ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ವೈದ್ಯೆಯಲ್ಲಿ ಏಕಕಾಲಕ್ಕೆ ಕೋವಿಡ್‌ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರ ಪತ್ತೆ

|
Google Oneindia Kannada News

ಗುವಾಹಟಿ, ಜು.20: ಅಸ್ಸಾಂನ ಮಹಿಳಾ ವೈದ್ಯೆಯೊಬ್ಬರು ಒಂದೇ ಸಮಯದಲ್ಲಿ ಕೋವಿಡ್‌ನ ಎರಡು ವಿಭಿನ್ನ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಈ ರೀತಿ ಒಂದೇ ಸಮಯದಲ್ಲಿ ಎರಡು ಸೋಂಕಿಗೆ ಒಳಗಾಗುವ ಭಾರತದ ಮೊದಲ ರೋಗಿ ಈ ವೈದ್ಯೆಯಾಗಿರಬಹುದು ಎಂದು ಹೇಳಲಾಗಿದೆ. SARS-CoV-2 ನ ಆಲ್ಫಾ ಮತ್ತು ಡೆಲ್ಟಾ ಎರಡೂ ರೂಪಾಂತರಗಳಿಂದ ಮಹಿಳೆ ಸೋಂಕಿಗೆ ಒಳಗಾಗಿದ್ದಾಳೆ ಎಂದು ವರದಿಯಾಗಿದೆ.

ಈ ವರದಿಯನ್ನು ದೃಢಪಡಿಸಿದ ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ, "ಮಹಿಳೆ ವೈದ್ಯೆಯಲ್ಲಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ರೂಪಾಂತರದ ಕೊರೊನಾವೈರಸ್‌ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆ ಹಚ್ಚಲಾಗಿದೆ. ಈ ಮಹಿಳೆ ವೈದ್ಯೆಗೆ ಎರಡೂ ಡೋಸ್‌ ಲಸಿಕೆಗಳನ್ನು ನೀಡಲಾಗಿತ್ತು," ಎಂದು ತಿಳಿಸಿದ್ದಾರೆ.

'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ

ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ ಅಸ್ಸಾಂನ ದಿಬ್ರುಗಢ ಜಿಲ್ಲೆಯ ಲಾಹೋವಾಲ್‌ನಲ್ಲಿರುವ ಐಸಿಎಂಆರ್ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ (ಆರ್‌ಎಂಆರ್‌ಸಿ) ನೋಡಲ್ ಅಧಿಕಾರಿಯಾಗಿದ್ದಾರೆ. ಇನ್ನು "ಮಹಿಳೆ ವೈದ್ಯೆಯ ಪತಿಯೂ ಕೂಡಾ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಪತಿಗೆ ಸೋಂಕು ದೃಢಪಟ್ಟ ಬಳಿಕ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ," ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

 Assam doctor infected with two variants of Coronavirus simultaneously

"ನಮ್ಮ ಪ್ರಯೋಗಾಲಯದಲ್ಲಿ ನಾವು ಮಹಿಳಾ ವೈದ್ಯೆಯ ಮಾದರಿಗಳನ್ನು ಪರೀಕ್ಷಿಸಿದಾಗ, ವೈದ್ಯೆಯ ದೇಹದಲ್ಲಿ ಒಂದೇ ಸಮಯದಲ್ಲಿ SARS-CoV-2 ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳು ಇದೆ. ಈ ಎರಡೂ ರೂಪಾಂತರಗಳಿಂದ ವೈದ್ಯೆ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯೆಯ ಪತಿಗೆ ಆಲ್ಫಾ ರೂಪಾಂತರದಿಂದ ಸೋಂಕು ತಗುಲಿತ್ತು," ಎಂದು ತಿಳಿಸಿದರು.

"ಎರಡು ಸೋಂಕು ಇರುವ ಬಗ್ಗೆ ಮತ್ತೆ ಖಾತರಿಪಡಿಸುವ ನಿಟ್ಟಿನಲ್ಲಿ ಈ ಮಹಿಳೆ ವೈದ್ಯೆಯ ಮಾದರಿಗಳನ್ನು ಎರಡು ಬಾರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಎರಡೂ ಪರೀಕ್ಷೆಯಲ್ಲೂ ವೈದ್ಯೆ ಒಂದೇ ಸಮಯದಲ್ಲಿ ಎರಡೂ ರೂಪಾಂತರಗಳ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ," ಎಂದು ನೋಡಲ್ ಅಧಿಕಾರಿ ಡಾ. ಬಿಸ್ವಾಜ್ಯೋತಿ ಬೊರ್ಕಕೊಟಿ ಮಾಹಿತಿ ನೀಡಿದ್ದಾರೆ.

"ವೈದ್ಯೆಗೆ ಹೆಚ್ಚು ರೋಗಲಕ್ಷಣಗಳು ಇಲ್ಲ. ಕೆಲವು ರೋಗ ಲಕ್ಷಣಗಳು ಮಾತ್ರ ಇದೆ. ಆದ್ದರಿಂದ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ," ಎಂದು ವೈದ್ಯರು ಹೇಳಿದ್ದಾರೆ.

ಈ ಹಿಂದೆ ಬೆಲ್ಜಿಯಂನ 90 ವರ್ಷದ ಮಹಿಳೆ ಏಕಕಾಲದಲ್ಲಿ ಆಲ್ಫಾ ಮತ್ತು ಬೀಟಾ ಎಂಬ ಎರಡು ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಳು ಎಂದು ವರದಿಯಾಗಿದೆ. ಆಕೆಗೆ ಇನ್ನೂ ಲಸಿಕೆ ನೀಡಿರಲಿಲ್ಲ ಮತ್ತು ಮಾರ್ಚ್ 2021 ರಲ್ಲಿ ನಿಧನರಾದರು.

(ಒನ್‌ಇಂಡಿಯಾ ಸುದ್ದಿ)

English summary
A female doctor from Assam may be India’s first patient to be infected by Alpha and Delta two different variants of Covid-19 at the same time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X