ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ; ಬಿಜೆಪಿ ಗೆಲುವಿಗೆ ಅಡ್ಡಿಯಾಗಲಿಲ್ಲ ಸಿಎಎ ವಿಚಾರ

|
Google Oneindia Kannada News

ಗೌಹಾತಿ, ಮೇ 03; ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯದಲ್ಲಿ 2ನೇ ಬಾರಿಗೆ ಸರ್ಕಾರ ರಚನೆ ಮಾಡುತ್ತಿರುವ ಬಿಜೆಪಿಯೇತರ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ.

ಬಿಜೆಪಿ ಮತ್ತು ಮೈತ್ರಿಕೂಟದ ಪಕ್ಷಗಳಾದ ಎಜಿಪಿ, ಯುಪಿಪಿಎಲ್ ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳ ಪೈಕಿ 75 ಸ್ಥಾನಗಳಲ್ಲಿ ಜಯಗಳಿಸಿವೆ. 2016ರ ಚುನಾವಣೆಯಲ್ಲಿ ಮೈತ್ರಿಕೂಟ 86 ಸ್ಥಾನಗಳಲ್ಲಿ ಗೆದ್ದಿತ್ತು.

ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!

ಕಾಂಗ್ರೆಸ್ ಮೈತ್ರಿಕೂಟ 50 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಮತ್ತೊಮ್ಮೆ ಕೂರಲಿದೆ. ಸಿಎಎ ವಿಚಾರ ರಾಜ್ಯದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಯಾವುದೇ ಹಿನ್ನಡೆ ಉಂಟು ಮಾಡಿಲ್ಲ.

ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ

 Assam Elections CAA Issue Not Impact On BJP Victory

ಸಿಎಎ ವಿರುದ್ಧ ಹೋರಾಟ; 2019ರಲ್ಲಿ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದಾಗ ಅಸ್ಸಾಂನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಗಲಭೆ ನಡೆದು ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದರು.

ಅಸ್ಸಾಂ: ಸಿಎಎ ಹೊರತಾಗಿ ಚಹಾ ಕಾರ್ಮಿಕರಿಗೆ ರಾಹುಲ್ ಗಾಂಧಿ ಸಿಹಿಸುದ್ದಿಅಸ್ಸಾಂ: ಸಿಎಎ ಹೊರತಾಗಿ ಚಹಾ ಕಾರ್ಮಿಕರಿಗೆ ರಾಹುಲ್ ಗಾಂಧಿ ಸಿಹಿಸುದ್ದಿ

ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿಎಎ ವಿಚಾರ ಬರದಂತೆ ಬಿಜೆಪಿ ಎಚ್ಚರ ವಹಿಸಿತ್ತು. ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಿಎಎ ವಿಚಾರ ಹೆಚ್ಚು ಸುದ್ದಿಯಾಗುವಂತೆ ನೋಡಿಕೊಂಡವು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿತು. ಬೆಂಗಾಲಿ ಮುಸ್ಲಿಂ ಸಮುದಾಯದ ಬೆಂಬಲ ಎಐಯುಡಿಎಫ್ ಪಕ್ಷಕ್ಕೆ ಹೆಚ್ಚಿದೆ. ಬಿಜೆಪಿ ತನ್ನ ಪ್ರಚಾರದ ಸಂದರ್ಭದಲ್ಲಿ ಎಐಯುಡಿಎಫ್ ಮತ್ತು ಕಾಂಗ್ರೆಸ್ ವಿರುದ್ಧ ಸರಣಿ ಟೀಕೆಗಳನ್ನು ಮಾಡಿತು.

ಬಿಜೆಪಿ ಚುನಾವಣೆಯಲ್ಲಿ ಯುಪಿಪಿಎಲ್ ಜೊತೆ ಮೈತ್ರಿ ಮಾಡಿಕೊಂಡಿತು. ಇದು ಪಕ್ಷಕ್ಕೆ ನೆರವಾಗಿದ್ದು, ವಿದ್ಯಾರ್ಥಿಗಳ ಮತಗಳು ಪಕ್ಷಕ್ಕೆ ಬಂದಿವೆ. ಯುಪಿಪಿಎಲ್ ಪಕ್ಷ ಒಟ್ಟು 8 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಈ ಬಾರಿಯ ಅಸ್ಸಾಂ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೊಸ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡವು. ಎಜೆಪಿ, ಆರ್‌ಡಿ ಪಕ್ಷಗಳಿಂದ ಬಿಜೆಪಿಗೆ ಸಹಾಯವಾಯಿತು. ಮೈತ್ರಿಕೂಟ ಚುನಾವಣೆಯಲ್ಲಿ ಗೆಲುವು ಸಾಧಿಸಿತು.

Recommended Video

#Covid19Updates, Karnataka: ರಾಜ್ಯದಲ್ಲಿ ಇಂದು 37733 ಜನರಿಗೆ ಸೋಂಕು | Oneindia Kannada

English summary
The BJP along with allies AGP and UPPL has won the Assam assembly elections 2021. CAA issue not made impact on BJP in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X