ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಕಾಂಗ್ರೆಸ್ ಶಾಸಕ ಸುಶಾಂತ ಪಕ್ಷ ತೊರೆದು ಬಿಜೆಪಿ ಸೇರಲು ಸಜ್ಜು: 'ಕೈ' ಪಾಳಯಕ್ಕೆ ಬಿತ್ತು ಮತ್ತೆ ಪೆಟ್ಟು

|
Google Oneindia Kannada News

ಗುವಾಹಟಿ, ಆ.01: ತನ್ನ ಅತ್ಯಂತ ಉತ್ತಮ ವಾಗ್ಮಿ, ಚಹಾ ಸಮುದಾಯದ ನಾಯಕ ರೂಪಜ್ಯೋತಿ ಕುರ್ಮಿಯನ್ನು ಕಳೆದುಕೊಂಡ ನಂತರ, ಈಗ ಕಾಂಗ್ರೆಸ್‌ನ ಮತ್ತೋರ್ವ ನಾಯಕರು ಬಿಜೆಪಿ ತೆಕ್ಕೆಗೆ ಸೇರಲು ಮುಂದಾಗಿದ್ದಾರೆ. ರಾಜಕೀಯವಾಗಿ ಮಹತ್ವದ ಅಸ್ಸಾಂನಲ್ಲಿ ಭರವಸೆಯ ಯುವ ಶಾಸಕರಾದ ಸುಶಾಂತ ಬೊರ್ಗೊಹೈನ್ ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದು, ಇದು ಕೈ ಪಾಳಯಕ್ಕೆ ಮತ್ತೊಂದು ಪೆಟ್ಟನ್ನು ನೀಡಿದೆ.

ಕಳೆದ ತಿಂಗಳು ಶಾಸಕ ರೂಪಜ್ಯೋತಿ ಕುರ್ಮಿ ಕಾಂಗ್ರೆಸ್‌ ಪಾಳಯದೊಂದಿಗಿನ ತನ್ನ ನಂಟನ್ನು ಕಿತ್ತು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಉತ್ತಮ ವಾಗ್ಮಿಯಾದ ರೂಪಜ್ಯೋತಿ ಕುರ್ಮಿಯನ್ನು ಕಳೆದುಕೊಂಡು ಕಾಂಗ್ರೆಸ್‌ ಈಗ ತನ್ನ ಮತ್ತೋರ್ವ ಶಾಸಕರನ್ನು ಕಳೆದುಕೊಂಡಿದೆ. ಆಗಸ್ಟ್‌ 1 ರಂದು ಸುಶಾಂತ ಬೊರ್ಗೊಹೈನ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ರೂಪಜ್ಯೋತಿ ಕುರ್ಮಿ ಕಾಂಗ್ರೆಸ್‌ ಪಕ್ಷವನ್ನು ತೊರೆಯುವ ಸಂದರ್ಭ ಪಕ್ಷವು ಹಿರಿಯರಿಗೆ ಮಾತ್ರ ಪ್ರಾತಿನಿಧ್ಯ ನೀಡುತ್ತದೆ ಎಂದ ಆರೋಪವನ್ನು ಮಾಡಿದ್ದರು.

ಅಸ್ಸಾಂ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ರಾಜೀನಾಮೆ, ಬಿಜೆಪಿ ಸೇರ್ಪಡೆಗೆ ಸಿದ್ಧತೆಅಸ್ಸಾಂ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ರಾಜೀನಾಮೆ, ಬಿಜೆಪಿ ಸೇರ್ಪಡೆಗೆ ಸಿದ್ಧತೆ

ರಾಜಕೀಯವಾಗಿ ಪ್ರಬಲವಾಗಿರುವ ತೈ-ಅಹೋಮ್ ಸಮುದಾಯದ ನಾಯಕರೂ ಕೂಡಾ ಹೌದು ಸುಶಾಂತ ಬೊರ್ಗೊಹೈನ್. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಯುವ ವಿಭಾಗದ ಚಟುವಟಿಕೆಗಳನ್ನು ಮುನ್ನಡೆಸಲು ಪಕ್ಷ ಆಯ್ಕೆ ಮಾಡಿದವರಲ್ಲಿ ಬೊರ್ಗೊಹೈನ್ ಒಬ್ಬರಾಗಿದ್ದರು. ದೆಹಲಿಯಲ್ಲಿ ರಾಜಕೀಯವಾಗಿ ಪ್ರಬಲ ಬಲ ಹೊಂದಿದ್ದ ಬೊರ್ಗೊಹೈನ್, ಎನ್‌ಎಸ್‌ಯುಐ ನ ಕೇಂದ್ರ ಸಮಿತಿಯ ಖಜಾಂಚಿ ಮತ್ತು ಉಪಾಧ್ಯಕ್ಷರಾಗಿದ್ದರು. ಆ ಬಳಿಕ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು.

 ವಿವರಿಸಲಾಗದ ಸ್ಥಿತಿ ಕಾಂಗ್ರೆಸ್‌ನದ್ದು

ವಿವರಿಸಲಾಗದ ಸ್ಥಿತಿ ಕಾಂಗ್ರೆಸ್‌ನದ್ದು

2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ಬಲವನ್ನು ಹೆಚ್ಚಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಎದುರಿಸಲು ಯೋಜಿಸುತ್ತಿದ್ದರೂ, ಈ ಬಿಕ್ಕಟ್ಟಿನ ಸಮಯದಲ್ಲಿ ಪಕ್ಷದ ಆಪ್ತರು ಕಾಂಗ್ರೆಸ್ ಅನ್ನು ಯಾಕಾಗಿ, ಹೇಗೆ ತೊರೆಯುತ್ತಿದ್ದಾರೆ ಎಂಬುದನ್ನು ಪಕ್ಷವು ವಿವರಿಸಲಾಗದಂತಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನವೇ ಹಿಮಂತ ಬಿಸ್ವಾ ಶರ್ಮಾ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ಅಜಂತಾ ನಿಯೋಗ್ ಬಿಜೆಪಿ ಸೇರುವ ಮೂಲಕ ಭಾರೀ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಆರಂಭವಾಗಿದೆ ಎಂದು ಪಕ್ಷದ ಒಳಗಿನವರು ಭಾವಿಸಿದ್ದಾರೆ. ಇನ್ನು ಈ ನಡುವೆ ಉನ್ನತ ಮಟ್ಟದ ನಾಯಕರು ಸ್ಥಳೀಯವಾಗಿ ರಾಜ್ಯಮಟ್ಟದ ನಾಯಕರು ಪಕ್ಷವನ್ನು ತೊರೆಯುವಂತಹ ಸ್ಥಿತಿ ಏಕೆ ಉಂಟಾಗಿದೆ ಎಂಬ ಬಗ್ಗೆ ಚಿಂತಿಸಿ ನಲುಗಿದ್ದಾರೆ.

'ಬಿಜೆಪಿಗೆ ಸೇರಿ' : ಪ್ರತಿಪಕ್ಷದ ಶಾಸಕರಿಗೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಮನವಿ'ಬಿಜೆಪಿಗೆ ಸೇರಿ' : ಪ್ರತಿಪಕ್ಷದ ಶಾಸಕರಿಗೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಮನವಿ

 ಪವರ್‌ ಗೇಮ್‌ನಂತೆ ಕಾಣುತ್ತಿದೆ ಈ ಬೆಳವಣಿಗೆ

ಪವರ್‌ ಗೇಮ್‌ನಂತೆ ಕಾಣುತ್ತಿದೆ ಈ ಬೆಳವಣಿಗೆ

"ನಾನು ಕೆಲವು ದಿನಗಳ ಹಿಂದೆ ಸುಶಂತಾರನ್ನು ದೆಹಲಿಯಲ್ಲಿ ಭೇಟಿಯಾದೆ. ಸುಶಾಂತರ ರಾಜೀನಾಮೆ ವದಂತಿಗಳು ಆಗಾಗಲೇ ಹಬ್ಬಿದ್ದವು. ಆದರೆ ಸುಶಾಂತ ಬೊರ್ಗೊಹೈನ್‌ಗೆ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಾಯಕನಾಗಲು ಬೊರ್ಗೊಹೈನ್‌ಗೆ ವೇದಿಕೆ ನೀಡಿದ ಕಾಂಗ್ರೆಸ್‌ಗೆ ಧನ್ಯವಾದಗಳು. ಇದು ಪವರ್ ಗೇಮ್‌ನಂತೆ ಕಾಣುತ್ತದೆ. ಅಧಿಕಾರದ ಬಗ್ಗೆ ಹೆಚ್ಚು ವ್ಯಾಮೋಹ ಇರುವವರು ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ," ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಜಿತೇಂದ್ರ ಸಿಂಗ್ ಶನಿವಾರ ಟಿಒಐಗೆ ತಿಳಿಸಿದರು.

 ಕಾಂಗ್ರೆಸ್‌ಗೆ ಮತ್ತೆ ಪೆಟ್ಟು

ಕಾಂಗ್ರೆಸ್‌ಗೆ ಮತ್ತೆ ಪೆಟ್ಟು

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬೊರ್ಗೊಹೈನ್ ರಾಜೀನಾಮೆಯನ್ನು ಕಾಂಗ್ರೆಸ್ ಶನಿವಾರ ಅಂಗೀಕರಿಸಿದೆ. ಎರಡು ತಿಂಗಳೊಳಗೆ ಕಾಂಗ್ರೆಸ್ ನಿಂದ ಇಬ್ಬರು ಶಾಸಕರು ನಿರ್ಗಮಿಸಿರುವುದು ಅಸ್ಸಾಂನಲ್ಲಿ ಪ್ರಮುಖ ವಿರೋಧ ಪಕ್ಷಕ್ಕೆ ದುಪ್ಪಟ್ಟು ಹೊಡೆತ ನೀಡಿದೆ. ಚಹಾ ಬುಡಕಟ್ಟುಗಳು ಮತ್ತು ತೈ-ಅಹೋಮ್‌ಗಳು ರಾಜಕೀಯವಾಗಿ ಪ್ರಮುಖವಾದ ಮೇಲ್ಭಾಗದ ಅಸ್ಸಾಂ ಪ್ರದೇಶದಲ್ಲಿ ರಾಜಕೀಯ ನಿರ್ಧರಿಸುವ ಸಮುದಾಯವಾಗಿದೆ. ಈ ಸಮುದಾಯದಿಂದ ಸುಮಾರು 42 ಶಾಸಕರು ರಾಜ್ಯ ವಿಧಾನಸಭೆಯಲ್ಲಿ ಇದ್ದಾರೆ. ಅದೇನೇ ಇದ್ದರೂ, ಸಮುದಾಯಗಳು ವ್ಯಕ್ತಿಗಳನ್ನು ಅಲ್ಲ, ಪಕ್ಷಗಳನ್ನು ಆಯ್ಕೆ ಮಾಡುತ್ತವೆ ಎಂದು ಸಿಂಗ್ ಭಾವಿಸುತ್ತಾರೆ. ಆದರೆ "ಸಮುದಾಯಗಳು ನೀಡುವ ಪಕ್ಷವನ್ನು ಮಾತ್ರ ಬೆಂಬಲಿಸುತ್ತದೆ. ವ್ಯಕ್ತಿಗಳ ನಿರ್ಗಮನದಿಂದ ಕಾಂಗ್ರೆಸ್ ನರಳುವುದಿಲ್ಲ," ತನ್ನ ಎನ್ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ದಿನಗಳಲ್ಲಿ ಬೊರ್ಗೊಹೈನ್‌ನ ಮಾರ್ಗದರ್ಶಕರಲ್ಲಿ ಒಬ್ಬರಾದ ಜಿತೇಂದ್ರ ಸಿಂಗ್ ಹೇಳಿದ್ದಾರೆ.

'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ'ಅಸ್ಸಾಂನ ವೀರಪ್ಪನ್' ತನ್ನದೇ ಗುಂಪಿನ ಸದಸ್ಯರ ಗುಂಡೇಟಿಗೆ ಬಲಿ

 ಬಿಜೆಪಿ ಸೇರಲು ಸುಶಾಂತ ಬೊರ್ಗೊಹೈನ್ ಸಜ್ಜು

ಬಿಜೆಪಿ ಸೇರಲು ಸುಶಾಂತ ಬೊರ್ಗೊಹೈನ್ ಸಜ್ಜು

ಸುಶಾಂತ ಬೊರ್ಗೊಹೈನ್ ಅಂತಿಮವಾಗಿ ಕೇಸರಿ ಪಕ್ಷಕ್ಕೆ ಸೇರುವ ಯೋಜನೆಯನ್ನು ಮಾಡಿಕೊಂಡಿದ್ದಾರೆ. ತಮ್ಮ ಥಾವ್ರಾ ಕ್ಷೇತ್ರವನ್ನು ಮೇಲಿನ ಅಸ್ಸಾಂನ ಮುಂದುವರಿದ ಕ್ಷೇತ್ರಗಳಲ್ಲಿ ಒಂದನ್ನಾಗಿ ಮಾಡಲು ಬಯಸುತ್ತಾರೆ ಎಂದು ಹೇಳಿದರು. "ಅಭಿವೃದ್ಧಿ ಕಾರ್ಯಸೂಚಿಯ ವಿವರವಾದ ಯೋಜನೆಯನ್ನು ಇನ್ನೂ ರೂಪಿಸಿಲ್ಲ ಆದರೆ ಯುವಕರಿಗೆ ಉದ್ಯೋಗ ಮತ್ತು ಕೆಲಸವನ್ನು ನೀಡುವುದು ನನ್ನ ಪ್ರಮುಖವಾದ ಆದ್ಯತೆಯಾಗಿದೆ," ಎಂದು ತಿಳಿಸಿದ್ದಾರೆ. "ಉದ್ಯೋಗ ಸೃಷ್ಟಿಯ ಮೂಲಕ, ನಾವು ನಮ್ಮ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತೇವೆ. ನಾನು ಬಿಜೆಪಿ ಸೇರಲು ಸಿದ್ಧನಿದ್ದೇನೆ," ಎಂದು ಬೊರ್ಗೊಹೈನ್ ಮಾಧ್ಯಮಗಳಿಗೆ ತಿಳಿಸಿದರು.

ಸುಶಾಂತ ಬೊರ್ಗೊಹೈನ್‌ರನ್ನು ಶಾಸಕರಾಗಿ ಅನರ್ಹಗೊಳಿಸುವಂತೆ ಅಸ್ಸಾಂ ಪಿಸಿಸಿ ಮುಖ್ಯ ಸಚೇತಕ ವಾಜಿದ್‌ ಅಲಿ ಚೌಧರಿಗೆ ಪತ್ರ ಬರೆದಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಅಸ್ಸಾಂ ವಿಧಾನಸಭೆಯ ಸ್ಪೀಕರ್ ಬಿಸ್ವಜಿತ್ ಡೈಮರಿಗೆ ಸಂವಿಧಾನದ 10 ನೇ ಪರಿಚ್ಛೇಧದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದರಿಂದ ಬೊರ್ಗೊಹೈನ್‌ರನ್ನು ಅನರ್ಹಗೊಳಿಸಲು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. 2016 ರ ಚುನಾವಣೆಯಲ್ಲಿ 26 ರಿಂದ ಕಾಂಗ್ರೆಸ್‌ನ ಸಂಖ್ಯೆ 2021 ರ ಚುನಾವಣೆಯಲ್ಲಿ 29 ಸ್ಥಾನಗಳಿಗೆ ಏರಿಕೆಯಾಗಿದೆ. ಆದರೆ ಮತ್ತೆ, ಕಾಂಗ್ರೆಸ್‌ನಿಂದ ಬೊರ್ಗೊಹೈನ್‌ರನ್ನು ಹೊರಹಾಕುವ ಮೂಲಕ ಸಂಖ್ಯೆಗಳು 27 ಕ್ಕೆ ಇಳಿಯುತ್ತವೆ.

ಕಾಂಗ್ರೆಸ್‌ನ ಮೂಲಗಳು ಹೇಳುವಂತೆ ರೂಪಜ್ಯೋತಿ ಮತ್ತು ಬೊರ್ಗೊಹೈನ್ ಹಾಲಿ ಮುಖ್ಯಮಂತ್ರಿ ಶರ್ಮಾ ಬೆಂಬಲದಲ್ಲಿದ್ದಾರೆ. ಆಗಿನ ಮುಖ್ಯಮಂತ್ರಿ ತರುಣ್ ಗೊಗೊಯ್ ಜೊತೆಗಿನ ಪೈಪೋಟಿ 2015 ರಲ್ಲಿ ಉತ್ತುಂಗಕ್ಕೇರಿತು. ಅನುಯಾಯಿಗಳಾಗಿದ್ದರೂ, ವಿರೋಧ ಪಕ್ಷದ ಪೀಠದಿಂದ ದೀರ್ಘಕಾಲ ಹೋರಾಟವನ್ನು ಮುಂದುವರಿಸಲು ಸಾಧ್ಯವಾಗದವರು ಖಂಡಿತವಾಗಿಯೂ ಆಡಳಿತ ಪಕ್ಷಕ್ಕೆ ಸೇರುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
After losing its most vocal tea community leader Rupjyoti Kurmi to BJP, Congress now losing promising young legislator, Sushanta Borgohain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X