• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸ್ಸಾಂ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ರಾಜೀನಾಮೆ, ಬಿಜೆಪಿ ಸೇರ್ಪಡೆಗೆ ಸಿದ್ಧತೆ

|
Google Oneindia Kannada News

ಗುವಾಹಟಿ, ಜೂನ್ 18: ಅಸ್ಸಾಂನ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ಕುರ್ಮಿ ರಾಜೀನಾಮೆ ನೀಡಿದ್ದು, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ''ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಹ ತಲುಪಿಸಿದ್ದೇನೆ'' ಎಂದಿದ್ದಾರೆ.

ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!

ರಾಜ್ಯದ ಚಹಾ ಬೆಳೆಗಾರರ ಸಮುದಾಯದ ನಾಯಕನಾಗಿರುವ ರೂಪ್‌ಜ್ಯೋತಿ ಕುರ್ಮಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ವಿಧಾನಸಭೆಯ ಅವರ ಕಚೇರಿಗೆ ತೆರಳಿ ಸಲ್ಲಿಸಿದ್ದಾರೆ.

ಚಹಾ ಬುಡಕಟ್ಟು ಸಮುದಾಯದ ಪ್ರಮುಖ ಸದಸ್ಯರಾದ ಕುರ್ಮಿ, ಕಾಂಗ್ರೆಸ್ ನ ಮಾಜಿ ಸಚಿವ ದಿ. ರೂಪಮ್ ಕುರ್ಮಿಯವರ ಪುತ್ರರಾಗಿದ್ದು, 2006 ರಿಂದ ಮರಿಯಾನಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಇದೇ 21ರಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವಾಗಿ ಹೇಳಿದ್ದಾರೆ. ನಾಲ್ಕು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ರೂಪ್‌ಜ್ಯೋತಿ ಕುರ್ಮಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಚ್ಛಾಟಿಸಿತ್ತು.

ಮಾಜಿ ಶಾಸಕ ರಾಣಾ ಗೋಸ್ವಾಮಿ ನೇತೃತ್ವದಲ್ಲಿ ಬೋರಾ ಅವರು ಮೂವರು ಸದಸ್ಯರ ತಂಡವನ್ನು ರಚಿಸಿ, ಮರಿಯಾನಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಮತ್ತು ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸಂಗ್ರಹಿಸಲು ಸೂಚಿಸಿದ್ದಾರೆ.

ಥೌರಾ ಶಾಸಕ ಸುಶಾಂತ ಬೋರ್ಗೊಹೈನ್ ಮತ್ತು ಮನೋಜ್ ಧನೊವರ್ ತಂಡದ ಇತರ ಸದಸ್ಯರು. ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೊರಾ ಹೇಳಿಕೆ ನೀಡಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ಧಾರವನ್ನು ಅನುಮೋದಿಸಿದೆ ಎಂದಿದ್ದಾರೆ.

English summary
Assam MLA Rupjyoti Kurmi of the Indian National Congress party quit the party and the Assembly on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X