ ಕೆಲಸ ಮಾಡುವ ಇತರ ನಾಗರಿಕ ಸಮಾಜ ಸಂಸ್ಥೆಗಳಿಗೆ ಸಹಾಯ ನೀಡಿದೆ.

English summary
Millions of people are homeless due to flooding in Assam. Due to rains again in the last 24 hours, the death toll from flooding reached 121 on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X