ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಸಾಗಾಟ: ಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹ

|
Google Oneindia Kannada News

ಗುವಾಹಟಿ, ಏಪ್ರಿಲ್ 2: ಅಸ್ಸಾಂನಲ್ಲಿ ಗುರುವಾರ ಎರಡನೆಯ ಹಂತದ ಮತದಾನದ ವೇಳೆ ಇವಿಎಂ ಮತಯಂತ್ರಗಳು ಪತ್ತೆಯಾದ ಕಾರು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಅವರಿಗೆ ಸೇರಿದ್ದು ಎನ್ನುವುದು ಬಹಿರಂಗವಾಗಿದೆ. ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಎರಡನೆಯ ಹಂತದ ಚುನಾವಣೆ ಮುಗಿದ ಕೆಲವು ಗಂಟೆಗಳ ಬಳಿಕ ಪಾತರ್ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಅವರ ಬೊಲೆರೋ ಕಾರಿನಲ್ಲಿ ಇವಿಎಂ ಯಂತ್ರಗಳನ್ನು ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!

ಕೃಷ್ಣೇಂದು ಪಾಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ AS 10B 0022 ನೋಂದಣಿ ಫಲಕದ ಬೊಲೆರೋ ಕಾರು ತಮ್ಮದು ಎಂದು ತಿಳಿಸಿದ್ದರು.

Assam: EVMs Found In BJP Candidate Krishnendu Pauls Car, Priyanka Gandhi Demands Action

ಈ ಘಟನೆ ಕುರಿತು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಇವಿಎಂಗಳ ನಿರ್ವಹಣೆ ಬಗ್ಗೆ ಅವರು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಗುವಾಹಟಿ ಮೂಲದ ಪತ್ರಕರ್ತ ಅತನು ಭುಯಾನ್ ಪೋಸ್ಟ್ ಮಾಡಿರುವ ವಿಡಿಯೋವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ.

'ಪ್ರತಿ ಬಾರಿಯೂ ಖಾಸಗಿ ವಾಹನದಲ್ಲಿ ಇವಿಎಂ ರವಾನೆಯಾಗುವ ವಿಡಿಯೋಗಳು ಹರಿದಾಡುತ್ತವೆ. ಅಚ್ಚರಿಯಾಗದ ಸಂಗತಿಯೆಂದರೆ, ಇಂತಹ ಪ್ರಕರಣಗಳಲ್ಲಿ ಈ ಕೆಳಗಿನ ವಿಚಾರಗಳು ಸಾಮಾನ್ಯವಾಗಿರುತ್ತವೆ,

1. ಈ ವಾಹನಗಳು ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿ ಅಥವಾ ಅವರ ಸಹಚರರಿಗೆ ಸೇರಿದ್ದಾಗಿರುತ್ತವೆ.

2. ಈ ವಿಡಿಯೋಗಳನ್ನು ಎಂದಿನ ಘಟನೆಗಳಲ್ಲಿ ಒಂದು ಎಂದು ಪರಿಗಣಿಸಿ ಅದನ್ನು ಕಡೆಗಣಿಸಲಾಗುತ್ತದೆ.

ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪುಟ್ಬಾಲ್ ಭಾಷೆ!ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪುಟ್ಬಾಲ್ ಭಾಷೆ!

3. ಈ ವಿಡಿಯೋಗಳನ್ನು ಬಹಿರಂಗಪಡಿಸಿದವರನ್ನು ಸೋತವರು ಎಂದು ಆರೋಪಿಸಲು ಬಿಜೆಪಿ ಮಾಧ್ಯಮ ಯಂತ್ರಗಳನ್ನು ಬಳಸಿಕೊಳ್ಳುತ್ತದೆ.

ವಾಸ್ತವವಾಗಿ ಇಂತಹ ಅನೇಕ ಘಟನೆಗಳು ವರದಿಯಾಗುತ್ತಿವೆ. ಆದರೆ ಅವುಗಳ ವಿರುದ್ಧ ಯಾವ ಕ್ರಮವನ್ನೂ ಜರುಗಿಸುವುದಿಲ್ಲ' ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ.

ಜಿಲ್ಲಾ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾವುದೇ ಮತಗಟ್ಟೆ ಅಧಿಕಾರಿ, ಚುನಾವಣಾ ಆಯೋಗದ ಉದ್ಯೋಗಿ ಇರಲಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

English summary
Assam: EVMs found in Patharkandi BJP candidate Krishnendu Paul's Bolero car. Priyanka Gandhi Vadra demands Election Commission for action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X