ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಯ ಸೂಕ್ಷ್ಮ ಮಾಹಿತಿ ರವಾನೆ, ಪಾಕ್ ನ ಶಂಕಿತ ಗೂಢಚಾರ ಸೇನೆ ವಶಕ್ಕೆ

|
Google Oneindia Kannada News

ಗುವಾಹತಿ, ಜನವರಿ 10: ಅರುಣಾಚಲಪ್ರದೇಶದ ಇಂಡೋ-ಚೀನಾ ಗಡಿಯ ಮುಂಚೂಣಿ ಸೇನಾ ನೆಲೆಯಲ್ಲಿ ಸರಕು ಸಾಗಿಸುವ ಕೂಲಿಯಾಗಿ ಕೆಲಸ ಮಾಡುತ್ತಿದ್ದ ಶಂಕಿತ ಪಾಕಿಸ್ತಾನಿ ಗೂಢಚಾರನನ್ನು ಸೇನಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಮೂಲಗಳು ತಿಳಿಸಿವೆ.

ತಿನಿಸುಕಿಯಾ ಜಿಲ್ಲೆಯ ಅಂಬಿಕಾಪುರ ಹಳ್ಳಿಯ ನಿರ್ಮಲ್ ರಾಯ್ ಆರೋಪಿಯಾಗಿದ್ದು, ಅರುಣಾಚಲಪ್ರದೇಶದ ಅಂಜಾವ್ ನಲ್ಲಿ ಕಳೆದ ಅಕ್ಟೋಬರ್ ನಿಂದ ಕೂಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ದುಬೈನಲ್ಲಿದ್ದ ಪಾಕಿಸ್ತಾನಿ ವ್ಯಕ್ತಿಗೆ ಸೇನೆಯ ಸೂಕ್ಷ್ಮ ವಿಚಾರಗಳ ಮಾಹಿತಿಯನ್ನು ನಿರ್ಮಲ್ ರಾಯ್ ರವಾನಿಸುತ್ತಿದ್ದ. ರಾಯ್ ದುಬೈನಲ್ಲಿ ಬರ್ಗರ್ ಶಾಪ್ ನಲ್ಲಿ ಕೆಲಸ ಮಾಡುವಾಗ ಪಾಕಿಸ್ತಾನಿ ಪರಿಚಯವಾಗಿದ್ದ ಎಂದು ಮೂಲಗಳು ತಿಳಿಸಿವೆ.

ಭಾರತದ ಬ್ರಹ್ಮೋಸ್ ಗೆ ಆತಂಕ ತಂದೊಡ್ಡಲಿರುವ ಕ್ಷಿಪಣಿ ಪಾಕ್ ಗೆ ಸೇರ್ಪಡೆ!ಭಾರತದ ಬ್ರಹ್ಮೋಸ್ ಗೆ ಆತಂಕ ತಂದೊಡ್ಡಲಿರುವ ಕ್ಷಿಪಣಿ ಪಾಕ್ ಗೆ ಸೇರ್ಪಡೆ!

ಸೇನೆಯ ಉನ್ನತ ಮೂಲಗಳ ಪ್ರಕಾರ, ಆರೋಪಿಯ ಸೋದರ ಕೂಡ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೇನೆಯ ಸೂಕ್ಷ್ಮ ಪ್ರದೇಶಗಳ ಫೋಟೋ ತೆಗೆಯುವುದು ಹಾಗೂ ವಿಡಿಯೋ ಮಾಡುವ ಬಗ್ಗೆ ದುಬೈನ ವ್ಯಕ್ತಿ ನಿರ್ಮಲ್ ಗೆ ತರಬೇತಿ ನೀಡಿದ್ದ. ಆ ನಂತರ ಅರುಣಾಚಲಪ್ರದೇಶಕ್ಕೆ ಹಿಂತಿರುಗಿದ್ದ ಆರೋಪಿ ಸೇನೆಯಲ್ಲಿ ಕೂಲಿಯಾಗಿ ಸೇರಿದ್ದ.

Alleged Pakistan spy working as porter in army detained

ವಾಟ್ಸ್ ಅಪ್ ಹಾಗೂ ವಿಡಿಯೋ ಕಾಲಿಂಗ್ ಮೂಲಕ ನಿರ್ಮಲ್ ರಾಯ್ ಮಾಹಿತಿ ರವಾನಿಸಿದ್ದಾನೆ ಎಂಬ ಗುಮಾನಿ ಅಧಿಕಾರಿಗಳಿದೆ ಇದೆ. ಗಡಿಯಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿ, ಸೇನಾ ನಿಯೋಜನೆ ವಿವರ, ಸೇತುವೆ, ಶಸ್ತ್ರಾಸ್ತ್ರಗಳ ಮಾಹಿತಿಯನ್ನು ರವಾನಿಸಿರಬಹುದು ಎಂದು ಶಂಕಿಸಲಾಗಿದೆ.

ಜೋಳಿಗೆ ಹಿಡಿದ ಇಮ್ರಾನ್ ಖಾನ್ 'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?ಜೋಳಿಗೆ ಹಿಡಿದ ಇಮ್ರಾನ್ ಖಾನ್ 'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?

ಸೇನಾ ಮುಂಚೂಣಿ ನೆಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಥಳೀಯರನ್ನು ಸರಕು ಸಾಗಣೆಗಾಗಿ ನೇಮಕ ಮಾಡುವ ಪದ್ಧತಿ ಇದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ದೂರು ದಾಖಲಿಸಿದ್ದಾರೆ.

English summary
Military authorities have detained a suspected spy who was working as a porter at a forward base of the army along the Indo-China border in Arunachal Pradesh, sources said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X