ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೊಧ್ಯೆ ತೀರ್ಪಿನ ನಂತರ ದೇವಾಲಯಕ್ಕೆ ತೆರಳಿದ ಸಿಜೆಐ, ಪತ್ನಿ: ವಿಡಿಯೋ ವೈರಲ್

|
Google Oneindia Kannada News

ಗುವಾಹಟಿ, ನವೆಂಬರ್ 11: ಅಯೋಧ್ಯೆ ಭೂ ವಿವಾದದ ಕುರಿತು ಶನಿವಾರ ಐತಿಹಾಸಿ ತೀರ್ಪು ನೀಡಿದ ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, ಭಾನುವಾರ ಅಸ್ಸಾಮಿನ ಗುವಾಹಟಿಯ ಕಾಮಕ್ಯ ದೇವಾಯಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪತ್ನಿ ಜೊತೆ ದೇವರ ದರ್ಶನ ಪಡೆಯುತ್ತಿರುವ ರಂಜನ್ ಗೊಗೊಯ್ ಅವರ ವಿಡಿಯೊ ವೈರಲ್ ಆಗಿದ್ದು, ಅಯೋಧ್ಯೆ ತೀರ್ಪಿನ ನಂತರ ಗೊಗೊಯ್ ಶ್ರೀರಾಮನ ದರ್ಶನಕ್ಕೆ ತೆರಳಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ರವಾನೆಯಾಗುತ್ತಿದೆ. ಆದರೆ ಅವರು ತೆರಳಿದ್ದು ಶ್ರೀರಾಮ ದರ್ಶನಕ್ಕಲ್ಲ, ಬದಲಾಗಿ ಗುವಾಹಟಿಯಲ್ಲಿರುವ ಕಾಮಕ್ಯ ದೇವಾಲಯಕ್ಕೆ ಎಂಬುದು ನಂತರ ತಿಳಿದುಬಂದಿದೆ.

ನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ಹೊರಬೀಳಲಿರುವ ಐತಿಹಾಸಿಕ ತೀರ್ಪುಗಳುನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ಹೊರಬೀಳಲಿರುವ ಐತಿಹಾಸಿಕ ತೀರ್ಪುಗಳು

ಅಸ್ಸಾಂ ನ ಮಚ್ಕೌಡ ಎಂಬಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗೊಗೊಯ್, ನಂತರ 51 ಶಕ್ತಿಪೀಠಗಳಲ್ಲೊಂದಾದ ಕಾಮಕ್ಯ ದೇವಾಲಯಕ್ಕೆ ತೆರಳಿದ್ದರು.

ನವೆಂಬರ್ 17 ರಂದು ತಮ್ಮ ಸೇವೆಯಿಂದ ನಿವೃತ್ತರಾಗಲಿರುವ ರಂಜನ್ ಗೊಗೊಯ್ ಅವರು ಅದಕ್ಕೂ ಮುನ್ನ ಇನ್ನಷ್ಟು ಮಹತ್ವದ ತೀರ್ಪು ನೀಡಬೇಕಿದೆ. ಶಬರಿಮಲೆ, ರಫೇಲ್ ಡೀಲ್ ಸೇರಿದಂಮತೆ ಮಹತ್ವದ ತೀರ್ಪುಗಳನ್ನು ಗೊಗೊಯ್ ನೀಡಬೇಕಿದೆ.

After Landmark Judgement, CJI Ranjan Gogoi visits Temple With Wife

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಗೊಗೊಯ್ ಅವರಿಗೆ Z+ ಭದ್ರತೆ ನೀಡಲಾಗಿದ್ದು, ಕೆಲವು ದಿನಗಳ ಕಾಲ ಅದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.

English summary
After Land mark Judgement on Ayodhya Case, Chief Justice Ranjan Gogoi with his Wife Visits Kamakhya Temple in Guwahati, Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X