ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ; ಬಿಟಿಸಿ ಚುನಾವಣೆ, ಮೈತ್ರಿಗೆ ಮುಂದಾದ ಬಿಜೆಪಿ!

|
Google Oneindia Kannada News

ಗೌಹಾತಿ, ಡಿಸೆಂಬರ್ 13: ಅಸ್ಸಾಂ ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿ (ಬಿಟಿಸಿ) ಚುನಾವಣೆಯಲ್ಲಿ ಬಿಜೆಪಿ 9 ಸೀಟುಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಿ ಜಯಗಳಿಸಿದೆ.

ಚುನಾವಣೆಯಲ್ಲಿ ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್ (ಬಿಪಿಎಫ್) 17, ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ (ಯುಪಿಪಿಎಲ್‌) 12 ಸ್ಥಾನಗಳನ್ನು ಪಡೆದಿದೆ.

ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಕೊರೊನಾ ಸೋಂಕಿಗೆ ಬಲಿ ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಕೊರೊನಾ ಸೋಂಕಿಗೆ ಬಲಿ

ಯಾವುದೇ ಪಕ್ಷಕ್ಕೆ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಾದ 20 ಸಂಖ್ಯೆಯ ಮ್ಯಾಜಿನ್ ನಂಬರ್ ಬಂದಿಲ್ಲ. ಇದೇ ಮೊದಲ ಬಾರಿಗೆ ಬಿಟಿಯಲ್ಲಿ ಮೈತ್ರಿ ಆಡಳಿತ ಅಸ್ತಿತ್ವಕ್ಕೆ ಬರಲಿದೆ.

ಅಸ್ಸಾಂ-ಮಿಜೋರಾಂ ಗಡಿ ವಿವಾದ: ತೀವ್ರ ಹಿಂಸಾಚಾರಅಸ್ಸಾಂ-ಮಿಜೋರಾಂ ಗಡಿ ವಿವಾದ: ತೀವ್ರ ಹಿಂಸಾಚಾರ

Assam BTC Election BJP In Touch With UPPL For Alliance

ಬಿಟಿಸಿಯಲ್ಲಿ ಆಡಳಿತ ನಡೆಸಲು ಬಿಜೆಪಿ ಯುಪಿಪಿಎಲ್‌ ಜೊತೆ ಸಂಪರ್ಕದಲ್ಲಿದೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಾ ಈ ಕುರಿತು ಹೇಳಿಕೆ ನೀಡಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ತನ್ನ ಮಿತ್ರ ಪಕ್ಷ ಬಿಪಿಎಫ್ ವಿರುದ್ಧ ಕಣಕ್ಕಿಳಿದಿತ್ತು.

ಅಸ್ಸಾಂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗ್ತಾರಾ ಮಾಜಿ ಸಿಜೆಐ ರಂಜನ್ ಗೊಗೊಯ್?ಅಸ್ಸಾಂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗ್ತಾರಾ ಮಾಜಿ ಸಿಜೆಐ ರಂಜನ್ ಗೊಗೊಯ್?

ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್ (ಬಿಪಿಎಫ್) 2016ರಿಂದ ಬಿಜೆಪಿಯ ಮಿತ್ರಪಕ್ಷವಾಗಿದೆ. ಬಿಜೆಪಿ ಅಸ್ಸಾಂನ ಸರ್ಕಾರವನ್ನು ಮುನ್ನಡೆಸುತ್ತಿದೆ. ಬಿಪಿಎಫ್ ನಾಲ್ಕು ಜಿಲ್ಲೆಗಳನ್ನು ಹೊಂದಿರುವ ಬೋಡೊಲ್ಯಾಂಡ್ ಪ್ರಾದೇಶಿಕ ಪ್ರದೇಶದ ಜಿಲ್ಲೆ(ಬಿಟಿಎಡಿ)ಯನ್ನು ಒಂದೂವರೆ ದಶಕದಿಂದ ಆಳುತ್ತಿದೆ.

2015ರ ಬಿಟಿಸಿ ಚುನಾವಣೆಯಲ್ಲಿ ಬಿಪಿಎಫ್ 20 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ ಕೇವಲ 1 ಸ್ಥಾನದಲ್ಲಿ ಗೆದ್ದಿತ್ತು. ಎಐಯುಡಿಎಫ್ 4 ಮತ್ತು 15 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಒಟ್ಟು 40 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ 10 ಜಿಲ್ಲೆಗಳಲ್ಲಿ ಶನಿವಾರ ನಡೆಯಿತು. ಡಿಸೆಂಬರ್ 7 ಮತ್ತು 10ರಂದು ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

2021ರಲ್ಲಿ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಮೊದಲು ಎದುರಾದ ಬಿಟಿಸಿ ಚುನಾವಣೆಯನ್ನು ಸೆಮಿ ಫೈನಲ್ ಎಂದೇ ಪರಿಗಣಿಸಲಾಗಿತ್ತು.

English summary
Assam Bodoland Territorial Council (BTC) election results declared. BPF bagged 17 seats. BJP has won 9 seats. No party get magic number of 20. BJP is in touch with UPPL which won 12 seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X