ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!

|
Google Oneindia Kannada News

ಗುವಾಹಟಿ, ಏಪ್ರಿಲ್ 05: ಅಸ್ಸಾಂ ವಿಧಾನಸಭಾ ಚುನಾವಣೆಗೆ ಏಪ್ರಿಲ್ 1ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆದಿತ್ತು. ಇದರ ಬೆನ್ನಲ್ಲೇ 90 ಮತದಾರರನ್ನು ಹೊಂದಿರುವ ಮತಗಟ್ಟೆಯಲ್ಲಿ 181 ಮತಗಳು ಚಲಾವಣೆ ಆಗಿರುವುದು ಬೆಳಕಿಗೆ ಬರುತ್ತಿದ್ದಂತೆ ಆರು ಮಂದಿ ಚುನಾವಣಾ ಅಧಿಕಾರಿಗಳನ್ನು ಆಯೋಗ ಅಮಾನತುಗೊಳಿಸಿದೆ.

ದಿಮಾ ಹ್ಯಾಸಾ ಜಿಲ್ಲೆಯಲ್ಲಿ ಅಧಿಕೃತವಾಗಿ 90 ಮತಗಳಿರುವ ಮತಗಟ್ಟೆಯಲ್ಲಿ 181 ಜನರು ಮತದಾನ ಮಾಡಿರುವುದು ಬೆಳಕಿಗೆ ಬಂದಿದೆ. ಎರಡನೇ ಹಂತದಲ್ಲಿ ಹಾಫ್ಲೊಂಗ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಕಳೆದ 2016ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಬಿರ್ ಭದ್ರ ಹಗ್ಜೇರ್ ಗೆಲುವು ಸಾಧಿಸಿದ್ದರು.

ಕಾರಿನಲ್ಲಿ ಇವಿಎಂ ಪತ್ತೆ: ಆರೋಪ ನಿರಾಕರಿಸಿದ ಬಿಜೆಪಿ ಅಭ್ಯರ್ಥಿಕಾರಿನಲ್ಲಿ ಇವಿಎಂ ಪತ್ತೆ: ಆರೋಪ ನಿರಾಕರಿಸಿದ ಬಿಜೆಪಿ ಅಭ್ಯರ್ಥಿ

ಪ್ರಧಾನ ಮತಗಟ್ಟೆಗಳಲ್ಲಿ ನೊಂದಾಯಿತರಾದ ಮತದಾರರಿಗೆ ಉಪ ವಿಭಾಗದ ಮತಗಟ್ಟೆಗಳಲ್ಲಿ ಮತ ಚಲಾವಣೆ ಮಾಡುವುದಕ್ಕೆ ಅವಕಾಶ ನೀಡಿರುವುದಾಗಿ ಮತಗಟ್ಟೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Assam: 6 Officers Suspended After 181 Votes Has Been Cast At 90 Voters Booth

ಆರು ಚುನಾವಣಾ ಅಧಿಕಾರಿಗಳು ಅಮಾನತು:

ಅಸ್ಸಾಂನಲ್ಲಿ ಚುನಾವಣಾ ಮತದಾನದಲ್ಲಿ ಲೋಪದೋಷ ಕಂಡು ಬಂದಿರುವ ಹಿನ್ನೆಲೆ ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ವಿಭಾಗೀಯ ಅಧಿಕಾರಿ ಸೀಖೋಸಿಯಮ್ ಲಾಂಗುಮ್, ಹಿರಿಯ ಅಧಿಕಾರಿ ಪ್ರಹ್ಲಾದ್ ರಾಯ್, ಮತಗಟ್ಟೆ ಅಧಿಕಾರಿ ಪರಮೇಶ್ವರ ಚರಂಗ್ಸಾ, ಮತಗಟ್ಟೆಯ ಎರಡನೇ ಅಧಿಕಾರಿ ಸ್ವರಾಜ್ ಕಾಂತಿ ದಾಸ್, ಮತ್ತು 3ನೇ ಮತಗಟ್ಟೆ ಅಧಿಕಾರಿ ಲಾಲ್ಜಮ್ಲೊ ಥೀಕ್ ಅವರನ್ನು ಅಮಾನತುಗೊಳಿಸಲಾಗಿದೆ.

ಅಸ್ಸಾಂನಲ್ಲಿ ಎರಡು ಕ್ಷೇತ್ರಗಳಿಗೆ ಮರು ಮತದಾನ:

ಹಾಫ್ಲೊಂಗ್ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತದಾನ ನಡೆಸುವುದಕ್ಕೆ ಆಯೋಗ ತೀರ್ಮಾನಿಸಿದೆ. ಅಸ್ಸಾಂನಲ್ಲಿ ಇದು ಮರು ಮತದಾನ ಘೋಷಣೆಯಾದ ಎರಡನೇ ಕ್ಷೇತ್ರವಾಗಿದೆ. ಈ ಹಿಂದೆ ರತಾಬರಿ ಕ್ಷೇತ್ರದ ಚುನಾವಣೆ ನಂತರ ಇವಿಎಂ ಯಂತ್ರವನ್ನು ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಸಾಗಾಟ ಮಾಡಿರುವ ಚಿತ್ರವು ಬಹಿರಂಗವಾಗಿತ್ತು. ಈ ಹಿನ್ನೆಲೆ ಮರು ಮತದಾನಕ್ಕೆ ಆಯೋಗವು ಆದೇಶಿಸಿತ್ತು.

ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್.27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಏಪ್ರಿಲ್.1ರಂದು 39 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಏಪ್ರಿಲ್ 6ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂತಿಮವಾಗಿ ಮೇ.2ರಂದು ಫಲಿತಾಂಶ ಹೊರ ಬೀಳಲಿದೆ.

English summary
Assam Assembly Election 2021: 6 Officers Suspended After 181 Votes Has Been Found At 90 Voters Poll Booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X