ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

58 ಮತದಾರರ ಕಷ್ಟ ಆಲಿಸಲು 24 ಕಿಮೀ ನಡೆದ ಮುಖ್ಯಮಂತ್ರಿ

|
Google Oneindia Kannada News

ಗುವಾಹಟಿ, ಸೆಪ್ಟೆಂಬರ್ 11: ಜನಪ್ರತಿನಿಧಿಗಳು ಎಂದರೆ ಕೇವಲ ಚುನಾವಣೆ ಬಂದಾಗ ಮತ ಕೇಳಲು ಬರುತ್ತಾರೆ, ಬಳಿಕ ಬರುವುದು ಮತ್ತೊಂದು ಚುನಾವಣೆ ಬಂದಾಗಲೇ ಎಂದು ಎಷ್ಟೋ ಮಂದಿ ಮೂಗುಮುರಿಯುವವರಿದ್ದಾರೆ.

ಆದರೆ ಮತದಾರರನ್ನು ಸದಾ ನೋಡಿಕೊಳ್ಳುವ ಜನಪ್ರತಿನಿಧಿಗಳು ಕೂಡ ಇದ್ದಾರೆ. ಅದಕ್ಕೆ ನಿದರ್ಶನವೂ ನಮ್ಮ ಕಣ್ಣಮುಂದಿದೆ.

ಆದರೆ ಅದಕ್ಕಿಂತಲೂ ಅಪರೂಪದ ಉದಾಹರಣೆಯಾಗಿದ್ದಾರೆ ಅರುಣಾಚಲದ ಮುಖ್ಯಮಂತ್ರಿ ಪೆಮಾ ಖಂಡು. ಇವರು ಕ್ಷೇತ್ರದ ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ. ನಡೆದು ಹೋಗಿದ್ದಾರೆ. ಅಲ್ಲಿ ಇರುವುದು ಕೇವಲ 58 ಮಂದಿ ಮಾತ್ರ.

Arunachal CM Treks To Meet Residents Of Remote Village

ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಕುಗ್ರಾಮವಾಗಿರುವ ಲುಗುಥಾಂಗ್‌ ಎಂಬ ಗ್ರಾಮಕ್ಕೆ ಇವರು ಭೇಟಿ ನೀಡಿದ್ದಾರೆ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದ ಇಲ್ಲಿರುವುದು ಕೇವಲ 10 ಕುಟುಂಬ ಮತ್ತು ಅದರ 58 ಸದಸ್ಯರು.

ತವಾಂಗ್‌ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಪೆಮಾ ಖಂಡು ಅವರು, ಖುದ್ದು ಜನರ ಕಷ್ಟಸುಖವನ್ನು ಅರಿಯಲು 24 ಕಿ.ಮೀ ನಡೆದು ಮಾದರಿಯಾಗಿದ್ದಾರೆ.

ಬಳಿಕ ಅಲ್ಲಿಯೇ 2 ದಿನ ಕಳೆದು ಅವರ ಸಮಸ್ಯೆಯನ್ನು ಆಲಿಸಿ ಮರಳಿದ್ದಾರೆ. ಈ ವೇಳೆ ಅವರೊಂದಿಗೆ ಕೇವಲ ಒಬ್ಬ ಭದ್ರತಾ ಮತ್ತು ಕೆಲ ಗ್ರಾಮಸ್ಥರು ಮಾತ್ರವೇ ಇದ್ದರು. ಈ ವಿಷಯವನ್ನು ಸ್ವತಃ ಖಂಡು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲ. ಜತೆಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಜನರ ಸಂಕಷ್ಟಗಳನ್ನು ಖುದ್ದು ಪರಿಶೀಲನೆ ಮಾಡಲು ಬಯಸಿದ ಮುಖ್ಯಮಂತ್ರಿಗಳು ಸುಮಾರು 11 ಗಂಟೆ ಸತತವಾಗಿ ನಡೆದು 24 ಕಿ.ಮೀ ದೂರವನ್ನು ಕ್ರಮಿಸಿ ಗ್ರಾಮವನ್ನು ತಲುಪಿದ್ದಾರೆ.

English summary
Arunachal Pradesh chief minister Pema Khandu trekked 24 kilometres for nearly 11 hours to meet residents of a remote village located at a height of 14,500 feet above sea level earlier this week - a feat very few CMs have undertaken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X