ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಜೆಪಿಗೆ ಸೇರಿ' : ಪ್ರತಿಪಕ್ಷದ ಶಾಸಕರಿಗೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಮನವಿ

|
Google Oneindia Kannada News

ಗುವಾಹಟಿ, ಜೂ.19: ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ಕುರ್ಮಿ ಬಿಜೆಪಿಗೆ ಸೇರುವ ಯೋಜನೆಯನ್ನು ಪ್ರಕಟಿಸಿದ ನಾಲ್ಕು ದಿನದ ನಂತರ, ಶನಿವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಪಕ್ಷದ ಎಲ್ಲ ಶಾಸಕರಿಗೆ ಆಡಳಿತ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಮನವಿ ಮಾಡಿದ್ದಾರೆ.

ಭವ್ಯವಾದ ಹಳೆಯ ಪಕ್ಷವನ್ನು ತೊರೆದು ಅಸ್ಸಾಂ ವಿಧಾನಸಭೆಗೆ ರಾಜೀನಾಮೆ ನೀಡಿದ ಚಹಾ ಬುಡಕಟ್ಟು ಸಮುದಾಯದ ಕಾಂಗ್ರೆಸ್ಸಿನ ಏಕೈಕ ಶಾಸಕರಾದ ಕುರ್ಮಿ ಪ್ರಶ್ನೆಗೆ ಶರ್ಮಾ ಉತ್ತರಿಸುತ್ತಾ ಈ ಮನವಿ ಮಾಡಿದ್ದಾರೆ. ಅಸ್ಸಾಂನ ಮರಿಯಾನಿ ಕ್ಷೇತ್ರದ ಶಾಸಕರೂ ಆದ ರೂಪ್‌ಜ್ಯೋತಿ ಕುರ್ಮಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸೋಮವಾರ ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದರು.

ಅಸ್ಸಾಂ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ರಾಜೀನಾಮೆ, ಬಿಜೆಪಿ ಸೇರ್ಪಡೆಗೆ ಸಿದ್ಧತೆ ಅಸ್ಸಾಂ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ರಾಜೀನಾಮೆ, ಬಿಜೆಪಿ ಸೇರ್ಪಡೆಗೆ ಸಿದ್ಧತೆ

"ಈ ಶಾಸಕರುಗಳು ಐದು ವರ್ಷಗಳ ಕಾಲ ಪ್ರತಿಪಕ್ಷ ಪೀಠಗಳಲ್ಲಿ ಏನು ಮಾಡುತ್ತಾರೆ? ಈ ಶಾಸಕರು ಕೂಡಾ ನಮ್ಮೊಂದಿಗೆ ಸೇರಬೇಕು ಎಂದು ನಾನು ಹೇಳುತ್ತೇನೆ. ಜಾತಿ, ಮತ, ಧರ್ಮಗಳ ಹೊರತಾಗಿ ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದರಿಂದ, ಸಾರ್ವಜನಿಕರಿಗಾಗಿ ಒಟ್ಟಾಗಿ ಕೆಲಸ ಮಾಡಲು ನಮ್ಮೊಂದಿಗೆ ಸೇರಲು ನಾನು ಅವರಿಗೆ (ವಿರೋಧ ಪಕ್ಷದ ಸದಸ್ಯರು) ಮನವಿ ಮಾಡುತ್ತೇನೆ," ಎಂದು ಸಿಎಂ ಹೇಳಿದ್ದಾರೆ.

Assam CM Himanta Biswa Sarma appeals to opposition MLAs to join BJP

ಶುಕ್ರವಾರ ಪಕ್ಷವನ್ನು ತೊರೆದ ಕುರ್ಮಿ ​​ಕಾಂಗ್ರೆಸ್ ನಾಯಕತ್ವದ ಮೇಲೆ ವಾಗ್ದಾಳಿ ನಡೆಸಿದರು. "ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಕೇಳುವುದಿಲ್ಲ" ಎಂಬ ಕಾರಣದಿಂದ ಕಾಂಗ್ರೆಸ್‌ "ತುಂಬಾ ದುರ್ಬಲವಾಗಿದೆ" ಎಂದು ಆರೋಪಿಸಿದರು.

"ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮತದಾನ ನಡೆದ ಎಲ್ಲಾ ಐದು ರಾಜ್ಯಗಳಲ್ಲಿ ಪಕ್ಷವು ವಿಫಲವಾಗಿದೆ ಎಂಬುವುದಕ್ಕೆ ವಿಧಾನಸಭಾ ಚುನಾವಣಾ ಫಲಿತಾಂಶಗಳು ಸಾಕ್ಷಿಯಾಗಿದೆ. ಪಕ್ಷದ ನಾಯಕತ್ವವು ಚಹಾ ಬುಡಕಟ್ಟು ಅಥವಾ ಇತರ ಅಂಚಿನಲ್ಲಿರುವ ಸಮುದಾಯಗಳಿಗೆ ಜನರಿಗೆ ಅವಕಾಶ ನೀಡಲು ಸಿದ್ಧರಿಲ್ಲ ಎಂದು ತೋರುತ್ತದೆ, ಆದರೆ ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯದ ಜನರಿಗೆ ಪಕ್ಷದಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ," ಎಂದು ದೂರಿದ್ದರು.

ಇನ್ನು ಗುವಾಹಟಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಮಹಿಳಾ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡೆ ಜುರಿ ಶರ್ಮಾ ಬೋರ್ಡೊಲೊಯ್ ಕೂಡ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹಾಗೆಯೇ 100 ಕ್ಕೂ ಹೆಚ್ಚು ಬೆಂಬಲಿಗರು ತಮ್ಮೊಂದಿಗೆ ಪಕ್ಷವನ್ನು ಬಿಡಲು ನಿರ್ಧರಿಸಿದ್ದಾರೆ ಎಂದು ಬೋರ್ಡೊಲೊಯ್ ಹೇಳಿದ್ದಾರೆ.

ಈ ನಡುವೆ ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳಿವೆ. ಕುರ್ಮಿ ರಾಜೀನಾಮೆಯೊಂದಿಗೆ, 126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 28 ಕ್ಕೆ ಇಳಿದಿದೆ. ಬಿಜೆಪಿಯಲ್ಲಿ ಪ್ರಸ್ತುತ 60 ಶಾಸಕರು ಇದ್ದರೆ, ಅದರ ಮಿತ್ರಪಕ್ಷಗಳಾದ ಎಜಿಪಿ ಒಂಬತ್ತು ಮತ್ತು ಯುಪಿಪಿಎಲ್ ಐದು ಸ್ಥಾನಗಳನ್ನು ಹೊಂದಿದೆ.

2001 ರಿಂದ ಸತತ ಮೂರು ಅವಧಿಗೆ ಅಸ್ಸಾಂನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ 2016 ರಲ್ಲಿ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. 2016 ರಿಂದ ಬಿಜೆಪಿ ನೇತೃತ್ವದ ಒಕ್ಕೂಟವು ಸರ್ಕಾರ ರಚಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
A day after four-time Congress MLA Rupjyoti Kurmi announced his plans to join the BJP, Assam Chief Minister Himanta Biswa Sarma on Saturday appealed to all opposition legislators to join the ruling party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X