ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಮುಸ್ಲಿಮರಿಗೆ ಅಸ್ಸಾಂ ಮುಖ್ಯಮಂತ್ರಿ ನೀಡಿದ ಸಲಹೆ ಏನು?

|
Google Oneindia Kannada News

ದಿಸ್‌ಪುರ್, ಜೂನ್ 11: ವಲಸೆ ಮುಸ್ಲಿಮರು ಉತ್ತಮ ಕುಟುಂಬ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶಾರ್ಮಾ ಸಲಹೆ ನೀಡಿದ್ದಾರೆ.
ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟರೆ ಭೂ ಅತಿಕ್ರಮಣದಂತಹ ಸಮಸ್ಯೆಗಳಾಗುವುದಿಲ್ಲ, ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದಿದ್ದಾರೆ.

ಅತಿಕ್ರಮಣ ವಿರೋಧಿ ಡ್ರೈವ್‌ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸ್ಥಳಾಂತರಗೊಂಡ ಜನರು ವಲಸೆ ಬಂದ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದಿದ್ದಾರೆ.

ನಾವು ಜನಸಂಖ್ಯೆ ನಿಯಂತ್ರಣದಲ್ಲಿ ಸಫಲರಾದರೆ ಹತ್ತು ಹಲವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ವಲಸೆ ಬಂದ ಮುಸ್ಲಿಮರು ಯೋಗ್ಯವಾದ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದಾದರೆ ಇದು ಅವರಿಗೆ ನನ್ನ ಮನವಿ ಎಂದು ಶರ್ಮಾ ಹೇಳಿದರು.

Himanta Biswa Sharma

ಜನಸಂಖ್ಯಾ ಸ್ಫೋಟವು ಬಡತನ ಮತ್ತು ಅತಿಕ್ರಮಣದಂತಹ ಸಾಮಾಜಿಕ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ. ವೈಷ್ಣವ ಮಠಗಳಿಗೆ ಸೇರಿದ ಅರಣ್ಯ, ದೇವಾಲಯ ಮತ್ತು ಸತ್ರ ಜಮೀನುಗಳಲ್ಲಿ ಅತಿಕ್ರಮಣವನ್ನು ಅನುಮತಿಸಲಾಗುವುದಿಲ್ಲ. ಆದರೆ ಇದು ಜನಸಂಖ್ಯೆಯ ಹೆಚ್ಚಿನ ಬೆಳವಣಿಗೆಯಿಂದಾಗಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಇನ್ನೊಂದು ಬದಿಯ ಒತ್ತಡವನ್ನು ಅರ್ಥಮಾಡಿಕೊಂಡಿದ್ದೇನೆ ಎಂದರು.

ಮಧ್ಯ ಮತ್ತು ಕೆಳ ಅಸ್ಸಾಂನ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರೆಂದು ಪರಿಗಣಿಸಲಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಅಸ್ಸಾಂನ ಸ್ಥಳೀಯ ಸಮುದಾಯಗಳನ್ನು ಅವರ ವಿರುದ್ಧ ರಕ್ಷಿಸುವುದಾಗಿ ಬಿಜೆಪಿಯ ಭರವಸೆ ನೀಡಿತ್ತು.

ವಲಸೆ ಬಂದ ಮುಸ್ಲಿಮರು ಅಸ್ಸಾಂನ 3.12 ಕೋಟಿ ಜನಸಂಖ್ಯೆಯ ಶೇಕಡಾ 31 ರಷ್ಟನ್ನು ಹೊಂದಿದ್ದಾರೆ ಮತ್ತು 126 ವಿಧಾನಸಭಾ ಸ್ಥಾನಗಳಲ್ಲಿ 35 ಸ್ಥಾನವು ನಿರ್ಣಾಯಕವಾಗಿದೆ.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಆದರೆ ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಶರ್ಮಾ ಹೇಳಿದರು.

English summary
Assam Chief Minister Himanta Biswa Sarma touched a nerve today saying "social menaces" like land encroachment can be solved if the immigrant Muslims follow a family planning norms and control their population
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X